ಕಾರ್ಮಿಕರ ಬೇಡಿಕೆಗೆ ಸ್ಪಂದಿಸಿ
ಆಳಂದ: ಕಾರ್ಖಾನೆ ಕಾರ್ಮಿಕರ ಮೂಲ ವೇತನ ಸೇರಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಆಡಳಿತ ಮಂಡಳಿಗೆ ಸೂಚನೆ ಕೂಡಲೇ ನೀಡಬೇಕು ಎಂದು ಶಾಸಕ ಬಿ.ಆರ್. ಪಾಟೀಲ ಸರ್ಕಾರಕ್ಕೆ ಒತ್ತಾಯಿಸಿದರು.
ತಾಲೂಕಿನ ಸಹಕಾರಿ ಸಕ್ಕರೆ ಕಾರ್ಖಾನೆ ಗುತ್ತಿಗೆ ಪಡೆದಿರುವ ಎನ್ಎಸ್ಎಲ್ ಶುಗರ್ ಲಿಮಿಟೆಡ್ ಕಂಪನಿಯ ಮುಂದೆ ಕಾರ್ಮಿಕರು ತಮ್ಮ ಬೇಡಿಕೆಗಾಗಿ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದರು.
ವಿಳಂಬ ನೀತಿ: ಯಾವುದೇ ಕಂಪನಿ ತನ್ನ ಕಾರ್ಮಿಕರಿಗೆ ಮೂಲ ಸೌಲಭ್ಯ ಒದಗಿಸಬೇಕು. ಆದರೆ ಕಾರ್ಖಾನೆ ಆಡಳಿತ ಮಂಡಳಿ ಕಾರ್ಮಿಕರ ವೇತನ ಸೇರಿ ಮೂಲ ಸೌಲಭ್ಯಗಳನ್ನು ಒದಗಿಸಲು ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಕೂಡಲೇ ವೇತನ ಸೇರಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ತಾಳ್ಮೆ ಪರೀಕ್ಷೆ ಸರಿಯಿಲ್ಲ: ಕಾರ್ಮಿಕರು ತಮ್ಮ ದುಡಿಮೆಯ ಫಲವನ್ನು ಕೇಳುತ್ತಿದ್ದಾರೆ. ಅವರ ಬೇಡಿಕೆಗಳು ನ್ಯಾಯಯುತವಾಗಿವೆ. ಆಡಳಿತ ಮಂಡಳಿ ಸ್ಪಂದಿಸಬೇಕಾಗಿತ್ತು. ಆದರೆ ಇದುವರೆಗೆ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿರುವುದು, ಕಾರ್ಮಿಕರ ಸಹನೆ ಪರೀಕ್ಷಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು. ಕಾರ್ಖಾನೆಯ ಆಡಳಿತ ಮಂಡಳಿಯ ಮುಖ್ಯಸ್ಥರು ಕಾರ್ಮಿಕರೊಂದಿಗೆ ಸಭೆ ನಡೆಸಿ ಬೇಡಿಕೆ ಕುರಿತು ಚರ್ಚಿಸಬೇಕಾಗಿತ್ತು. ಆದರೆ ಅನಾವಶ್ಯಕ ವಿಳಂಬ ಸರಿಯಲ್ಲ ಎಂದು ಖಂಡಿಸಿದರು.
ಆಯುಕ್ತರ ಗಮನಕ್ಕೆ: ಈ ಕುರಿತು ಜಿಲ್ಲಾಧಿಕಾರಿಗೆ ಕಾರ್ಮಿಕರ ಬೇಡಿಕೆಗೆ ಸ್ಪಂದಿಸುವಂತೆ ಚರ್ಚಿಸಿದ್ದೇನೆ. ಅಗತ್ಯಬಿದ್ದಲ್ಲಿ ಸಂಬಂಧಿತ ಸಚಿವರಿಗೆ ಸಕ್ಕರೆ ಆಯುಕ್ತರ ಗಮನಕ್ಕೆ ತರುವ ಮೂಲಕ ಬೇಡಿಕೆ ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.
ಕಾರ್ಮಿಕ ಸಂಘದ ಅಧ್ಯಕ್ಷ ಕೃಷ್ಣಾ ಟಿಕೋಳೆ, ಪ್ರಧಾನ ಕಾರ್ಯದರ್ಶಿ ಜಿ.ಎಸ್. ಚಕ್ರಪಾಣಿ ಅವರು ಬೇಡಿಕೆ ಕುರಿತು ಶಾಸಕರ ಗಮನಕ್ಕೆ ತಂದರು. ಮುಖಂಡ ಶರಣಬಸಪ್ಪಾ ಕಲಶೆಟ್ಟಿ, ಬಸವರಾಜ ಗವಿ, ಶಾಂತಪ್ಪಾ ಹಳ್ಳಿಖೇಡ, ಮಲ್ಲಿನಾಥ ಪಾಟೀಲ, ಬಸವರಾಜ ಮದಗುಣಕಿ, ನಾಗಣ್ಣಾ ಶಖಾಪುರೆ, ಹಣಮಂತ ಮದಗುಣಕಿ, ಮಹಾಂತಮ್ಮ ವಗ್ಗೆ, ಇಟಾಬಾಯಿ ದೇವ, ಅಣೆಮ್ಮಾ ಉಕ್ಕಳಿ, ಜಗದೇವಪ್ಪಾ ಬಿರಾದಾರ, ಈರಣ್ಣಾ ಉಕ್ಕಳಿ, ಶಾಂತಯ್ಯಸ್ವಾಮಿ, ಸುನೀಲ ಮಠ ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಆಡಳಿತ ಮಂಡಳಿ ಬೇಡಿಕೆಗೆ ಸ್ಪಂದಿಸುವವರೆಗೂ ಧರಣಿ ಮುಂದುವರೆಸಲಾಗುವುದು ಎಂದು ಮುಖಂಡರು ಘೋಷಿಸಿದರು. ಹೀಗಾಗಿ ಸೋಮವಾರ 7ನೇ ದಿನಕ್ಕೆ ಧರಣಿ ಮುಂದುವರೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

