ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

ದೋರನಹಳ್ಳಿ; 27ಕ್ಕೆ ಸಾಮೂಹಿಕ ವಿವಾಹ
ಶಹಾಪುರ: ತಾಲೂಕಿನ ಸುಕ್ಷೇತ್ರ ದೋರನಹಳ್ಳಿಯ ಸದ್ಗುರು ಮಹಾಂತೇಶ್ವರರ ಜಾತ್ರೆ ಪ್ರಯುಕ್ತ ಪ್ರತಿವರ್ಷದಂತೆ ನಡೆಯುವ ಸಾಮೂಹಿಕ ಮದುವೆ ಸಮಾರಂಭವು ಈ ಬಾರಿ ಫೆ. 27ರಂದು ನಡೆಸಲಾಗುತ್ತದೆ. ತಾಲೂಕಿನ ಗ್ರಾಮೀಣ ಜನರು ಪ್ರತಿ ವರ್ಷದಂತೆ ಈ ವರ್ಷವೂ ತಮ್ಮ ಕುಟುಂಬದಲ್ಲಿ ಮದುವೆ ಮಾಡಲಿಚ್ಚಿಸುವವರು ಫೆ.  22ರೊಳಗೆ ಶ್ರೀಮಠದ ಕಾರ್ಯಕರ್ತರಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಶ್ರೀಮಠದ ಪ್ರಕಟಣೆಯಲ್ಲಿ ವೀರಮಹಾಂತೇಶ್ವರ ಶಿವಾಚಾರ್ಯ ಸ್ವಾಮಿ ತಿಳಿಸಿದ್ದಾರೆ. ಮಾ.1ರಂದು ಮಹಾಂತೇಶ್ವರರ ರಥೋತ್ಸವ ಹಾಗೂ ಮಾ.2ರಿಂದ ಬೃಹತ್ 'ದನಗಳ ಜಾತ್ರೆ', ಕುಸ್ತಿ, ನೇತ್ರದಾನ, ನೇತ್ರ ಚಿಕಿತ್ಸಾ ಶಿಬಿರ ನಡೆಯಲಿವೆ.
ಕನ್ಯಾಕೋಳೂರಿಗೆ ಎನ್. ಶಂಕ್ರಪ್ಪ
ಶಹಾಪುರ: ತಾಲೂಕಿನ ಕನ್ಯಾಕೋಳೂರ ಗ್ರಾಮದ ಮೃತ ದಳಪತಿ ಮನೆಗೆ ಶನಿವಾರ ಭೇಟಿ ನೀಡಿದ ಬಿಜೆಪಿ ಹಿರಿಯ ಮುಖಂಡ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎನ್. ಶಂಕ್ರಪ್ಪ ಕುಟುಂಬದವರಿಗೆ ಸಾಂತ್ವನ ಹೇಳಿದರು. ಅಲ್ಲದೆ ಹತ್ಯೆಗೊಳಗಾದ ದೇವಿಂದ್ರಪ್ಪನ ಹಿರಿಯ ಮಗನಿಗೆ ಅವನ ವಿದ್ಯಾಭ್ಯಾಸದ ನಂತರ ಸರ್ಕಾರಿ ನೌಕರಿ ನೀಡಬೇಕು. ರು. 20 ಲಕ್ಷ ಪರಿಹಾರ ಒದಗಿಸಬೇಕು.  ಕೃಷಿ ಚಟುವಟಿಕೆಗಾಗಿ 5 ಎಕರೆ ಜಮೀನು ಸೇರಿದಂತೆ ಅವರ ಬದುಕಿಗೆ ಆಶ್ರಯವಾಗಿ ನಿಲ್ಲಲ್ಲು ಬೇಕಾದ ಸೂಕ್ತ ಸೌಲಭ್ಯ ಸರ್ಕಾರ ಒದಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. ಮಕ್ಕಳಾದ ರಾಹುಲ್, ರಘುಪತಿ, ಸುಲೋಚನಾ ಇವರ ಶೈಕ್ಷಣಿಕ ಜವಾಬ್ದಾರಿಯನ್ನು ಸರ್ಕಾರವೇ ನಿಭಾಯಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಈರಣ್ಣಗೌಡ ಮಲ್ಲಾಬಾದಿ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ, ಯಲ್ಲಯ್ಯ ನಾಯಕ ವನದುರ್ಗ, ಗುಲ್ಬರ್ಗದ ಎಸ್ಸಿ ಮೋರ್ಚಾದ ಮುಕುಂದರಾವ್ ಕೊಡದೂರ, ಸ್ಲಂ ಮೋರ್ಚಾದ ರಮೇಶ ಹೊಸಮನಿ ಇತರರು ಹಾಜರಿದ್ದರು.
ನೇಮಕ
ಚಿತ್ತಾಪುರ: ಜೆಡಿಎಸ್ ತಾಲೂಕು ಅಧ್ಯಕ್ಷರಾಗಿ ಶಿವಶರಣರೆಡ್ಡಿ ಪಾಟೀಲ್ ಬಂಕಲಗಾ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಬಸವರಾಜ ತಡಕಲ್ ತಿಳಿಸಿದ್ದಾರೆ. ಕೂಡಲೇ ಅಧಿಕಾರ ವಹಿಸಿಕೊಂಡು ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಲು ಕಾರ್ಯೋನ್ಮುಖರಾಗಬೇಕೆಂದು ಸೂಚಿಸಿದ್ದಾರೆ.
ಜನರು ಧಾರ್ಮಿಕತೆ ಕಡೆಗೆ ಒಲವು ತೋರಲಿ: ಮಗನೂರ
ಗುರುಮಠಕಲ್: ಜನರು ಧಾರ್ಮಿಕತೆಯ ಬಗ್ಗೆ ಒಲವನ್ನು ತೋರಿ, ಇದನ್ನು ಪ್ರತಿಯೊಬ್ಬರು ಪಾಲನೆ ಮಾಡುತ್ತ ಕಳೆಗುಂದುತ್ತಿರುವ ನಮ್ಮ ಸಂಪ್ರದಾಯಗಳಿಗೆ ಮರು ಜೀವ ತುಂಬುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಚಂದ್ರಶೇಖರ ಗೌಡ ಮಗನೂರ ತಿಳಿಸಿದರು.
ಜಿಲ್ಲೆಯ ಮರಮಕಲ್ ಗ್ರಾಮದಲ್ಲಿ ಹನುಮಾನ ದೇವಸ್ಥಾನದ ಉದ್ಘಾಟನೆ ನೇರವೆರಿಸಿ ಮಾತನಾಡಿದರು.
ಸೈದಪ್ಪ ಕೆ.ಗುತ್ತೇದಾರ ಅಪ್ನಾದೇಶ ಅಸೋಷಿಯೇನ್ ಬಳಗದ ಜಿಲ್ಲಾ ಸಂಚಾಲಕರು ಮಾತನಾಡಿ, ನಮ್ಮ ಭಾರತ ದೇಶ ಆಧ್ಯಾತ್ಮಿಕ ನೆಲೆ ಬೀಡಾಗಿದ್ದು, ಭರತ ಭೂಮಿಯ ಮೇಲೆ ಮಹಾಭಾರತ, ರಾಮಾಯಣ ನಡೆದಂತ ಪುಣ್ಯ ಭೂಮಿಯಾಗಿದ್ದು, ಶಿವಶರಣರು, ಅಧ್ಯಾತ್ಮಿಕ ಪುರುಷರು, ರಸ-ಋಷಿಗಳು ಅನೇಕ ಕುರುಹಗಳನ್ನು ಮತ್ತು ಅನೇಕ ತಪಸ್ಸುಗಳು ಮಾಡಿ ದೇವರನ್ನು ಒಲೈಸಿಕೊಂಡ ಘಟನೆಗಳು ಸಾಕಷ್ಟಿವೆ ಎಂದರು.
ಮಲ್ಲರೆಡ್ಡಿ ಗೌಡಪ್ಪನೋರ, ಸಾಹೇಬರಡ್ಡಿಗೌಡ ದಳಪತಿ, ಸಿದ್ದಲಿಂಗರಡ್ಡಿ, ನಾಗಪ್ಪ, ಶಿವಪ್ಪ ಹಣಮಪ್ಪನೋರ, ಭೀಮರಾಯ, ಮಹಾದೇವಗೌಡ, ಬಸವರಾಜ ಸೇರಿದಂತೆ ಇತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.