22ರಿಂದ 5ನೇ ಸಾಂಸ್ಕೃತಿಕ ಜನೋತ್ಸವ ಆರಂಭ
ಗುಲ್ಬರ್ಗ: ಅವಿಷ್ಕಾರ, ಎಐಡಿವೈಒ, ಎಐಎಂಎಸ್ಎಸ್ ಹಾಗೂ ಎಐಡಿಎಸ್ಒ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಚಾರ್ಲಿ ಚಾಪ್ಲೀನ್ರ 125ನೇ ಜನ್ಮದಿನ ನಿಮಿತ್ತ ಫೆ.22ರಿಂದ ಮೂರು ದಿನಗಳ ಕಾಲ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿಯ ರಂಗ ಮಂಟಪದಲ್ಲಿ ಗುಲ್ಬರ್ಗ 5ನೇ ಸಾಂಸ್ಕೃತಿಕ ಜನೋತ್ಸವನ್ನು ಹಮ್ಮಿಕೊಳ್ಳಲಾಗಿದೆ. ಸಾಂಸ್ಕೃತಿಕ ಜನೋತ್ಸವ ಆಚರಣಾ ಸಮಿತಿಯ ಸಂಚಾಲಕಿ ವಿ. ನಾಗಮ್ಮಾಳ್, ಡಾ. ಸೀಮಾ ದೇಶಪಾಂಡೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿರಿಯ ರಂಗಕರ್ಮಿ ಎಚ್.ಜಿ. ಸೋಮಶೇಖರ್ ರಾವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಎಐಎಂ, ಎಸ್ಎಸ್ನ ಅಖಿಲ್ ಭಾರತ ಪ್ರಧಾನ ಕಾರ್ಯದರ್ಶಿ ಡಾ. ಜಯಲಕ್ಷ್ಮಿ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಖ್ಯಾತ ಸಾಹಿತಿಗಳಾದ ಡಾ. ಕೆ. ಶರೀಫಾ, ಡಾ. ಜಿ. ಶಶಿಕುಮಾರ ಸಿನಿಮಾ ಸಂವಾದವನ್ನು ನಡೆಸಿಕೊಡುವರು.
ಮಹಾನ್ ವ್ಯಕ್ತಿಗಳ ಸೂಕ್ತಿ ಹಾಗೂ ಛಾರ್ಯಚಿತ್ರ ಪ್ರದರ್ಶನದ ಉದ್ಘಾಟನೆ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಉಪನ್ಯಾಸಕಿ ಶೈಲಜಾ ಕೊಪ್ಪರ್ ನೆರವೇರಿಸುವರು. ನಂತರ ನಾಟಕ, ಜುಗಲ್ ಬಂದಿ, ನೃತ್ಯರೂಪಕ, ಕಾವ್ಯ ಕುಂಚ ನೃತ್ಯ, ಮುಳ್ಳಿನ ಕುಣಿತ ಪ್ರದರ್ಶನಗೊಳ್ಳಲಿವೆ. ಬಾದಲ್ ಸರ್ಕಾರ ಮೂಲ ನಾಟಕವನ್ನು ಅನುವಾದಗೊಳಿಸಿದ ರಾಜೇಂದ್ರ ಕಾರಂತರ ನಾಟಕ ಮೋಜಿನ ಸಿಮೆಯಾಚಿ ಒಂದೂರು ಪ್ರದರ್ಶನಗೊಳ್ಳಲಿದ್ದು, ಎರಡನೇಯ ದಿನ ಶ್ರೀನಿವಾಸ ಉಡಪ ಅವರು ರಚಿತ ಬೆರಳುಗಳು ನಾಟಕ ಕಿಶೋರ ವಾಹಿನಿ ತಂಡದಿಂದ ಪ್ರದರ್ಶನಗೊಳ್ಳಲಿದೆ.
ಚರ್ಚಾಗೋಷ್ಠಿ: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಚರ್ಚಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಎಐಎಂಎಸ್ಎಸ್ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಜಿ. ಜಯಲಕ್ಷ್ಮಿ ಹಾಗೂ ಕೇಂದ್ರಿಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ. ಅರವಿಂದ ಮಿತ್ರ ಆಗಮಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

