ಶಾಸಕರಿಂದ ವಿವಿಧ ಕಾಮಗಾರಿ ಪರಿಶೀಲನೆ
ಹುಣಸಗಿ: ಪಟ್ಟಣದಲ್ಲಿ ಸುಮಾರು 2 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೈಟೆಕ್ ಬಸ್ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಸುರಪುರ ಶಾಸಕ ರಾಜಾ ವೆಂಕಟಪ್ಪನಾಯಕ ಭೇಟಿ ನೀಡಿ ಕಾಮಗಾರಿಯನ್ನು ವಿಕ್ಷೀಸಿ, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಹುಣಸಗಿ ಪಟ್ಟಣವು ನೀರಾವರಿ ಪ್ರದೇಶವಿದ್ದು, ಹಗಲು- ರಾತ್ರಿ ಅಂತಾರಾಜ್ಯ ಸಾರಿಗೆ ಸೌಲಭ್ಯವನ್ನು ಹೊಂದಿದೆ. ನಿಲ್ದಾಣ ಕಾಮಗಾರಿಯ ನಿಧಾನ ಗತಿಯಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ 15 ದಿನದೊಳಗಾಗಿ ಕಾಮಗಾರಿ ಮುಗಿಸುವಂತೆ ಆಗ್ರಹಿಸಿದರು. ನಂತರ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಯಾವ ಕಾರಣಕ್ಕಾಗಿ ಕಾಮಗಾರಿ ಇಲ್ಲಿಯವರೆಗೆ ನಿಲ್ಲಿಸಲಾಗಿದೆ. ನಂತರ ನಿಲ್ದಾಣದ ಮೇಲ್ಛಾವಣಿ ಹಾಕಲಾಗುವ ತಗಡಿನ ಶೀಟ್ಗಳನ್ನು ಪರಿಶೀಲಿಸಿದರು. ಬೇಗ ಕಾಮಗಾರಿಯ ವೇಗವನ್ನು ಹೆಚ್ಚಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಹೇಳಿದರು. ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ನಿಲ್ದಾಣದ ಸೇವೆ ಆರಂಭಿಸುವಂತೆ ಕಾರ್ಯನಿರ್ವಾಹಕ ಅಭಿಯಂತರ ಮೈಬೂಬಸಾಬ ಅವರಿಗೆ ಸೂಚಿಸಿದರು.
ವಿದ್ಯುತ್ ವಿತರಣಾ ಕೇಂದ್ರಕ್ಕೆ ಭೇಟಿ: ಹುಣಸಗಿ ಪಟ್ಟಣದಲ್ಲಿ ಅನೇಕ ವರ್ಷಗಳ ಹಿಂದೆ ಮಳೆಯಾಗಿ ಬಸ್ನಿಲ್ದಾಣ ಪೂರ್ತಿ ಮಳೆ ನೀರಿನಿಂದ ಆವೃತ್ತವಾಗಿದ್ದನ್ನು ಸ್ಮರಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಸೂಚಿಸಿದರು. ನಂತರ ಪಟ್ಟಣದಲ್ಲಿ ಕಾಮಗಾರಿ ಪೂರ್ಣಗೊಂಡಿರದ 110 ಕೆವಿಯ ವಿದ್ಯುತ್ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ, ಶಾಖಾಧಿಕಾರಿ ಶ್ರೀನಿವಾಸ ಪ್ರಸಾದ ಅವರಿಂದ ಮಾಹಿತಿ ಪಡೆದರು. ಕಾಮಗಾರಿ ಸ್ಥಳದಲ್ಲಿ ಯಾರೂ ಇಲ್ಲದ್ದನ್ನು ಕಂಡು ಹಿರಿಯ ಅಧಿಕಾರಿಗಳಿಗಳಿಗೆ ತಕ್ಷಣವೇ ಮಾತನಾಡುವುದಾಗಿ ತಿಳಿಸಿದರು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಮೇಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸುವುದಾಗಿ ತಿಳಿಸಿದರು.
ನಿವೇಶನ ಪರಿಶೀಲನೆ: ಜೆಸ್ಕಾಂ ಉಪವಿಭಾಗ ಇದೇ ಸಂದರ್ಭದಲ್ಲಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ಶೀಘ್ರದಲ್ಲಿ ಆರಂಭಿಸಲಾಗುವುದೆಂದು ತಿಳಿಸಿದರು. ನಂತರ ಮೊರಾರ್ಜಿ ವಸತಿ ಶಾಲೆಯ ನಿವೇಶನ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ಮುಖಂಡರಾದ ಸೂಲಪ್ಪ ಕಮತಗಿ, ತಾಪಂ ಸದಸ್ಯ ಸಿದ್ದಣ್ಣ ಸಾಹು ಮಲಗಲದಿನ್ನಿ, ನಿಂಗಣ್ಣ ಸಾಹು ಬಳಿ, ನಾನಾಗೌಡ ಪಾಟೀಲ, ಸೂಗಪ್ಪ ಚಂದಾ, ಆರ್.ಎಂ. ರೇವಡಿ, ಬಾಬು ಚೌದ್ರಿ, ಅಲಿಮೆಸ್ತ್ರಿ, ಬಸವರಾಜ ಮಿಲ್ಟ್ರಿ, ರವಿ ಪುರಾಣಿಕ ಮಠ, ಖಾಜಾಸಾಬ ನಬೂಜಿ, ರಂಜಾನ್ ಖುರೇಶಿ, ಖಾಜಾಪಟೇಲ, ಅಧಿಕಾರಿಗಳಾದ ಎಂ.ಎಲ್. ಇಂಗಳಳ್ಳಿ, ವಸಂತ ಸುರಪುರಕರ್ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

