ಗುಲ್ಬರ್ಗಾ

4000 ಬೆಂಬಲ ಬೆಲೆಯಲ್ಲಿಶೇಂಗಾ ಖರೀದಿ: ರೈತ ಹರ್ಷ

Published On :

ಯಾದಗಿರಿ: ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಬೆಳೆದ ಶೇಂಗಾ ಬೆಲೆ ದಿಢೀರ್ ಕುಸಿತದಿಂದ ಆತಂಕ ತೊಂಡಿದ ರೈತಾಪಿ ಜನತೆ ಇದೀಗ ಸ್ವಲ್ಪ ನಿಟ್ಟುಸಿರು ಬಿಡುವಂತೆ ಆಗಿದೆ.
  ಪಾತಾಳಕ್ಕೆ ಕುಸಿದಿದ್ದ ಶೇಂಗಾದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿ ಪ್ರತಿ ಕ್ವಿಂಟಾಲ್‌ಗೆ 4000 ದರದಲ್ಲಿ ಖರೀದಿ ಮಾಡಲು ಜಿಲ್ಲಾಡಳಿತ ಸೂಚನೆ ನೀಡಿರುವುದು ರೈತರ ಮುಖದಲ್ಲಿ ಸಂತೋಷದ ಹೊನಲು ಹರಿಯಲು ಕಾರಣವಾಗಿದೆ.
  ಕಳೆದ ಬಾರಿ ಪ್ರತಿ ಕ್ವಿಂಟಾಲ್ 4200-4500ರ ದರದಲ್ಲಿ ಮಾರಾಟವಾಗುತ್ತಿದ್ದ ಶೇಂಗಾಕ್ಕೆ ಈ ಬಾರಿ ಬೇಡಿಕೆಯಿಲ್ಲದ ಕಾರಣದಿಂದಾಗಿ ದರದಲ್ಲಿ ತೀವ್ರ ಕುಸಿತವಾಗಿ, ಕ್ವಿಂಟಾಲ್‌ಗೆ  3200- 3300ರ ವರೆಗೆ ಕುಸಿದಿತ್ತು.
  ಆದರೆ ರೈತ ಸಂಘಟನೆಗಳು ಹಾಗೂ ರೈತರ ಹಿತದೃಷ್ಟಿಯಿಂದ ಇದೀಗ ಜಿಲ್ಲಾಡಳಿತವು ಸರ್ಕಾರದ 4000 ಬೆಂಬಲ ಬೆಲೆಯಲ್ಲಿ  ಜಿಲ್ಲೆಯ ರೈತರಿಂದ ಶೇಂಗಾ ಖರೀದಿ ಮಾಡಬೇಕೆಂದು ಕರ್ನಾಟಕ ಎಣ್ಣೆಬೀಜ ನಿಗಮ ನಿಯಮಿತ (ಕೆಒಎಫ್) ಜಿಲ್ಲಾ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದೆ.
ವಿವಿಧೆಡೆ ಖರೀದಿ ಪ್ರಾರಂಭ: ಜಿಲ್ಲೆಯ ಯಾದಗಿರಿ, ಶಹಾಪುರ ಮತ್ತು ಸುರಪುರ ತಾಲ್ಲೂಕು ಕೇಂದ್ರಗಳ ಎಪಿಎಂಸಿ ಯಾರ್ಡ್‌ಗಳಲ್ಲಿ ಹಾಗೂ ಯಾದಗಿರಿ ತಾಲ್ಲೂಕಿನ ರಾಮಸಮುದ್ರ, ಬಳಿಚಕ್ರ, ಹೊನಗೇರಾ ಮತ್ತು ಬಾಲಚೇಡ್‌ಗಳಲ್ಲಿ, ಶಹಾಪುರ ತಾಲ್ಲೂಕಿನ ವಡಗೇರಾದಲ್ಲಿ ಹಾಗು ಸುರಪುರ ತಾಲ್ಲೂಕಿನ ವಜ್ಜಲ, ಗೆದ್ದಲಮರಿ ಮತ್ತು ಬೋನಾಳ ಗ್ರಾಮಗಳಲ್ಲಿರುವ ಕೆಒಎಫ್ ಶಾಖೆಗಳಲ್ಲಿ ಖರೀದಿಯನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
  ಸರ್ಕಾರದ ಈ ನಿರ್ಧಾರಕ್ಕಾಗಿ ರೈತ ಕೃಷಿ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಶರಣಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.