ಗುಲ್ಬರ್ಗಾ

ವೈಯಕ್ತಿಕ ರಕ್ಷಣೆಗೆ ಕರಾಟೆ ಅವಶ್ಯ

Published On :

ಮುದಗಲ್: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಕಗಳು ಹೆಚ್ಚುತ್ತಿದ್ದು, ಇಂತಹ ಸಂದರ್ಭದಲ್ಲಿ ರಕ್ಷಣೆಗೆ ಕರಾಟೆ ಅವಶ್ಯವಾಗಿದೆ ಎಂದು ವಿಭಾಗೀಯ ಮಟ್ಟದ ಕರಾಟೆ ಸಂಘದ ಅದ್ಯಕ್ಷ ಕಲ್ಯಾಣಕುಮಾರ ಅಭಿಪ್ರಾಯಪಟ್ಟರು.
ಪಟ್ಟಣದ ಟೈಗರ್ ಬುಡೋಕಾನ್ ಕರಾಟೆ ಮಾರ್ಷಲ್ ಆರ್ಟ್, ಆವೇಜ್ ಮತ್ತು ಇಮ್ತಿಯಾಜ್ ಸವಿನೆನಪಿಗಾಗಿ ಹಮ್ಮಿಕೊಂಡ ವಲಯ ಮಟ್ಟದ ಕರಾಟೆ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕರಾಟೆ ಬರೀ ಬಡಿದಾಡುವ ಸ್ಪರ್ಧೆಯಲ್ಲ. ಇದು ತಮ್ಮ ವೈಯಕ್ತಿಕ ರಕ್ಷಣೆಗೆ ಸಹಕಾರಿಯಾಗಲಿದೆ. ಇದನ್ನು ತಾಂತ್ರಿಕ ಕೌಶಲ್ಯದ ಮೂಲಕ ಪ್ರದರ್ಶಿಸಲಾಗುತ್ತಿದೆಯೇ ವಿನಃ ಮಾನವನ ಜೀವನದ ಜೊತೆಗೆ ಚೆಲ್ಲಾಟವಾಗದು ಎಂದರು.
ಪಾಲಕರ ಪ್ರೋತ್ಸಾಹ ಮುಖ್ಯ: ಕರಾಟೆ ಕಲಿತವರು ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಓದಿನ ಜೊತೆಗೆ ಮಕ್ಕಳಲ್ಲಿಯ ಕೌಶಲ್ಯವನ್ನು ಗುರುತಿಸಿಕೊಂಡು ಅದಕ್ಕೆ ಪಾಲಕರು ಪ್ರೋತ್ಸಾಹಿಸುವುದು ಸೂಕ್ತ ಎಂದರು.
ಕರಾಟೆ ಶಾಲೆಯ ಶಿಕ್ಷಕ ಮಹ್ಮದ ರಫೀ ಮಾತನಾಡಿ, ಒಂದು ಮಗುವಿಗೆ ದೈಹಿಕ ಶಿಕ್ಷಣ ನೀಡಿದರೆ ದೇಶಕ್ಕೆ ಒಬ್ಬ ಯೋಧನನ್ನು ತಯಾರಿಸಿದಂತೆ ಎಂದರು. ಇದೇ ಸಂದರ್ಭದಲ್ಲಿ ಪಪಂ ಸದಸ್ಯ ಮಹ್ಮದ್ ಮಾಸೂಮ್ ಷರೀಫ್ ಮಾತನಾಡಿದರು. ಕರಾಟೆ ಸ್ಪರ್ಧೆಯನ್ನು ಪಪಂ ಅಧ್ಯಕ್ಷ ರಜ್ಜಬಲಿ ಟಿಂಗ್ರಿ ಉದ್ಘಾಟಿಸಿದರು. ವೇದಿಕೆ ಮೇಲೆ ಸ್ಥಾಯಿ ಸಮಿತಿ ಅಧ್ಯಕ್ಷ ಹೇಮಂತಕುಮಾರ, ಪಪಂ ಸದಸ್ಯರಾದ ಖಾಜಾಪಾಷಾ ಗಾಡಿವಾನ, ಬಂದೇನವಾಜ ಬಡಿಗೇರ, ಶಿವರಾಜ ತಳವಾರ ಮುಂತಾದವರು ಉಪಸ್ಥಿತರಿದ್ದರು. ಜೆಎನ್‌ವಿ ಶಿಕ್ಷಕ ಕೇಸರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.