ಗುಲ್ಬರ್ಗಾ

ಬಗರ್ ಹುಕುಂ ಕಾಯ್ದೆ ಜಾರಿಗೆ ಆಗ್ರಹ

Published On :

ಅಫಜಲ್ಪುರ: ಸಂವಿಧಾನದ ಪ್ರಕಾರ ದೇಶದ ಸಂಪತ್ತನು ಒಬ್ಬರೇ ಇಟ್ಟುಕೊಳ್ಳದೆ ಎಲ್ಲಾ ಜಾತಿ ಜನಾಂಗದವರಿಗೆ ಸಮನಾಗಿ ಹಂಚುವ ಬಗರ್ ಹುಕುಂ ಕಾಯ್ದೆಯನು ಜಾರಿಗೊಳಿಸುವಂತೆ ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ಅಫಜಲ್ಪುರ ಘಟಕದ ವತಿಯಿಂದ ಒಂದು ದಿನದ ಸಾಂಕೇತಿಕ ಧರಣಿಯನು ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಅಧ್ಯಕ್ಷ ಗೌತಮ ಸಕ್ಕರಗಿ ಮಾತನಾಡಿ, ವಾಸ್ತವವಾಗಿ ಸಂವಿಧಾನದ ಆಶಯ ಸಫಲವಾಗಿಲ್ಲ ಬಡವರು ಬಡವರಾಗಿ ಶ್ರೀಮಂತರು ಶ್ರೀಮಂತರಾಗಿಯೇ ಇದ್ದಾರೆ. ದೇಶದ 75ರಷ್ಟು ಸಂಪತ್ತು ಕೇವಲ 25 ರಷ್ಟು ಶ್ರೀಮಂತರ ಬಳಿ ಇದೆ. ಹೀಗಾಗಿ ಬಡವರು ಬಡತನದ ದಾರಿದ್ರ್ಯದಿಂದ ಹೊರಬರಲಾಗದೆ ನರಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ತಕ್ಷಣ ವಿ. ಬಾಲಸುಬ್ರಮಣಿಯನ್ ಸಮಿತಿ ವರದಿಯನು ಒಪ್ಪಿಕೊಳ್ಳಬೇಕು. ಎಸ್‌ಸಿ, ಎಸ್‌ಟಿ, ಹಿಂದೂಳಿದ ಜಾತಿಗಳು, ಅರಣ್ಯವಾಸಿಗಳು ಮತ್ತು ಭೂರಹಿತರಿಗೆ ರಾಜ್ಯಾದ್ಯಂತ ಅಕ್ರಮವಾಗಿ ಭೂಮಿಯನು ಸಾಗುವಳಿ ಮಾಡಿಕೊಂಡಿರುವುದನು ಪ್ರತ್ಯೇಕಗೊಳಿಸಿ ಅಕ್ರಮ ಸಾಗುವಳಿ ಭೂಮಿಯನು ಸಕ್ರಮಗೊಳಿಸಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣ ಸಾಗುವಳಿ ಪತ್ರ ನೀಡಬೇಕು. ರಾಜ್ಯದ ಶೇ.80 ರಷ್ಟು ಹಳ್ಳಿಗಳಲ್ಲಿ ಸ್ಮಶಾನ ಭೂಮಿ ಇಲ್ಲದಿರುವುದರಿಂದ ಸರ್ಕಾರ ಎಲ್ಲಾ ಹಳ್ಳಿ ಮತ್ತು ನಗರ ಪ್ರದೇಶಗಳಿಗೂ ಒಂದು ಕಾಲ ಮಿತಿಯಲ್ಲಿ ಸ್ಮಶಾನ ಭೂಮಿ ಒದಗಿಸಬೇಕೆಂದು ತಮ್ಮ ಬೇಡಿಕೆಗಳನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹಣಮಂತ ಬೋಧನಕರ, ಮುಖಂಡರಾದ ಹುಚ್ಚಪ್ಪಾ ವಠಾರ, ಜಿಲ್ಲಾ ಪ್ರ. ಕಾರ್ಯದರ್ಶಿ ಬಸವರಾಜ ಝಳಕಿ, ಗುಂಡಪ್ಪ ಸಿಂಗೆ, ಮಚೆಂದ್ರ ಜಾಬಾದಿ, ಯಲ್ಲಮ್ಮ ಸೋಲೆಕರಅಬ್ದುಲ್ ಗಫೂರ, ಮಹಾದೇವ ಕಾಂಬಳೆ, ಶಾಮರಾವ ಹೊಸ್ಮನಿ, ಮಹಾದೇವಿ ಅಂಗಡಿ, ಸಂಗಣ್ಣ ಸಕ್ಕರಗಿ ಶಾಮರಾವ ಹೊಸ್ಮನಿ, ಮಹಾದೇವಿ ಅಂಗಡಿ, ಸಂಗಣ್ಣ ಸಕ್ಕರಗಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.