ಇಂದು ಧ್ವನಿ ಬೆಳಕು ದೃಶ್ಯ ವೈಭವ ರೂಪಕ
ಯಾದಗಿರಿ: ವಾರ್ತಾ ಇಲಾಖೆ ವತಿಯಿಂದ ಸಾಮಾಜಿಕ ಸಮಾನತೆ ಸಂದೇಶ ಸಾರುವ 'ಮನುಷ್ಯ ಜಾತಿ ತಾನೊಂದೇ ವಲಂ' ಧ್ವನಿ ಬೆಳಕು,ದೃಶ್ಯ ವೈಭವಗಳ ರೂಪಕ ಕಾರ್ಯಕ್ರಮವನ್ನು ಫೆ.13ರಂದು ಸಂಜೆ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದೆ.
150 ಜನ ಕಲಾವಿದರು, 50 ಜನ ತಂತ್ರಜ್ಞರೂ ಸೇರಿ 200 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಾತಿ ಪದ್ಧತಿ ಮನುಕುಲದ ಜೀವವೃಕ್ಷಕ್ಕೆ ಅಂಟಿರುವ ಒಂದು ದೊಡ್ಡ ಸಾಮಾಜಿಕ ಪಿಡುಗು. ಒಂದೇ ಭೂಮಿತಾಯಿಯ ಹೊಕ್ಕುಳ ಬಳ್ಳಿಯ ಮಕ್ಕಳಾಗಿ ಹುಟ್ಟಿದವರ ನಡುವೆ ಎದ್ದಿರುವ ಜಾತಿಯ ಗೋಡೆಗಳು ಮನುಷ್ಯ ಮನುಷ್ಯರನ್ನು ಜಾತಿಯ ನೆಲೆಯಲ್ಲಿ ಪ್ರತ್ಯೇಕಗೋಳಿಸಿವೆ. ಪ್ರಸ್ತುತ ಈ ಧ್ವನಿ-ಬೆಳಕು, ಸಂಗೀತ-ದೃಶ್ಯ ವೈಭವಗಳ ಕಾರ್ಯಕ್ರಮವು ಸುಮಾರು ಎರಡು ಸಾವಿರ ವರ್ಷಗಳಿಂದ ಜಾತಿ ಪದ್ಧತಿಯ ವಿರುದ್ಧ ಅವಿರತವಾಗಿ ಹೋರಾಟ ನಡೆಸುತ್ತಾ ಬಂದಿರುವ ಕನ್ನಡದ ಸಂವೇದನೆಯ ಭವ್ಯ ಪರಂಪರೆಯನ್ನು ನಿರ್ದಿಷ್ಟವಾಗಿ ಗುರುತಿಸುವ ಹಾಗೂ ನಿಚ್ಚಳವಾಗಿ ಬಿಂಬಿಸುವ ಪ್ರಯತ್ನವಾಗಿದೆ. ಹಾಗೆಯೇ ಸರ್ವರೂ ಜಾತಿಮತ ತೊರೆದು ಒಂದುಗೂಡಬೇಕೆನ್ನುವ ಸಾಮಾಜಿಕ ವಿವೇಕವನ್ನು ನಮ್ಮ ಆಧುನಿಕ ವರ್ತಮಾನಕ್ಕೆ ಮರುಪೂರಣ ಮಾಡುವ ಆಶಯವನ್ನು ಸಹ ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

