ಮೌಢ್ಯ ನಿವಾರಣೆಗೆ ಮಠಾಧೀಶರ ಪ್ರಯತ್ನ ಅಗತ್ಯ
ವಾಡಿ: ಜನರ ಮನದಲ್ಲಿ ಮನೆಮಾಡಿರುವ ಮೂಢನಂಬಿಕೆ ತೊಲಗಿಸಲು ಮಠಾಧೀಶರು ಪ್ರಯತ್ನಿಸುವುದು ಅಗತ್ಯ ಎಂದು ಮಾಜಿ ಸಚಿವೆ ಹಾಗೂ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷೆ ಬಿ.ಟಿ. ಲಲಿತಾನಾಯಕ ಹೇಳಿದರು.
ಪಟ್ಟಣದ ಸೇವಾಲಾಲ ನಗರದಲ್ಲಿ ರವಿ ಚವ್ಹಾಣ ನೇತೃತ್ವದಲ್ಲಿ ನಡೆದ ಸಂತ ಸೇವಾಲಾಲರ 275ನೇ ಜಯಂತ್ಯುತ್ಸವದ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಈಗಲೂ ಗ್ರಾಮೀಣ ಭಾಗದಲ್ಲಿ ಮೌಢ್ಯ ಆಚರಣೆಗಳು ನಡೆಯುತ್ತಿವೆ. ಅದರ ವಿರುದ್ಧ ಮಠಾಧೀಶರು ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕಿದೆ ಎಂದರು.
ಅನಿಷ್ಟ ಆಚರಣೆಗಳು ನಿಲ್ಲಲಿ: ಕೆಲವರು ಕಾನೂನು, ನಿಯಮ ಉಲ್ಲಂಘಿಸಿ ದೇವರ ಹೆಸರಲ್ಲಿ ತ್ರಿಶೂಲ, ಮಾರಕ ವಸ್ತುಗಳನ್ನು ಹಿಡಿದುಕೊಂಡು ಸಭೆ ಸಮಾರಂಭಕ್ಕೆ ಬರುತ್ತಾರೆ. ಅನಿಷ್ಟ ಪದ್ಧತಿಗಳು ನಿಲ್ಲಬೇಕು. ಮಠಾಧೀಶರು ಭಕ್ತರಿಗೆ ಒಳ್ಳೆಯ ಸಂದೇಶ ಸಾರುವ ಮೂಲಕ ಭಕ್ತರ ಜೀವನನಲ್ಲಿ ತುಂಬಿಕೊಂಡ ಮೌಢ್ಯತೆ, ಕಂದಚಾರ, ಮೂಢನಂಬಿಕೆ ತೊಲಗಿಸಿ ಎಂದು ಮನವಿ ಮಾಡಿದರು.
ಅಲ್ಲದೆ, ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರು ಉದ್ಘಾಟಿಸಿದ ಬಂಜಾರ ಭವನ ಕಾಮಗಾರಿ ಅರ್ಧದಲ್ಲಿಯೇ ನಿಂತಿದೆ. ನಿಮ್ಮ ಅವಧಿಯಲ್ಲಿ ಯಾವ ಕಾಮಗಾರಿ ಪೂರ್ಣಗೊಳಿಸಿದ್ದೀರಿ ಎಂದು ಪ್ರಶ್ನಿಸಿದರು.
ನಂತರ ಮಾತನಾಡಿದ ಮಾಜಿ ಶಾಸಕ ವಾಲ್ಮೀಕಿ ನಾಯಕ, ಪಟ್ಟಣದ ಸೇವಲಾಲ ನಗರದಲ್ಲಿ 25 ಲಕ್ಷ ವೆಚ್ಚದ ಬಂಜಾರ ಭವನ ಕಾಮಗಾರಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮುಗಿದಿದೆ. ಉಳಿದ ಕಾಮಗಾರಿಗೆ 75 ಲಕ್ಷ ಮಂಜೂರಾತಿಗೆ ಮನವಿ ಮಾಡಲಾಗಿತ್ತು. ಆ ವೇಳೆ ಬಿಜೆಪಿ ಅಧಿಕಾರ ಕಳೆದುಕೊಂಡಿತು ಎಂದು ನೇರವಾಗಿ ಉತ್ತರ ನೀಡಿದರು.
ಸರ್ವರಿಗೂ ಲೇಸನ್ನು ಬಯಸಿದ ಸಂತ: ಚಿತ್ತಾಪುರದ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಸಂತ ಸೇವಾಲಾಲರು ಪ್ರತಿ ಜೀವಿಗೂ ಲೇಸನ್ನು ಬಯಸಿದ ಮಹಾನ್ ಸಂತರು ಎಂದು ಬಣ್ಣಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭಾಗಣ್ಣಗೌಡ ಸಂಕನೂರ ಮಾತನಾಡಿದರು.
ಅಭಿನವ ಮುನೀಂದ್ರ ಶಿವಾಚಾರ್ಯ, ಜೇಮಸಿಂಗ್ ಮಹಾರಾಜರು, ಬಳಿರಾಮ ಮಹಾರಾಜರು, ಖಾಜಾ ಸೈಯದ್ ಅಬ ತುರಬಾ ಶಾ ಖಾದ್ರಿ, ವಿಠಲ ಮಹಾರಾಜರು, ಕೇಸರಡಗಿ ಲತಾಮಾತಾಜೀ ಆಶೀರ್ವಚನ ನುಡಿದರು.
ಶಾಸಕ ಉಮೇಶ ಜಾಧವ್, ಮಾಜಿ ಸಚಿವ ಬೆಳಮಗಿ, ಸುಭಾಷ ರಾಠೋಡ, ವಿಠಲ ಜಾದವ ಮಾತನಾಡಿದರು.
ಎಸ್.ಬಿ.ಸಿಂಗ್, ಶ್ರೀನಿವಾಸ ಸಾಗರ, ಜೆ.ಜೆ. ಪವಾರ, ಇಬ್ರಾಹಿಂ ಪಟೇಲ, ಸೋಮಲಾ ಕಾರಭಾರಿ, ಡಾ. ರಾಮಾ ಪವಾರ, ಶಂಕರ ಚವ್ಹಾಣ, ಪೋಮಾ ರಾಠೋಡ, ಹರಿ ಗಲಾಂಡೆ, ನೀಲಯ್ಯ ಸ್ವಾಮಿ, ಮಕ್ಬೂಲ್ ಜಾನಿ, ಡಾ. ಗೋವಿಂದ ನಾಯಕ, ವಾಲ್ಮೀಕಿ ರಾಠೋಡ, ಮಸೂದ ಜುನೇದಿ, ಶ್ಯಾಮ್ಸೇನ್ ಇಸಾಯಿ, ಈಶ್ವರ ರಾಠೋಡ, ವಿಜಯಕುಮಾರ, ನೀಲಸಿಂಗ ಚವ್ಹಾಣ, ಸೋಮಲಾ ಚವ್ಹಾಣ, ಮೋಹನ ರಾಠೋಡ ರಾಮು ಸೇಠ, ಕಿಶನ್ ಜಾಧವ, ಪ್ರಕಾಶ ನಾಯಕ, ಅಬಾದಾಸ ಜಾಧವ, ಹಣಮಂತ ಚವ್ಹಾಣ, ರಮೇಶ ಕಾರಬಾರಿ, ಬಾಳು ಚವ್ಹಾಣ, ಠಾಕೂರ ಸಿಂಗ್ ಉಪಸ್ಥಿತರಿದ್ದರು. ಸುರೇಶ ರಾಠೋಡ ನಿರೂಪಿಸಿದರು. ದೇವಜಿ ನಾಯಕ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

