ಅಬಕಾರಿ ದಾಳಿ: ಮದ್ಯ ವಶ
ಯಾದಗಿರಿ: ತಾಲೂಕಿನ ನೀಲಹಳ್ಳಿ ಮತ್ತು ಮುನಗಲ್ ಗ್ರಾಮದಲ್ಲಿ ವಲಯ ನಿರೀಕ್ಷಕ ವಿಠಲರಾವ್ ಎಂ. ವಾಲಿ ನೇತಣತ್ವದಲ್ಲಿ ಎರಡು ಪ್ರತ್ಯೇಕ ಅಬಕಾರಿ ದಾಳಿ ನಡೆಸಿ ಸುಮಾರು 11,500 ರೂ. ಮೌಲ್ಯದ 44 ಲೀ. ಮದ್ಯ ಹಾಗೂ 5 ಲೀ. ಬೀರ್ ವಶಪಡಿಸಿಕೊಳ್ಳಲಾಗಿದೆ. ನೀಲಹಳ್ಳಿ ಗ್ರಾಮದ ಸಿದ್ದಪ್ಪ ಕವಡಿ ಮತ್ತು ಮುನಗಲ್ ಗ್ರಾಮದ ಹಣಮಂತ ಸಂಗವಾರದೊರ್ ಎಂಬುವವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಬಕಾರಿ ಉಪ ನಿರೀಕ್ಷಕರಾದ ನೂರ ಮಹ್ಮದ್, ಯಾದಗಿರಿ ವಲಯ ಅಬಕಾರಿ ಉಪ ನಿರೀಕ್ಷಕಿ ಸರಸ್ವತಿ ರವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಲಾರಿ ಡಿಕ್ಕಿ: ಚಾಲಕ ಸಾವು
ಹುಮನಾಬಾದ್: ತಾಲೂಕಿನ ಹುಡಗಿ ಸಮೀಪದ ಚಿಟಗುಪ್ಪ ತಿರವು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳ ಮಧ್ಯ ಪರಸ್ಪರ ಡಿಕ್ಕಿಯಿಂದ ಲಾರಿಗಳಿಗೆ ಬೆಂಕಿ ಹತ್ತಿ, ಚಾಲಕನೊಬ್ಬನು ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿರುವ ಘಟನೆ ಜರುಗಿದೆ. ಮೃತ ವ್ಯಕ್ತಿಯ ಮಾಹಿತಿ ತಿಳಿದು ಬಂದಿಲ್ಲ. ಸೋಲಾಪುರದಿಂದ ಹೈದ್ರಾಬಾದ್ ಕಡೆಗೆ ಸಾಗುತ್ತಿದ್ದು, ಹೈದ್ರಾಬಾದ್ನಿಂದ ಪಟ್ಟಣದ ಕಡೆಗೆ ಬರುತ್ತಿದ್ದ ಲಾರಿಗಳ ಡಿಕ್ಕಿಯಿಂದ ಬೆಂಕಿ ಹತ್ತಿಕೊಂಡು ಎರಡು ಲಾರಿಗಳು ಸುಟ್ಟಿವೆ. ಲಾರಿಯಲ್ಲಿದ್ದ ಚಾಲಕ ಬೆಂಕಿಗೆ ಸಂಪೂರ್ಣ ಸುಟ್ಟು ಹೋಗಿದ್ದಾನೆ. ಇನ್ನೊಂದು ಲಾರಿಯಲ್ಲಿದ್ದ ಉಮರ್ಗಾ ಮೂಲದ ಆನಂದ ಎಂಬುವನಿಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕತ್ಸೆಗಾಗಿ ಸೋಲಾಪುರಕ್ಕೆ ದಾಖಲಿಸಲಾಗಿದೆ. ಸಂಚಾರಿ ಠಾಣೆ ಪಿಎಸ್ಐ ಜಿ.ಎಂ. ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ, ಅಗ್ನಿ ಶಾಮಕ ಸಿಬ್ಬಂದಿಯನ್ನು ಕರೆಯಿಸಿ ಬೆಂಕಿ ಆರಿಸಲಾಯಿತು. ಸುಮಾರು ಅರ್ಧ ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಬೆಂಕಿಯ ತೀವ್ರತೆ ಹೆಚ್ಚಿರುವುದರಿಂದ ಯಾವುದೇ ವಾಹನಗಳು ಒಡಾಡಲಿಲ್ಲ. ಈ ಕುರಿತು ಪಟ್ಟಣದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

