ಗುಲ್ಬರ್ಗಾ

ಚುನಾವಣೆ ಮುಗಿದ್ರೂ ಕಚೇರಿಗಳಿಗೆ ಅಧಿಕಾರಿಗಳ ಚಕ್ಕರ್

Published On :

ಕನ್ನಡಪ್ರಭ ವಾರ್ತೆ ್ಣ ಆಳಂದ ್ಣ ಏ.19
ಪಟ್ಟಣದ ಪುರಸಭೆಯಿಂದ ಪೂರೈಕೆಯಾಗುವ ಕುಡಿವ ನೀರು5 ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದು ಅಟುಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
  ನೀರು ಪೂರೈಸುವ ಅಮರ್ಜಾ ಅಣೆಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದ ನೀರಿದ್ದರೂ ಪಂಪ್‌ಸೆಟ್, ದುರಸ್ತಿ ಮತ್ತು ಹೊಸ ಪಂಪ್ ಅಳವಡಿಕೆಯ ಹೆಸರಿನಲ್ಲಿ ಒಂದೂವರೆ ವರ್ಷದಿಂದ 5 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಈ ಕುರಿತು ಸರ್ಕಾರಕ್ಕೆ ಮೇಲಧಿಕಾರಿಗಳಿಗೆ ನಾಗರಿಕರು ಅನೇಕ ಬಾರಿ ದೂರಿದರು ಪ್ರಯೋಜನವಾಗಿಲ್ಲ.
  ಆಗಾಗ ಬದಲಾಗುವ ಮುಖ್ಯಾಧಿಕಾರಿಗಳು, ಕಚೇರಿಗೆ ಬಾರದ ಸಿಬ್ಬಂದಿ, ಬಂದರೂ ಬೀದಿ ಬದಿಗಳಲ್ಲೇ ಓಡಾಡುತ್ತಾ ದಿನ ದೂಡುತ್ತಾರೆ. ಸಾರ್ವಜನಿಕರ ಕುಂದುಕೊರತೆ ಕೇಳುವವರೇ ಇಲ್ಲದಂತಾಗಿದೆ. ಇದು ಹೀಗೆ ಮುಂದುವರಿದರೆ ಸಾರ್ವಜನಿಕರು ರೊಚ್ಚಿಗೆದ್ದು ಪ್ರತಿಭಟನೆ ಕೈಗೊಳ್ಳುವ ಕಾಲ ದೂರವಿಲ್ಲ ಎಂದು ಹಲವು ಸಂಘಟನೆಗಳು ಈಗಾಗಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಜನರ ತುರ್ತು ಕೆಲಸ ಕಾರ್ಯಗಳನ್ನು ಮಾಡುವುದಕ್ಕಾಗಿ ಸಕಾಲ, ಕಂಪ್ಯೂಟರೀಕರಣ ತಂತ್ರ ಬಳಕೆಯಾದರೂ ಜನರ ಪರದಾಟ ಮತ್ತು ದಿನ ದೂಡುವುದು ಮಾತ್ರ ನಿಂತಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ತಪ್ಪದ ಅಲೆದಾಟ: ವರ್ಷದುದ್ದಕ್ಕೂ ಹಲವು ಜಯಂತಿ, ರಜೆ, ಲೋಕಸಭೆ, ವಿಧಾನಸಭೆ ಚುನಾವಣೆ ನೀತಿ ಸಂಹಿತೆಗಳು ಎದುರಾಗಿ ಎರಡ್ಮೂರು ತಿಂಗಳುಗಟ್ಟಲೆ ಅರ್ಜಿಗಳ ವಿಲೇವಾರಿ ಆಗದೆ ಬಾಕಿ ಉಳಿದುಕೊಳ್ಳುತ್ತಿವೆ. ಒಂದೆರಡು ದಿನಗಳಲ್ಲಿ ಆಗಬೇಕಾಗದ ಕೆಲಸಗಳಿಗೆ ಆರೇಳು ತಿಂಗಳು ಅಲೆಯುವುದು ಜನರಿಗೆ ನುಂಗದ ತುತ್ತಾಗಿ ಪರದಾಟಕ್ಕೆ ಕಾರಣವಾಗಿದ್ದು, ಸಂಬಂಧಿತರ ಮೇಲೆ ಹಿಡಿಶಾಪಕ್ಕೆ ಕಾರಣವೂ ಆಗಿದೆ.
ಸಹಿ ಹಾಕಿ ಹೊರಕ್ಕೆ..: ಚುನಾವಣೆ ದಿನಾಂಕ ಪ್ರಕಟವಾದ ಮೇಲೆ ಮತ್ತು ಮುಗಿದ ಮೂರ್ನಾಲ್ಕು ದಿನಗಳಾದರೂ ಕಚೇರಿಯತ್ತ ಸುಳಿಯದೆ ಅಧಿಕಾರಿಗಳು ದೂರವಾಗಿಯೇ ಉಳಿದು ಹಾಜರಿ ಸಹಿ ಹಾಕಿ ಮದುವೆ, ಜಾತ್ರೆ ಸಭೆಯ ಹೆಸರಿನಲ್ಲಿ ಓಡಾಡತೊಡಗಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಮುಗಿದ ಲೋಕಸಭಾ ಚುನಾವಣೆಯ ಇಡೀ ಪ್ರಕ್ರಿಯೆ ಆರಂಭದಿಂದ ಹಿಡಿದ ಅಂತ್ಯದವರೆಗಿನ ಚಟುವಟಿಕೆಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ಕೊಂಚವೂ ನಡೆದಿಲ್ಲ.
ಧೂಳು ತಿನ್ನುತ್ತಿರುವ ಅರ್ಜಿಗಳು: ಕಲಂ 371(ಜೆ) ಅನ್ವಯ ಮೀಸಲಾತಿಯ ದಾಖಲೆಗೆ ಸಲ್ಲಿಕೆಯಾದ ಅರ್ಜಿ, ಭೂ ಸರ್ವೆ, 11 ಇ-ನಕ್ಷೆ, ಮುಟೇಶನ್ ಜಮೀನು ವರ್ಗಾವಣೆ, ಆದಾಯ ಜಾತಿ ಪತ್ರ, ಭೂಮಿ ಕೇಂದ್ರ, ರೇಷನ್ ಕಾರ್ಡ್ ಅರ್ಜಿ ಸೇರಿ ಹಲವು ಅರ್ಜಿಗಳು ಒಂದಿಲ್ಲೊಂದು ಕಾರಣದಿಂದ ಹಿಂದೆ ಬೀಳುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.