ಅಯೋಗ್ಯ ಬೆಲೆಯಿಂದ ರೈತನಿಗೆ ತೀವ್ರ ಹತಾಶೆ
ಚಿತ್ತಾಪುರ: ತಾಲೂಕಿನಲ್ಲಿ ಆರ್ಥಿಕ ಸಂಪನ್ಮೂಲಕ್ಕೆ ಬರವಿಲ್ಲ. ಆದರೆ ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗದೇ ನರಳುವಂತಾಗಿದೆ. ಸಂಪತ್ತಿನ ಸಮಾನ ಹಂಚಿಕೆ ಇಲ್ಲದೆ ದುಡಿಯುವ ಕೈಗಳಿಗೆ ಉದ್ಯೋಗ ದೊರೆಯದೇ ಗುಳೆ ಹೋಗುವಂತಾಗಿದೆ ಎಂದು ಸಮ್ಮೇಳನಾಧ್ಯಕ್ಷ ರಾಜಶೇಖರ ಹತಗುಂದಿ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮಾತನಾಡಿ, ಇಲ್ಲಿನ ಸಂಪನ್ಮೂಲವು ಅತೀ ಮಹತ್ವವನ್ನು ಹೊಂದಿದೆ. ನೀರಾವರಿ ಯೋಜನೆಗಳು ಬಳಕೆಗೆ ಲಭ್ಯವಾದರೆ, ಕೃಷಿ ಚಟುವಟಿಕೆಗಳು ನಿರಂತರ ನಡೆದರೆ ಉದ್ಯೋಗ ಖಾತ್ರಿಯಂತಹ ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದರು.
ಖರ್ಗೆದ್ವಯರಿಗೆ ಹೊಗಳಿಕೆ: ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಾಹಿತ್ಯ, ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಆ ಕಾರಣಕ್ಕೆ ಸಮ್ಮೇಳನಕ್ಕೆ 6 ಲಕ್ಷ ಹಣ ನೀಡಿದ್ದು ಇಂತಹ ಅಭೂತಪೂರ್ವ ಸಮ್ಮೇಳನ ನಡೆಯಲು ಸಾಧ್ಯವಾಗಿದೆ ಎಂದರು.
ಇನ್ನು ಸಮ್ಮೇಳನಾಧ್ಯಕ್ಷ ರಾಜಶೇಖರ ಹತಗುಂದಿಯವರು ತಮ್ಮ 12 ಪುಟಗಳ ಅಧ್ಯಕ್ಷೀಯ ಭಾಷಣದಲ್ಲಿ ಸುಮಾರು ಒಂದೂವರೆ ಪುಟದಷ್ಟು ಕೇಂದ್ರ ಸಚಿವ ಖರ್ಗೆ, ಚಿತ್ತಾಪುರ ಶಾಸಕ ಪ್ರಿಯಾಂಕ್ ಅವರ ರಾಜಕೀಯ, ನಿಲುವು, ಸಿದ್ಧಾಂತ ಕುರಿತಂತೆ ವಿಶ್ಲೇಷಣೆ ಮಾಡಿದ್ದು ಗಮನಾರ್ಹವಾಗಿತ್ತು.
ಕಾಂಗ್ರೆಸ್ಸಿನ ಹಿರಿಯ ಮುಖಂಡ ಮಲ್ಲಕಾರ್ಜುನ ಖರ್ಗೆಯವರು ಸಂವಿಧಾನ ಮತ್ತು ಜನತಂತ್ರದ ಮೇಲೆ ವಿಶ್ವಾಸ ಹುಟ್ಟುವ ಹಾಗೆ ರಾಜಕಾರಣ ಮಾಡುತ್ತಾ ಬಂದವರು. ಜನತಂತ್ರವನ್ನು ಜಾತಿ ಬಲ, ತೋಳ್ಬಲ ಮತ್ತು ಹಣಬಲದ ಅಖಾಡವೆಂದು ಪರಿಗಣಿಸಿರುವ ಸಂದರ್ಭದಲ್ಲಿ ಖರ್ಗೆಯವರು ಪ್ರಜಾಪ್ರಭುತ್ವದ ಸಾಧ್ಯತೆ, ಸಾರ್ಥಕತೆ ರುಜುವಾತುಪಡಿಸಿದ ಧೀಮಂತ ನಾಯಕ. ಅವರು ಚಿತ್ತಾಪುರ ಮತಕ್ಷೇತ್ರವನ್ನು ಶಾಸನ ಸಭೆಯಲ್ಲಿ ಪ್ರತಿನಿಧಿಸಿದ್ದರು ಎನ್ನುವುದು ಅಭಿಮಾನದ ಸಂಗತಿ ಎಂದು ಹೇಳಿದರು.
ಪ್ರಿಯಾಂಕ್ ಅವರ ಓದುವ ಆಸಕ್ತಿ ಬಗ್ಗೆ ತಿಳಿದ ನನಗೆ ಅವರ ಬಗೆಗಿನ ಗೌರವ ಹೆಚ್ಚಾಗಿದೆ, ಚಿತ್ತಾಪುರ ರಾಜ್ಯದಲ್ಲಿ ಮಾದರಿ ಕ್ಷೇತ್ರವಾಗುವಲ್ಲಿ ಸಂಶಯವಿಲ್ಲ. ಜನನಾಯಕನ ವೈಚಾರಿಕತೆ ಜನತೆಯನ್ನು ಸರಿದಾರಿಗೆ ತರಲಿ ಎಂದು ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

