ಶಿಸ್ತುಬದ್ಧ ಅಧ್ಯಯನದಿಂದ ಉತ್ತಮ ಭವಿಷ್ಯ
ಕನ್ನಡಪ್ರಭ ವಾರ್ತೆ ಶಹಾಪುರ ಏ.22
ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೆ ಶಿಸ್ತುಬದ್ಧವಾಗಿ ಭೀರ ಅಧ್ಯಯನದ ಮಾಡಿದರೆ ಮಾತ್ರ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ. ಈ ಪಕ್ರಿಯೆಯಲ್ಲಿ ಗುರಿ ಮತ್ತು ಜ್ಞಾನ ನೀಡಿ ಉತ್ತಮ ಮಾರ್ಗದರ್ಶನ ತೋರುವ ಗುರುಗಳ ಪಾತ್ರವೂ ಮಹತ್ವದ್ದು ಎಂದು ಗುಲ್ಬರ್ಗ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಪ್ರೊ. ಭೀಮಣ್ಣ ಘನಾತೆ ಅಭಿಪ್ರಾಯಪಟ್ಟರು.
ಪಟ್ಟಣದ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪದವಿ ಶಿಕ್ಷಣ ಎಂದರೆ ಕೇವಲ ಪದವಿ ಪ್ರಮಾಣ ಪತ್ರ ಪಡೆಯುವುದಲ್ಲ. ಅದು ನಮ್ಮ ಜ್ಞಾನದ ಹರವು ಹೆಚ್ಚಿಸಿಕೊಂಡು ಬದುಕನ್ನು ರೂಪಿಸಿಕೊಳ್ಳುವುದಾಗಿದೆ ಎಂದು ಹಲವು ಇತಿಹಾಸದ ನಿದರ್ಶನಗಳ ಮೂಲಕ ತಿಳಿಸಿಕೊಟ್ಟರು.
ಸಮಾಜಕ್ಕೆ ಮಾದರಿಯಾಗಿ: ಚರಬಸವೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಗುರುಬಸಯ್ಯ ಗದ್ದುಗೆ ಮಾತನಾಡಿ, ಇಂದಿನ ಆಧುನಿಕ ಅನೇಕ ಮಾಧ್ಯಮಗಳು ಮತ್ತು ಜಾಗತೀಕರಣ ಯುವಕರನ್ನು ಅಡ್ಡದಾರಿಗೆ ಇಳಿಸುತ್ತಿವೆ. ಇದರಿಂದ ಮಾನವೀಯ ಮೌಲ್ಯಗಳು ಅಧಃಪತನಗೊಂಡಿವೆ. ಆದ್ದರಿಂದ ವಿದ್ಯಾರ್ಥಿಗಳು ಗುರು- ಹಿರಿಯರ, ತಂದೆ- ತಾಯಿಯ ಉತ್ತಮ ಮಾರ್ಗದರ್ಶನದೊಂದಿಗೆ ಆದರ್ಶ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶಿವಲಿಂಗಣ್ಣ ಆರ್. ಸಾಹು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಉಪನ್ಯಾಸಕ ಸೈಯದ್ ಚಾಂದಪಾಶ, ಸಿದ್ದಣ್ಣ ನೀರಲಗಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸುರೇಖಾ ಮತ್ತು ಜಯಶ್ರೀ ಹತ್ತಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕ ಸತೀಶ ರಡ್ಡಿ, ರೇವಣಸಿದ್ದೇಶ್ವರ ಅಂಗಡಿ, ಗಂಗಣ್ಣ ಹೊಸ್ಮನಿ, ಸಂಗಣ್ಣ ದಿಗ್ಗಿ, ಶಿವಾನಂದ ಗುಳಗಿ, ಸುರೇಶ ಮಡ್ಡಿ, ಚೆನ್ನಬಸಪ್ಪಗೌಡ, ಆನಂದಕುಮಾರ, ಶುಭಲಕ್ಷ್ಮಿ ಬಬಲಾದಿ, ಶಶಿಕಲಾ ಹಿರೇಮಠ, ವಿದ್ಯಾರ್ಥಿನಿಯರ ಪಾಲಕ ಪೋಷಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಹಣಮಂತಿ ಗುತ್ತೇದಾರ ದೇವದುರ್ಗ ಕಾರ್ಯಕ್ರಮ ನಿರೂಪಿಸಿದರು. ಸಾವಿತ್ರಿ ದರ್ಶನಾಪುರ ಪ್ರಾರ್ಥಿಸಿದರು. ಪ್ರಭಾವತಿ ಸ್ವಾಗತಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

