ಗುಲ್ಬರ್ಗಾ

ತಾಂಡಾ ಹೊರವಲಯದಿಂದ ರಸ್ತೆ ನಿರ್ಮಿಸಿ

Published On :

ಗುರುಮಠಕಲ್: ಗಡಿ ಭಾಗದಲ್ಲಿರುವ ನಜರಾಪುರ ತಾಂಡದ ಮೂಲಕ ಸಾರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸರ್ಕಾರ ರಸ್ತೆಯನ್ನು ನಿರ್ಮಿಸಲು ಮುಂದಾಗಿದ್ದು, ಈಗಾಗಲೇ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.
  ಪ್ರಧಾನಮಂತ್ರಿ ಸಡಕ್ ಯೋಜನೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಪುಟಪಾಕ ತಾಂಡಾ, ಮಲ್ಲಾಪುರ ಮಾರ್ಗವಾಗಿ ನೇರವಾಗಿ ನಜರಾಪುರ ತಾಂಡಾದ ಹೊರವಲಯದಿಂದ ಮುಂದೆ ಸಾಗಬೇಕಿದ್ದ ರಸ್ತೆಯನ್ನು ಕೆಲ ರಾಜಕೀಯ ವ್ಯಕ್ತಿಗಳು ಗ್ರಾಮಸ್ಥರಿಗೆ ಅನುಕೂಲ ಮಾಡುವುದನ್ನು ಬಿಟ್ಟು ವಿಷ ಬೀಜ ಬಿತ್ತುತ್ತಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ.
ನೀರಿನ ಟ್ಯಾಂಕ್ ತನಕ: ಹೊಸದಾಗಿ ತಾಂಡದಲ್ಲಿ ಮನೆಗಳು ನಿರ್ಮಾಣ ಮಾಡಿದಾಗ ಸುಮಾರು 3-4 ವರ್ಷಗಳ ಹಿಂದೆ ಕಚ್ಚಾ ರಸ್ತೆಯನ್ನು ತಾಂಡದ ಕುಡಿವ ನೀರಿನ ಟ್ಯಾಂಕ್ ತನಕ ಹಾಕಲಾಗಿತ್ತು. ತಾಂಡದಲ್ಲಿ ಹೆಚ್ಚಿನ ಕುಟುಂಬಗಳು ವಾಸಿಸುತ್ತಿರುವುದರಿಂದ ತಾಂಡದ ಹೊರವಲಯದಿಂದ ರಸ್ತೆಯನ್ನು ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಸರ್ಕಾರದಿಂದಲೂ ತಾಂಡದ ಹೊರವಲಯದಿಂದಲೇ ರಸ್ತೆ ನಿರ್ಮಿಸಲು ಆದೇಶವಿದೆ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ.
ಕೆಲವರ ತಂತ್ರಗಾರಿಕೆ: ಈಗ ಪಕ್ಕಾ ಡಾಂಬರ್ ರಸ್ತೆ ನಿರ್ಮಿಸಲಾಗುತ್ತಿದ್ದು, ಹಳೆಯ ಟ್ಯಾಂಕ್‌ನ ಕಚ್ಚಾ ರಸ್ತೆಯಿಂದಲೇ ಕಾಮಗಾರಿ ನಡೆಸಲು ಕೆಲವರು ತಂತ್ರಗಾರಿಕೆ ನಡೆಸುತ್ತಿದ್ದು, ಸರ್ಕಾರದ ಆದೇಶದಂತೆ ಕಾಮಗಾರಿಯನ್ನು ನಡೆಸಲು ಬಿಡದೇ ದುರುದ್ದೇಶದಿಂದ ಹಳೆಯ ರಸ್ತೆಯನ್ನು ಮುಂದುವರೆಸಲು ಲೆಕ್ಕಾಚಾರ ನಡೆಸುತ್ತಿದ್ದಾರೆ. ಇದರಿಂದಾಗಿ ವಾಸಕ್ಕೆ ಸ್ಥಳವಿಲ್ಲದೇ ಕಾಡಿನಲ್ಲಿ ಗುಡಿಸಲು ಹಾಕಿಕೊಂಡು ಇರಬೇಕಾಗುತ್ತದೆ.
ಅಲ್ಲದೇ ನಜರಾಪೂರ ಗ್ರಾಪಂ ಉಪಾಧ್ಯಕ್ಷರು ಜನರ ಅನುಕೂಲವನ್ನು ಗಮನಿಸದೇ ಹಳೆಯ ರಸ್ತೆ ಮಾಡಲು ಹಟ ಹಿಡಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
  ಕಾಂಗ್ರೆಸ್ ಮುಖಂಡರಾದ ಭೀಮರೆಡ್ಡಿ ಉಟ್ಕೂರ ಮತ್ತು ಪಾಪಣ್ಣ ಅಳೆಗಾರ ಅವರು ತಾಂಡಕ್ಕೆ ಭೇಟಿ ನೀಡಿ ತಾಂಡ ನಿವಾಸಿಗಳಿಗೆ ಅನಾನುಕೂಲತೆಗಳಾಗದಂತೆ ದೂರದೃಷ್ಟಿಯಿಂದ ತಾಂಡದ ಹೊರವಲಯದಿಂದಲೇ ರಸ್ತೆ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಮನವಿ ಮಾಡಿದ್ದಾರೆಂದು ಎಂದು ಸ್ಥಳೀಯರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.