ವಡಗೇರಾದಲ್ಲಿ ಜ್ಞಾನದಾಸೋಹ ಕಾರ್ಯಕ್ರಮ
ಯಾದಗಿರಿ: ಶಿಷ್ಯರು ಗುರುಗಳ ಮಧ್ಯೆ ಉತ್ತಮ ಸಂಬಂಧ ಒಡನಾಟ ಇಟ್ಟುಕೊಂಡರೆ ಆಶ್ರಮ ಮತ್ತು ಮಠಗಳು ಅಭಿವೃದ್ಧಿ ಹೊಂದಿ ಭಕ್ತಾಧಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಬೇಕು ಎಂದು ಜೇವರ್ಗಿ ತಾಲೂಕಿನ ಗಂವ್ಹಾರದ ಸೋಮನಾಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಭಕ್ತರಿಗೆ ಆರ್ಶೀವಚನ ನೀಡಿದರು. ಶಹಾಪುರ ತಾಲೂಕಿನ ವಡಗೇರಾದ ಶಂಕರಲಿಂಗ ಬ್ರಹ್ಮ ವಿದ್ಯಾಶ್ರಮದಲ್ಲಿ ಆಯೋಜಿಸಿದ್ದ ಜ್ಞಾನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೋನಳ್ಳಿ ಬ್ರಹ್ಮನಂದಾ ಸ್ವಾಮೀಜಿ ಮಾತನಾಡಿದರು. ಮಠದ ಶರಣ ಸೋಮಲಿಂಗಪ್ಪ ಗೊಂದೆನೂರ್ ನೇತೃತ್ವ ವಹಿಸಿದ್ದರು. ದೇವದುರ್ಗ ಕಣ್ಣೂರಮಠದ ಸಿದ್ಧಲಿಂಗ ಶಿವಯೋಗಿ ಸ್ವಾಮೀಜಿ, ನೀಲಂಕಠರಾಯ ಸ್ವಾಮೀಜಿ, ಲಿಂಗಣ್ಣ ತಾತಾ ಗೊಂದೆನೋರ್, ಕೆಎಂಎಫ್ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ್, ಅಮೀನರೆಡ್ಡಿ, ಕಾಡಂಗೇರಾ ದೇಸಾಯಿ, ಭೀಮಣ್ಣಗೌಡ ಮಳ್ಳಳ್ಳಿ, ದೇವಿಂದ್ರಪ್ಪ ವಿಶ್ವಕರ್ಮ, ಸೂಗಪ್ಪಗೌಡ ತೆಗ್ಗಿನಮನಿ, ಮೋನಪ್ಪ ವಿಶ್ವಕರ್ಮ, ಬಸವರಾಜ ಕುಣಚಿ, ಕರವೇ ಹೋಬಳಿ ಘಟಕ ಅಧ್ಯಕ್ಷ ಶಿವು ಕೊಂಕಲ್, ಶಿವಣ್ಣ ಕರಕಳ್ಳಿ ಸೇರಿದಂತೆ ವಡಗೇರಾ ಸುತ್ತಮುತ್ತಲಿನ ಕಾಡಂಗೇರಾ, ಕೋನಳ್ಳಿ ಅನೇಕ ಗ್ರಾಮಗಳಿಂದ ನೂರಾರು ಭಕ್ತರು ಜ್ಞಾನದಾಸೋಹದಲ್ಲಿ ಪಾಲ್ಗೊಂಡಿದ್ದರು.
ವೈಭವದ ಶ್ರೀನಿವಾಸ ಕಲ್ಯಾಣೋತ್ಸವ
ಗುಲ್ಬರ್ಗ: ಇಲ್ಲಿನ ಬಿದ್ದಾಪುರ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶನಿವಾರ ಸಂಜೆ 3 ಗಂಟೆಗಳ ಕಾಲ ಶ್ರೀನಿವಾಸ ಕಲ್ಯಾಣೋತ್ಸವ ಬಲು ಅದ್ಧೂರಿಯಾಗಿ ನಡೆಯಿತು. ಪಂಡಿತರಾದ ಗೋಪಾಲಾಚಾರ್ಯ ಅಕಮಂಚಿ ಅವರ ನೇತೃತ್ವದಲ್ಲಿ ನಡೆದ ಕಲ್ಯಾಣೋತ್ಸವ ಶೋಭಾಯಾತ್ರೆಯೊಂದಿಗೆ ಆರಂಭವಾಯ್ತು. ಸುಮಂಗಲಿಯರು ಸಾವಿರರು ಸಂಖ್ಯೆಯಲ್ಲಿ ಸೇರುವ ಮೂಲಕ ಶ್ರೀನಿವಾಸ- ಪದ್ಮಾವತಿಯರ ಉತ್ಸವ ಮೂರ್ತಿಗಳನ್ನು ಶೃಂಗಾರ ಮಾಡಿ ಕಲ್ಯಾಣೋತ್ಸವದಲ್ಲಿ ಸ್ತೋತ್ರಾದಿಗಳಿಂದ ಕೊಂಡಾಡಿದರು. ಭಜನಾ ಮಂಡಳಿಯ ಮುಖಂಡರಾದ ಶೋಭಾ ದೇಸಾಯಿ, ಕಮಲಾಪುರಕರ್ ಸೇರಿದಂತೆ ಅನೇಕರು ಮುಂಚೂಣಿಯಲ್ಲಿದ್ದರು. ಬಿದ್ದಾಪುರ ರಾಯರ ಮಠದ ವಿಚಾರಣಕರ್ತರಾದ ನವಲಿ ಕೃಷ್ಣಾಚಾರ್ಯರ ಉಸ್ತುವಾರಿಯಲ್ಲಿ ಕಲ್ಯಾಣೋತ್ಸವದಲ್ಲಿ ವಿವಾಹದ ಸಕಲ ಶಾಸ್ತ್ರಗಳನ್ನು ಮಾಡುವ ಮೂಲಕ ಪದ್ಮಾವತಿ- ಶ್ರೀನಿವಾಸ ದೇವರಿಗೆ ಅಕ್ಷತಾರೋಪಣ ಮಾಡಲಾಯ್ತು. ಬಿದ್ದಾಪುರ ಬಡಾವಣೆಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

