ಶುಲ್ಕ ವಿನಾಯಿತಿ ಹಿಂದಕ್ಕೆ: ಪ್ರತಿಭಟನೆ
ಗುರುಮಠಕಲ್: ಬಿಸಿಎಂ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಶುಲ್ಕ ವಿನಾಯಿತಿಯನ್ನು ರದ್ದು ಮಾಡುವ ಸಂಬಂಧ ಸರ್ಕಾರವು 2013ರ ಅಕ್ಟೋಬರ್ 5ರಂದು ಹೊರಡಿಸಿರುವ ಅದೇಶದ ಪ್ರಕಾರ ವಿದ್ಯಾರ್ಥಿಗಳು ಶುಲ್ಕ ವಿನಾಯತಿ ಪಡೆಯುವುದು ಕಷ್ಟಕರವಾಗಿ ಪರಿಣಮಿಸಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಗಳಾದ ವಿಜಯಕುಮಾರ ಅವರು ಮಾತನಾಡುತ್ತ ಈ ಹಿಂದೆ ವಿದ್ಯಾರ್ಥಿಗಳು ತಾವು ವಿದ್ಯಾಭ್ಯಾಸ ಮಾಡುವ ಕಾಲೇಜಿನಲ್ಲಿ ಜಾತಿ ಹಾಗೂ ಅದಾಯ ಪ್ರಮಾಣ ಪತ್ರ ನೀಡಿ ಶುಲ್ಕದಲ್ಲಿ ವಿನಾಯ್ತಿ ಪಡೆಯುತ್ತಿದ್ದರು. ಅದರೆ ಸರ್ಕಾರದ ಹೊಸ ನೀತಿಯಿಂದ ವಿದ್ಯಾರ್ಥಿಗಳು ಶುಲ್ಕ ವಿನಾಯ್ತಿ ಪಡೆಯುವುದು ಕೇವಲ ಕನಸಿನ ಮಾತೇ ಅಗಿದೆ.
ಪ್ರಶ್ನಿಸುವ ಹಕ್ಕು ಇಲ್ಲ: ಇದೀಗ ಸರ್ಕಾರ ಹೊರಡಿಸಿರುವ ಅದೇಶದಿಂದ ವಿದ್ಯಾರ್ಥಿಗಳು ಇನ್ನು ಮುಂದೆ ಯಾವುದೇ ವಿಷಯದ ಬಗ್ಗೆ ಪ್ರಶ್ನಿಸುವ ಹಾಗೆಯೇ ಇಲ್ಲವಾಗಿದೆ. ಇದೊಂದು ಅಪ್ರಜಾತಾಂತ್ರಿಕ ಫ್ಯಾಸಿಸ್ ದಾಳಿಯಾಗಿದ್ದು ಈ ಆದೇಶ ಶುಲ್ಕ ವಿನಾಯಿತಿಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ವಿದ್ಯಾರ್ಥಿಯೊಬ್ಬ ಆರಂಭದಲ್ಲಿ ಶುಲ್ಕ ಭರಿಸುವ ವೇಳೆಗೆ ಶುಲ್ಕ ವಿನಾಯಿತಿ ಸಿಗಬೇಕೇ ಹೊರತು ವಿದ್ಯಾರ್ಥಿ ದೆಸೆ ಮುಗಿದ ನಂತರ ಮುಂದೆಂದೋ ಅವನ ಬ್ಯಾಂಕ್ ಖಾತೆಗೆ ಹಣ ಪಾವತಿಸುವುದು ಅಸಂಬದ್ಧ ನಿರ್ಧಾರವಾಗಿದೆ. ಇದನ್ನು ಸರ್ಕಾರ ಕೈಬಿಡಬೇಕಾಗಿದೆ ಎಂದು ಆಗ್ರಹಿಸಿದರು. ತಾಜುದ್ದೀನ್, ರಮೇಶ, ಶ್ರೀನಿವಾಸ, ಕಾವೇರಿ, ಸುಗಂದಮ್ಮ, ರೇಣುಕಾ, ಪ್ರೇಮ, ಜ್ಯೋತಿ, ಆಶ್ವಿನಿ, ಗಿರಿಜಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

