ಗುಲ್ಬರ್ಗಾ

ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ

Published On :

ಗುಲ್ಬರ್ಗ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರಾವಿಪ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸಂಘಟಿಸುತ್ತಿರುವ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಫೆ.21ರಂದು ಬೆ.10ಕ್ಕೆ ಗುಲ್ಬರ್ಗದ ಐವಾನ್-ಇ- ಶಾಹಿ ಬಡಾವಣೆಯ ಸರ್ಕಾರಿ ಪ್ರಾತ್ಯಕ್ಷಿಕ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ. 8ರಿಂದ 10ನೇ ತರಗತಿಯ ವಿಜ್ಞಾನ ಮತ್ತು ಗಣಿತ ಆಧರಿಸಿದ 75 ಅಂಕಗಳ ಲಿಖಿತ ರಸಪ್ರಶ್ನೆ ಸ್ಪರ್ಧೆ ಜರುಗುವುದು. ಒಬ್ಬ ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲು ಜಿಲ್ಲೆಯ ಪ್ರೌಢಶಾಲಾ ಮುಖ್ಯಸ್ಥರು ಕ್ರಮ ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ. ವಿವರಕ್ಕೆ ಕರವಿಪ ಸಂಯೋಜಕ ಚಂದ್ರಶೇಖರ್ ಪಾಟೀಲ್ ಮೊ. 944859782ಗೆ ಸಂಪರ್ಕಿಸಿ.
ಪಾಲಕರ ಪತ್ತೆಗೆ ಶೋಧನೆ
ಗುಲ್ಬರ್ಗ: ಗುಲ್ಬರ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶು ಗೃಹದಲ್ಲಿ ಒಂದು ದಿನದ ಹೆಣ್ಣು ಮಗುವನ್ನು ಫೆ.15ರಂದು ದಾಖಲಿಸಿಕೊಳ್ಳಲಾಗಿದೆ. ಈ ಹೆಣ್ಣು ಮಗುವನ್ನು ಫೆ.14ರಂದು ಗೊಬ್ಬುರ(ಕೆ) ಪಿಎಚ್‌ಸಿಯಲ್ಲಿ ಬಿಡಲಾಗಿತ್ತು. ಒಂದು ದಿನದ ಈ ಹೆಣ್ಣು ಮಗು ಗೋದಿ ಮೈಬಣ್ಣ ಹೊಂದಿದ್ದು, ಉತ್ತಮ ಆರೋಗ್ಯ ಸ್ಥಿತಿ ಹೊಂದಿದೆ. ಪಾಲಕರು, ಪೋಷಕರು ಇದ್ದಲ್ಲಿ ಪ್ರಕಟಣೆಯಾದ 60 ದಿನದೊಳಗೆ ಅಗತ್ಯ ದಾಖಲೆಗಳನ್ನು ಪ್ರಸ್ತುತಪಡಿಸಿ ಮಗುವನ್ನು ಪಡೆದುಕೊಂಡು ಹೋಗಲು ಕೋರಲಾಗಿದೆ. ತಪ್ಪಿದಲ್ಲಿ ಮಗುವಿಗೆ ಕಾನೂನು ರೀತ್ಯ ದತ್ತು ಪ್ರಕ್ರಿಯೆ ಕೈಗೊಳ್ಳಲಾಗುವುದೆಂದು ಕೋರಲಾಗಿದೆ.
ಶೈಲಜಾಗೆ ಪಿಎಚ್.ಡಿ ಪದವಿ
ಗುಲ್ಬರ್ಗ: ಗುವಿವಿ ಕಾನೂನು ವಿಷಯದಡಿ ಶೈಲಜಾ ಎಸ್. ಮಂಡಿಸಿದ 'ಎ ಕ್ರಿಟಿಕಲ್ ಸ್ಟಡಿ ಆಫ್ ಹುಮನ್ ರೈಟ್ಸ್ ಆಫ್ ಉಮೆನ್ ವಿತ್ ರೆಫರೆನ್ಸ್ ಟು ಇಂಡಿಯನ್ ಪರಸ್ಪೆಕ್ಟಿವ್ಯೂಸ್‌' ಗ್ರಂಥಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಪ್ರೊ. ಎಸ್.ಎಸ್. ಪಾಟೀಲ್ ಮಾರ್ಗದರ್ಶಕರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.