ಗುಲ್ಬರ್ಗಾ

ವರದಕ್ಷಿಣೆ ಕಿರುಕುಳ: ಪ್ರಕರಣ ದಾಖಲು

Published On :

ಗುಲ್ಬರ್ಗ: ಪತಿ ಹಾಗೂ ಕುಟುಂಬದವರು ವರದಕ್ಷಿಣೆ ತರುವಂತೆ ಪೀಡಿಸಿ ಮನೆಯಿಂದ ಹೊರಹಾಕಿದ್ದಾರೆಂದು ನಗರದ ಎಕ್ಬಾಲ್ ಕಾಲೋನಿಯ ಎಂಎಸ್‌ಕೆ ಮಿಲ್ ಪ್ರದೇಶದ ನಿವಾಸಿ ನೌಸೀನ್ ಫಾತೀಮಾ ಗಂಡ ಶಾಬೀರ್ ಪಟೇಲ್ ಶೇಖ್ ದೂರು ದಾಖಲಿಸಿದ್ದಾರೆ.
ಮಾ. 31ರಂದು ತನ್ನ ಪತಿ ಶಾಬೀರ್ ಪಟೇಲ್ ಆತನ ಬಂಧುಗಳು 1 ಲಕ್ಷ ರುಪಾಯಿ ತಾರದೆ ಮನೆಗೆ ಮರಳಬೇಡ ಎಂದು ಎಚ್ಚರಿಸಿ ತನ್ನನ್ನು ಮನೆಯಿಂದ ಹೊರದಬ್ಬಿದ್ದಾರೆ. ಇವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಎಂದು ಸ್ಥಳೀಯ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಜ.24, 2014ರಂದು ನೌಸೀನ್ ಜೊತೆ ಶಾಬೀರ್ ಪಟೇಲ್ ಮದುವೆಯಾಗಿತ್ತು. ಆಗ ಬೈಕ್, 1 ತೊಲೆ ಚಿನ್ನ, 50 ಸಾವಿರ ನಗದನ್ನು ಪತಿಗೆ ಮತ್ತು ನನಗೆ 35 ಗ್ರಾಂ ಚಿನ್ನದ ಒಡವೆ ಹಾಗೂ ಗೃಹೋಪಯೋಗಿ ಸಾಮಾನುಗಳು ಕೊಟ್ಟು ಸುಮಾರು 8 ಲಕ್ಷ ವೆಚ್ಚ ಮಾಡಲಾಗಿತ್ತು.
ಮದುವೆಯಾದ 5 ದಿನದಲ್ಲೇ ಪತಿ ಮತ್ತೆ 1 ಲಕ್ಷ ತರುವಂತೆ ಪೀಡಿಸಿ ಹಲ್ಲೆ ನಡೆಸಿದ್ದಾನೆ. ನನ್ನ ಅತ್ತೆ ಮಾವ ನಾದಿನಿಯರು ಸಹ ಒತ್ತಡ ಹೇರಲಾರಂಬಿಸಿದರು. ಆಗಲೂ ನನ್ನ ತಂದೆ 10 ಗ್ರಾಂ ಚಿನ್ನದುಂಗರ ಕೊಡಿಸಿದ್ದಾರೆ. ಇದಾದ 15 ದಿವಸಗಳ ನಂತರ ಮತ್ತೆ 1 ಲಕ್ಷ ತರುವಂತೆ ಹಿಂಸಿಸಿ, ಮೈಮೇಲಿನ ಒಡವೆಗಳನ್ನು ಕಸಿದು ಮಾ.31ರಂದು ಮನೆಯಿಂದ ಹೊರ ಹಾಕಿದ್ದಾರೆ ಎಂದು ನೌಸೀನ್ ದೂರಿನಲ್ಲಿ ತಿಳಿಸಿದ್ದಾರೆ.
ಪತಿ ಶೇಖ್ ಶಾಬೀರ್ ಪಟೇಲ್, ಶೇಖ್ ಮಹಿಬೂಬ ಪಟೇಲ್, ಫಜೀಲತ್ ಬೇಗಂ, ಅಜ್ರಾ, ಶೇಖ್ ತಾಹೇರ್, ಬುಸೀರಾ, ಪಾಶಾಮಿಯ್ಯಾ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.