'ಡಬ್ಬಿ ತಿಂದ್ಯೋ ಇಲ್ಲೋ..' ಕೃತಿ ಲೋಕಾರ್ಪಣೆ
ಗುಲ್ಬರ್ಗ: ಡಬ್ಬಿ ತಿಂದ್ಯೋ ಇಲ್ಲೋ... ಹೆಸರಿನ ತೋರಣ- 5 ಲೋಕಾರ್ಪಣೆಗೆ ತಮ್ಮ ಮನೆಯ ಪಡಸಾಲೆಯಲ್ಲೇ ಹಮ್ಮಿಕೊಂಡಿದ್ದರು. ಸಾಹಿತಿ ಡಾ. ವಸಂತ ಕುಷ್ಟಗಿ, ಪ್ರೊ. ರವೀಂದ್ರ ಕರ್ಜಗಿ, ಡಾ. ಸೈಲಜಾ ಕೊಪ್ಪರ್, ಹಿರಿಯ ಪತ್ರಕರ್ತ ಶ್ರೀಕಾಂತಾಚಾರ್ಯ ಮಣ್ಣೂರ, ರತ್ನಾ ಮಣ್ಣೂರ, ಎಂಎನ್ ಕೊಡಗಲಿ, ಸಂಗೀತ- ಸಾಹಿತ್ಯಾಸಕ್ತ ಹಿರಿಯರಾದ ನಾಡಗೌಡ, ಎನ್ವಿ ಪದವಿ ವಿದ್ಯಾಲಯ ಪ್ರಾಚಾರ್ಯ ಜಿ.ಎಸ್. ಕುಲಕರ್ಣಿ ಸೇರಿದಂತೆ ಅನೇಕ ಹಿರಿಯರು, ಬಡಾವಣೆಯ ಗೆಳೆಯರು ಬಿಡ್ಕರ್ ಅವರಿದ್ದರು.
ಸಂತಸದ ಕ್ಷಣಗಳ ಮೆಲುಕು: ಡಾ. ಕುಷ್ಟಗಿ ಬೇಂದ್ರೆ, ವಿ.ಕೆ. ಗೋಕಾಕ್ ಸೇರಿದಂತೆ ಅನೇಕ ಸಾಹಿತಿಗಳು ಕಟ್ಟಿದ್ದ ಗೆಳೆಯರ ಬಳಗದ ಅನುಭವಗಳನ್ನು ಮೆಲಕು ಹಾಕುತ್ತ ಅಂಥದ್ದೇ ಬಳಗ ಬಿಡ್ಕರ್ ಮನೆಯಲ್ಲಿ ಸೇರಿದೆ ಎಂದು ಆತ್ಮೀಯತೆ ಮೆರೆದರೆ ಹಿರಿಯರಾದ ನಾಡಗೌಡರು ತಾವಿದ್ದಷ್ಟು ಹೊತ್ತು ಗಂಗೂಬಾಯಿ ಹಾನಗಲ್, ಭೀಮಸೇನ ಜೋಷಿ, ದ.ರಾ. ಬೇಂದ್ರೆ ಮೊದಲ್ಗೊಂಡು ಸಾಹಿತ್ಯ- ಸಂಗೀತದ ದಿಗ್ಗಜರೊಂದಿಗೆ ತಾವು ಕಳೆದ ಕ್ಷಣಗಳನ್ನು ಬಲು ರಸವತ್ತಾಗಿ ಮೆಲಕು ಹಾಕಿ ಸೇರಿದ್ದ ಎಲ್ಲರ ಗಮನ ಸೆಳೆದರು.
ಗತ್ತು- ತಾಕತ್ತಿದೆ: ರತ್ನಾ ಮಣ್ಣೂರ ಅವರು ಬಿಡ್ಕರ್ ಅವರ ಡಬ್ಬಿ ತಿಂದ್ಯೋ ಇಲ್ಲೋ... ಕೃತಿಯ ಕುರಿತು ಮಾತನಾಡುತ್ತ ಬಿಡ್ಕರ್ ತಮಗೆ ತೋಚಿದ್ದನ್ನು ನೇರವಾಗಿ, ಅಷ್ಟೇ ಸೊಗಸಾಗಿ ನಿರೂಪಿಸಿದ್ದಾರೆ. ಓದುಗ ಕೃತಿ ಪುಟಗಳನ್ನು ತೆರೆದಾಗ ಓದಿಸಿಕೊಂಡು ಹೋಗುವಂತಹ ಸಂಗತಿಗಳು ಅಡಕವಾಗಿವೆ, ಓದುಗರನ್ನು ಮೊದಲ ಓದಿನಲ್ಲೇ ಸೆಳೆಯುವ ಗತ್ತು- ತಾಕತ್ತು ಬಿಡ್ಕರ್ ಕೃತಿಗಳಲ್ಲಡಗಿದೆ ಎಂದರು.
ಶೇಷಗಿರಿ ಬಿಡ್ಕರ್ ಅವರು ಗುಲ್ಬರ್ಗ ವಿವಿ ಗೌರವ ಡಾಕ್ಟರೇಟ್ ಪಡೆದ ಕೃಷ್ಣಾಜಿ ಕುಲಕರ್ಣಿ ಹಾಗೂ ನಿವೃತ್ತಿ ಹೊಂದಿರುವ ಪತ್ರಕರ್ತ ಕಾಂತಾಚಾರ್ಯ ಮಣ್ಣೂರ ಅವರನ್ನು ಸನ್ಮಾನಿಸಿದರು. ಪ್ರಶಾಂತ ಬಿಡ್ಕರ್, ಸತ್ಯನಾರಾಯಣ ಭಟ್ ಹಲ್ಕರ್ಟಿ, ಚಂದ್ರಕಾಂತ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

