ಗುಲ್ಬರ್ಗಾ

ಉಮರಗಾ ಬಾರ್ಡ್ ರಸ್ತೆ ಕಾಮಗಾರಿ ಚುರುಕು

Published On :

ಆಳಂದ: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಉಮರಗಾ ಬಾರ್ಡ್- ಆಳಂದ ದ್ವಿಮುಖ ಹೆದ್ದಾರಿ ಕಾಮಗಾರಿ ಕೊನೆಗೂ ಆರಂಭಗೊಂಡು ಭರದಿಂದ ಸಾಗಿದ್ದು, ಪ್ರಯಾಣಿಕರು ಮತ್ತು ವಾಹನ ಚಾಲಕರಿಗೆ ಕೊಂಚ ನೆಮ್ಮದಿ ತಂದಿದೆ.
ಈ ಕುರಿತು ಶಾಸಕ ಬಿ.ಆರ್. ಪಾಟೀಲರು ಕಾಮಗಾರಿ ಪರಿಶೀಲನೆ ನಡೆಸಿ ಗುಣಮಟ್ಟತೆ ಕಾಪಾಡಬೇಕು. ಹಾಗೂ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಕರ್ನಾಟಕ ಮತ್ತು ಮಹಾರಾಷ್ಟ್ರದ ಸಂಪರ್ಕ ಒದಗಿಸುವ ಈ ಹೆದ್ದಾರಿ ಪ್ರಮುಖವಾಗಿದೆ. ಅಧಿಕಾರಿಗಳು ಗುಣಮಟ್ಟತೆ ಕಾಪಾಡುವಲ್ಲಿ ನಿರ್ಲಕ್ಷಿಸಿದರೆ ಸಹಿಸುವುದಿಲ್ಲ ಎಂದು ತಾಕೀತು ಮಾಡಿದರು. ಈ ಹೆದ್ದಾರಿ ಕಾಮಗಾರಿಗೆ ಬರೀ 5 ಮೀಟರ್ ಇರುವುದನ್ನು 7 ಮೀಟರ್‌ವರೆಗೆ ವಿಸ್ತರಿಸಿ ಸರ್ಕಾರದಿಂದ ಅನುಮತಿ ಪಡೆಯಲು ವಿಳಂಬವಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರ ಸೇರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದರು.
7 ಮೀಟರ್‌ಗೆ ಹೆಚ್ಚಳ: ಮಹಾಗಾಂವ್ ಕ್ರಾಸ್‌ನಿಂದ ಆರಂಭವಾಗುವ ಈ ಹೆದ್ದಾರಿ, ಮಡಕಿ ತಾಂಡಾದಿಂದ ಉರಮಗಾ ಬಾರ್ಡ್‌ವರೆಗಿನ 65 ಕಿಮೀ ಹೆದ್ದಾರಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ 39 ಕೋಟಿ ನೀಡಿದೆ.
 ಅದರಲ್ಲೂ ಆಳಂದ ಉಮರಗಾ ನಡುವಿನ ಹೆದ್ದಾರಿ ವಾಹನ ದಟ್ಟಣೆಯಿಂದ ಕೂಡಿದ್ದು, 7 ಮೀಟರ್ ವಿಸ್ತರಣೆ ಕಾರ್ಯವು ನಡೆಯುತ್ತಿದೆ ಎಂದು ಶಾಸಕರು ತಿಳಿಸಿದರು.
ಇದೇ ವೇಳೆ ಕಾಮಗಾರಿ ಗುಣಮಟ್ಟತೆ ಪರಿಶೀಲನೆ ಯಂತ್ರ, ತೂಕ ಮತ್ತು ಅಳತೆ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ಮಾತನಾಡಿ ಶಾಸಕರು ಮಾಹಿತಿ ಪಡೆದರು. ಕಾಮಗಾರಿಯ ಕುರಿತು ಹೊರತಜ್ಞರನ್ನು ಕರೆಯಿಸಿ ಪರಿಶೀಲಿಸಲಾಗುವುದು. ತಪ್ಪು ಮಾಡದೆ ಒಳ್ಳೆಯ ಕೆಲಸ ಮಾಡಿ ಎಂದರು.
  ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಅಭಿಮನ್ಯು ಶೃಂಗೇರಿ, ಎಂಜಿನಿಯರ್ ಸುನೀಲಕುಮಾರ, ಮುಖಂಡ ಶರಣಪ್ಪ ಹೊಸಮನಿ, ಶಿವಪ್ಪಾ ವಾರಿಕ, ಭೀಮರಾವ್ ಢಗೆ ಇತರರಿದ್ದರು.

ಹೆತ್ತವರ ಋಣ ತೀರಿಸಿ: ಗುತ್ತೇದಾರ

ಅಫಜಲ್ಪುರ: ಪ್ರತಿಯೊಬ್ಬರು ತಂದೆ ತಾಯಿಯರ ಋಣ ತೀರಿಸಬೇಕು. ಅವರ ಆಸೆಗೆ ವಿರುದ್ಧ ಯಾವುದೇ ಕೆಟ್ಟ ಕಾರ್ಯ ಮಾಡಬಾರದು. ತಂದೆ- ತಾಯಿ ಸೇವೆಯೇ ನಮ್ಮ ಪಾಲಿಗೆ ಒಂದು ದೊಡ್ಡ ಗೌರವ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.
ಶಿವೂರ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕಳಸಾರೋಹಣ ಹಾಗೂ ಸಾಮೂಹಿಕ ವಿವಾಹದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಸಾಮೂಹಿಕ ವಿವಾಹಗಳಿಂದ ಅತಿ ಖರ್ಚಿನ ಮದುವೆಗಳಿಗೆ ಕಡಿವಾಣ ಹಾಕಬಹುದು ಎಂದರು. ಹೊಸಪೇಟೆಯ ಬಸವ ಶ್ರೀ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಸಚಿವ ರೇವೂನಾಯಕ ಬೆಳಮಗಿ, ಮಾಜಿ ಶಾಸಕ ಎಂ.ವೈ. ಪಾಟೀಲ್, ಚನ್ನಮಲ್ಲ ಶ್ರೀ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.