ಬಡ್ತಿ ಪ್ರಕ್ರಿಯೆ ರದ್ದುಗೊಳಿಸದಿದ್ರೆ 12ರಿಂದ ಸತ್ಯಾಗ್ರಹ
ರಾಯಚೂರು: ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯಗುರುಗಳ ಹುದ್ದೆಗೆ ಬಡ್ತಿ ನೀಡುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಯಲ್ಲಿ 371(ಜೆ)ನೇ ಕಲಂನಂತೆ ಮೀಸಲಾತಿ ನಿಗದಿಪಡಿಸದ ಡಿಡಿಪಿಐ ರಾಮಾಂಜನೇಯ ಅವರು,ನಿಯಮ ಉಲ್ಲಂಘಿಸಿದ್ದಾರೆ. ಈ ನಿಟ್ಟಿನಲ್ಲಿ ಬಡ್ತಿ ಪ್ರಕ್ರಿಯೆಯನ್ನು ಇನ್ನೆರಡು ದಿನದಲ್ಲಿ ರದ್ದುಗೊಳಿಸದಿದ್ದಲ್ಲಿ ಫೆ. 12ರಿಂದ ಅನಿರ್ದಿಷ್ಟ ಅಮರಣಾಂತ ಉಪವಾಸ ನಡೆಸುವುದಾಗಿ ಜನಸಂಗ್ರಾಮ ಪರಿಷತ್ತಿನ ಮುಖಂಡ ಡಾ. ರಜಾಕ್ ಉಸ್ತಾದ್ ಎಚ್ಚರಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಹೈ.ಕ. ಭಾಗಕ್ಕೆ ಸಂವಿಧಾನದ ಕಲಂ 371(ಜೆ) ಅಡಿ ವಿಶೇಷ ಸ್ಥಾನಮಾನ ನೀಡಿ ಅದರಲ್ಲಿ ಈ ಭಾಗದ ಜನತೆ ವಿವಿಧ ಹಂತದಲ್ಲಿ ದೊರೆಯಬೇಕಾದ ಮೀಸಲಾತಿ ನಿಗದಿ ಮಾಡಿದೆ. ಆದರೆ ಕಾನೂನು ಉಲ್ಲಂಘಿಸಿ ಜಿಲ್ಲೆಯಲ್ಲಿ ಬಡ್ತಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಟೀಕಿಸಿದರು.
ಡಿಡಿಪಿಐ ಅಮಾನತಿಗೆ ಒತ್ತಾಯ: ಈ ಬಗ್ಗೆ ಡಿಡಿಪಿಐ ರಾಮಾಂಜನೇಯ ಅವರಿಗೆ ಸಂಪರ್ಕಿಸಿದಾಗ ಅವರು ಸರ್ಕಾರ ಜಾರಿಗೆ ತಂದಿರುವ 371(ಜೆ)ನೇ ಕಲಂ ಕಾನೂನಿನ ಅನುಷ್ಠಾನದ ಬಗ್ಗೆಯೇ ಉಡಾಫೆಯ ಮಾತನಾಡಿದ್ದಾರೆ. ಕಾರಣ ಸರ್ಕಾರದ ಆದೇಶ ಮೀರಿ ಕಾರ್ಯನಿರ್ವಹಿಸಿ ಹೈ.ಕ. ಭಾಗದವರಿಗೆ ಅನ್ಯಾಯ ಮಾಡಿರುವ ಡಿಡಿಪಿಐ ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಸ್ಥಳೀಯರು ಕೇವಲ ಶೇ. 20ರಷ್ಟು ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೇ. 80ರಷ್ಟು ಜನ ಹೊರ ಜಿಲ್ಲೆಯವರಾಗಿದ್ದಾರೆ. ಸದ್ಯದ ಬಡ್ತಿ ಪ್ರಕ್ರಿಯೆಯಲ್ಲಿ ಹೊರ ಜಿಲ್ಲೆಯವರಿಗೇ ಹೆಚ್ಚಿನ ಲಾಭವಾಗಲಿದೆ. ಹೈ.ಕ. ಭಾಗದವರಿಗೆ ಮೀಸಲಾತಿಯಂತೆ ಪ್ರಕ್ರಿಯೆ ನಡೆಸಿದಲ್ಲಿ ಪೂರ್ಣ ಎಲ್ಲ ಹುದ್ದೆಗಳಲ್ಲಿ ಸ್ಥಳೀಯರಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.
ಮೀಸಲಾತಿಯನ್ವಯ ಬಡ್ತಿ ಮಾಡಿ: ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಡಿಡಿಪಿಐ ರಾಮಾಂಜನೇಯ ಅವರನ್ನು ಅಮಾನತು ಮಾಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಗೆ ಸಂಬಂಧಿಸಿ ಜೇಷ್ಠತಾ ಪಟ್ಟಿ ಪುನಾ ಪ್ರಕಟಿಸಿ ವಿಶೇಷ ಮೀಸಲಾತಿ ನಿಯಮಗಳಂತೆ ಮೀಸಲಾತಿ ನಿಗದಿಪಡಿಸಿ ಬಡ್ತಿ ಪ್ರಕ್ರಿಯೆ ನಿರ್ವಹಿಸಬೇಕೆಂದ ಅವರು, ಈ ಕುರಿತು ಶಿಕ್ಷಕರ ಸಂಘದೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪರಿಷತ್ತಿನ ಪ್ರಮುಖರಾದ ಖಾಜಾ ಅಸ್ಲಂ ಪಾಷಾ, ವೆಂಕಟೇಶ ಯಾದವ್, ಸೈಯದ್ ಶಂಶುದ್ದೀನ್, ಬಂದಪ್ಪಗೌಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

