ಗುಲ್ಬರ್ಗಾ

ನಕಲಿ ಬಿತ್ತನೆ ಬೀಜ: ಕ್ರಮಕ್ಕೆ ಆಗ್ರಹಿಸಿ ಸಿಪಿಎಂ ಧರಣಿ 5ಕ್ಕೆ

Published On :

ಗುಲ್ಬರ್ಗ: ಜಿಲ್ಲಾದ್ಯಂತ ನಕಲಿ ಬಿತ್ತನೆ ಬೀಜ ಮಾರಾಟ ಜಾಲ ವ್ಯಾಪಕವಾಗಿ ಬೆಳೆದಿದ್ದು, ನೂರಾರು ರೈತರು ಇದರಿಂದ ಮೋಸಹೋಗಿದ್ದಾರೆ. ನಕಲಿ ದಂಧೆ ತಡೆಯುವಂತೆ ಒತ್ತಾಯಿಸಿ ಸಿಪಿಎಂ ಆ.5ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಸಮಿತಿಯ ಎಂ.ಬಿ. ಸಜ್ಜನ್, ಭೀಮಶೆಟ್ಟಿ ಯಂಪಳ್ಳಿ ತಿಳಿಸಿದ್ದಾರೆ. ಚಿಂಚೋಳಿ ತಾಲೂಕಿನಲ್ಲಿ ಹೊರಬಿದ್ದ ಕಳಪೆ ಸೋಯಾ ಬೀಜದ ಪ್ರಕರಣವೂ ಕೇವಲ ಒಂದು ಉದಾಹರಣಯಾಗಿದೆ. ಅಲ್ಲಿನ ರೈತರು ಮತ್ತು ರೈತಪರ ಜನಪ್ರತಿನಿಧಿಗಳ ಜಾಗೃತಿಯಿಂದ ಪ್ರಕರಣ ಹೊರಬಂದಿದ್ದು, ಇನ್ನೂ ಜಾಗ್ರತ ರಹಿತ ರೈತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ತಿಳಿಸಿದೆ. ಕಳಪೆ ಸೋಯಾ ಬೀಜಗಳ ಪ್ರಕರಣವು ಚಿಂಚೋಳಿಯಲ್ಲಿ ಕಂಡು ಬಂದು ವಾರ ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಜಂಟಿ ಕೃಷಿ ನಿರ್ದೇಶಕರನ್ನು ಕೂಡಲೇ ಅಮಾನತುಗೊಳಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರನ್ನು ಜಿಲ್ಲಾ ಉಸ್ತುವಾರಿಯಿಂದ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಕಳಪೆ ಬೀಜದಿಂದ ಹಾನಿಗೊಳಗಾದ ರೈತರಿಗೆ ಎಕರೆಗೆ 10 ಸಾವಿರ ಪರಿಹಾರ ನೀಡಬೇಕು. ಕಳಪೆ ಬೀಜದ ಮಾರಾಟಗಾರರನ್ನು ಮತ್ತು ಕಳಪೆ ರಸಗೊಬ್ಬರ ಮಾರಾಟಗಾರರನ್ನು ಕೂಡಲೇ ಬಂಧಿಸಬೇಕು ಒತ್ತಾಯಿಸಲಾಗುವುದು ಎಂದು ಸಮಿತಿಯ ಎಂ.ಬಿ. ಸಜ್ಜನ್, ಭೀಮಶೆಟ್ಟಿ ಯಂಪಳ್ಳಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.