ಊಸರವಳ್ಳಿ ಅಂದರೆ ಇವರೇ ಇರಬೇಕು!
ಇತ್ತೀಚೆಗೆ ಎಂಇಎಸ್ ಮಹಾಮೇಳಾವ್ನಲ್ಲಿ ಜಿಲ್ಲೆಯಲ್ಲಿ ನಾಲ್ವರು ಶಾಸಕರು ಆಯ್ಕೆಯಾಗಿದ್ದರೆ ಕರ್ನಾಟಕದ ಚಟ್ಟಾ ಎತ್ತುತ್ತಿದ್ದೇವು ಎಂದು ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಹೇಳಿದರು. ಇದಕ್ಕೆ ತೀವ್ರ ಪ್ರತಿಭಟನೆಯಾದಾಗ ನಾನು ಹಾಗೇ ಹೇಳೇ ಇಲ್ಲ ಎಂದರು. ಆದರೆ ಮಂಗಳವಾರ ಸಂಜೆ ಇದ್ದಕ್ಕಿದ್ದಂತೆ ತುರ್ತು ಪತ್ರಿಕಾಗೋಷ್ಠಿ ಕರೆದು ರಾಗ ಬದಲಿಸಿ ನಾವು ಕರ್ನಾಟಕದ ಚೆಟ್ಟ ಹೊರುತ್ತೇವೆ ಎಂದು ಹೇಳಿಲ್ಲ. ತಮ್ಮ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ. ಕನಡಿಗರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುವುದಾಗಿ ಹೇಳಿದ್ದಾರೆ. ಇಂಥವರ ಕುರಿತೇ ಉಸರುಳ್ಳಿಯಂತಹವರು ಎಂದು ಹೇಳಿರಬೇಕು!
ಶೋಭೆ ಇಲ್ವಂತೆ ಹೂ ಮುಡ್ಕೊಳ್ರಿ
ಸರ್ಕಾರಕ್ಕೆ ಶೋಭೆ ತರ್ಬೇಕಾದ್ರೆ ಏನು ಮಾಡಬೇಕು? ಹೂ ಮುಡ್ಕೋಬೇಕು. ಈ ಸಲಹೆ ನೀಡದವರು ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು. ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೀತಿದ್ರೂ ಸರ್ಕಾರ ಏನೂ ಮಾಡ್ದೆ ಸುಮೆ ಕೂತಿದೆ ಎಂದು ಬಿಎಸ್ಆರ್ ಕಾಂಗ್ರೆಸ್ನ ರಾಜೀವ್ ಆರೋಪಿಸಿದಾಗ, ಅದ್ಕೆ ಏನು ಮಾಡ್ಬೇಕ್ರಿ ಎಂದು ಸಭಾಧ್ಯಕ್ಷರು ಪ್ರಶಿಸಿದರು. ಅದಕ್ಕೆ ಉತ್ತರಿಸುವ ಬದಲು ರಾಜೀವ್, ಇದು ಸರ್ಕಾರಕ್ಕೆ ಶೋಭೆ ತರೋದಿಲ್ಲ ಎಂದರು. ಕೂಡಲೇ ಸ್ಪೀಕರ್, ಆಡಳಿತ ಪಕ್ಷದ ಕಡೆ ಕಣ್ಣು ಹಾಯಿಸಿ, ನೋಡ್ರಿ ನಿಮ್ಗೆ ಶೋಭೆ ತರೋದಿಲ್ವಂತೆ. ಶೋಭೆ ಬರ್ಬೇಕುಂದ್ರೆ ಹೂ ಮುಡ್ಕೊಳ್ಳಿ ಎನಬೇಕೇ!
ಪರಿಷತ್ನಲ್ಲಿ ಚಡ್ಡಿ ಹಾಕದವರ ಚರ್ಚೆ!
ಸಚಿವ ಎಸ್. ಆರ್. ಪಾಟೀಲ್ ಚಡ್ಡಿ ಹಾಕ್ತಾರಾ, ಇಲ್ವಾ? ಹೀಗೊಂದು ಅನುಮಾನ ಜೆಡಿಎಸ್ನ ಬಸವರಾಜ ಹೊರಟ್ಟಿ ಅವರಿಗೆ ಬಂದಿದೆ. ಹಾಗಂತ ಜೆಡಿಎಸ್ನ ಪುಟ್ಟಣ್ಣ ಹೇಳಿದಾಗ ಚಡ್ಡಿ ಹಾಕೋ ಬಗ್ಗೆ ಚರ್ಚೇನೆ ನಡೆಯಿತು. ಮೇಲ್ಮನೆಯಲ್ಲಿ ಚರ್ಚೆ ಸಂದರ್ಭ ಹೈ.ಕ ಜಿಲ್ಲೆಗಳಲ್ಲಿ ದಕ್ಷಿಣ ಜಿಲ್ಲೆಗಳ ನಾಯಕರು ಬಂದು ಪ್ರಬಲರಾಗುತ್ತಿರುವ ಬಗ್ಗೆ ಪ್ರತಿಪಕ್ಷ ಸದಸ್ಯರು ಆಕ್ಷೇಪಿಸಿದರು. ಆಗ ಸಭಾನಾಯಕ ಎಸ್.ಆರ್. ಪಾಟೀಲ್, ನಿಮ್ಮ ಚಡ್ಡಿ ನಿಮಗೆ ಭದ್ರ, ನಮ್ಮ ಚಡ್ಡಿ ನಮಗೆ ಭದ್ರ ಎಂಬ ನಾಣ್ಣುಡಿ ಸ್ಮರಿಸಿದರು. ನೀವೇಕೆ ಚಡ್ಡಿ ನೋಡ್ತೀರಿ ಎಂದು ಹೊರಟ್ಟಿ ಪ್ರಶಿಸಿದಾಗ. ಎಸ್.ಆರ್. ಪಾಟೀಲ್ ಏನೋ ಹೇಳಲು ಬಂದರು. ಕೂಡಲೇ ಪುಟ್ಟಣ್ಣ, ನೀವು ಚಡ್ಡಿ ಹಾಕುವುದಿಲ್ಲ ಎನುವ ಬಗ್ಗೆ ಹೊರಟ್ಟಿಯವರಿಗೆ ಅನುಮಾನವಿದೆ ಎಂದು ನಗೆ ಉಕ್ಕಿಸಿದರು. ಹಾಗಿದ್ದರೆ ಪ್ರತಿಪಕ್ಷದವರೂ ಚಡ್ಡಿ ಹಾಕೋದಿಲ್ವೇ ಎಂದು ಎಸ್.ಆರ್. ಪಾಟೀಲ್ ಕೂಡ ತಿರುಗಿಬಿದ್ದರು. ಬಿಜೆಪಿಯ ಶಾಣ್ಣಪ್ಪ ಅವರಿಗೇಕೋ ಇದು ಇಷ್ಟವಾಗಿಲ್ಲ. ಯಾರು ಚಡ್ಡಿ ಹಾಕಿದರೇನು, ಬಿಟ್ಟರೇನು ಅದನು ಇಲ್ಲೇಕೆ ಚರ್ಚಿಸುತ್ತೀರಿ ಎಂದರು. ಕಾಂಗ್ರೆಸ್ನ ಮೋಟಮ್ಮ ಕೂಡ ಹೈ.ಕ. ಚರ್ಚೆ ಹೋಗಿ ಚಡ್ಡಿ ಚರ್ಚೆಯಾಗುತ್ತಿದೆ ಎಂದು ಬೇಸರದಿಂದ ಹೇಳಿದ ಮೇಲೆ ಚರ್ಚೆ ಸರಿದಾರಿಗೆ ಬಂತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

