ಗುಲ್ಬರ್ಗಾ

ಶಹಾಬಾದ್; ಮಹಾಲಕ್ಷ್ಮೀ ರಥೋತ್ಸವ

Published On :

ಶಹಾಬಾದ್: ನಗರದ ಹೊನಗುಂಟಾ ರಸ್ತೆಯಲ್ಲಿರುವ ರಾಮಾ ಮೊಹಲ್ಲಾದ ಕೊಲ್ಲಾಪುರ ಮಹಾಲಕ್ಷ್ಮಿದೇವಿ 10ನೇ ವರ್ಧಂತೋತ್ಸವ ನಿಮಿತ್ತ ಭಕ್ತರ ಜಯಘೋಷದೊಂದಿಗೆ ದೇವಿಯ ಭವ್ಯ ರಥೋತ್ಸವ ಬುಧವಾರ ಮಧ್ಯಾಹ್ನ ನಡೆಯಿತು.
ಸಂಗೀತಾ ಅಮ್ಮನವರ ನೇತೃತ್ವದಲ್ಲಿ ಮಂಗಳವಾರ ಬೆ. ದೇವಿಗೆ ಕಾಕಡಾರತಿ, ಅಭೀಷೇಕ, ಅಲಂಕಾರ, ಅರುಣ ಭಟ್ಟ ಜೋಶಿ ಹೊನಗುಂಟಾ ಹಾಗೂ ಸಂಗಡಿಗರ ವೈದಿಕತ್ವದಲ್ಲಿ ಗಣಪತಿ ಹವನ, ಮಹಿಳೆಯರಿಂದ ಲಲಿತಾ ಸಹಸ್ರನಾಮ ಪಾರಾಯಣ, ಸತ್ಯನಾರಾಯಣ ಪೂಜೆ, ಮಹಾಪ್ರಸಾದ ವಿತರಣೆ, ಸಂಜೆ ವೇದಘೋಷ, ಮಂತ್ರಪುಷ್ಟ ನಡೆಯಿತು. ರಾತ್ರಿ 9ಕ್ಕೆ ಖ್ಯಾತ ಕಲಾವಿದ ಅನಂತ ಕುಲ್ಕರ್ಣಿ ಬಾಗಲಕೋಟ್‌ರವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಬುಧವಾರ ಬೆ. ಮಹಾಲಕ್ಷ್ಮೀ ಹವನ, ಕುಂಕುಮಾರ್ಚನೆ, ಥಿಟೆ ಸಹೋದರಿಯರಿಂದ ಸಂಗೀತ ಕಾರ್ಯಕ್ರಮ, ಹವನದ ಪೂರ್ಣಾಹುತಿ ಭವ್ಯ ರಥೋತ್ಸವ ನಡೆಯಿತು. ಭಕ್ತರಿಗೆ ಪ್ರಸಾದ ವಿತರಣೆ, ಸಂಗೀತಾ ಅಮ್ಮನವರಿಂದ ಭಕ್ತರಿಗೆ ಪ್ರಸಾದ ವಿತರಣೆ, ಆಶೀರ್ವಚನ, ರಾತ್ರಿ ತೊಟ್ಟಿಲು ಸೇವೆ ನಡೆಯಿತು.
ದೇವಸ್ಥಾನದ ಕಲ್ಯಾಣರಾವ ಕುಲ್ಕರ್ಣಿ, ಶಂಕರರಾವ ಕುಲ್ಕರ್ಣಿ, ರವಿಕುಮಾರ ಅಲ್ಲಮಶೆಟ್ಟಿ, ಶ್ರೀಧರ ಭಟ್ಟ, ಗಜಾನನ ಕುಲ್ಕರ್ಣಿ, ಶ್ರೀಧರ ಜೋಶಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.