ಧರ್ಮ ರಕ್ಷಣೆಗೆ ಮಠಗಳ ಕೊಡುಗೆ ಅಪಾರ
ಕ.ಪ್ರ. ವಾರ್ತೆ ್ಣ ಜೇವರ್ಗಿ ್ಣ ಫೆ.27
ಧರ್ಮ ರಕ್ಷಣೆಗೆ ಮಠಗಳ ಕೊಡುಗೆ ಅಪಾರವಾಗಿದ್ದು, ಸಮಾಜದಲ್ಲಿ ಅನೀತಿ, ಅನ್ಯಾಯ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಧರ್ಮ ರಕ್ಷಣೆಗಾಗಿ ನಾಡಿನ ಮಠಾಧೀಶರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.
ಅವರು ಇತ್ತೀಚೆಗೆ ತಾಲೂಕಿನ ರಾಸಣಗಿಯ ಅಣಿಗಿರಿಯಲ್ಲಿ ಆಯೋಜಿಸಿದ್ದ ಶ್ರೀ ಪವಾಡ ಪುರುಷ ಸಿದ್ಧಬಸವೇಶ್ವರ ಜಾತ್ರಾ ಮಹೋತ್ಸವ, ಸಿದ್ಧಬಸವೇಶ್ವರರ ನೂತನ ಸುಜ್ಞಾನ ಮಂದಿರದ ಉದ್ಘಾಟನೆ, ಪುರಾಣ ಮಂಗಲ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಮಾಜದಲ್ಲಿನ ಪ್ರತಿಯೊಬ್ಬರು ಮಠ, ಮಂದಿರಗಳು ಆಯೋಜಿಸುವ ಧರ್ಮಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು
ಅವರು ಅಭಿಪ್ರಾಯಪಟ್ಟರು.
ಶ್ಲಾಘನೀಯ: ಮಹಾತ್ಮ ಸಿದ್ಧಬಸವೇಶ್ವರರ ನೆನಪು ಅಚ್ಚಳಿಯದೆ ಉಳಿಯಲು ದೇವಸ್ಥಾನ ನಿರ್ಮಿಸಿದ ಶರಣಗೌಡ ಪಾಟೀಲ್ ಮತ್ತು ರಾಸಣಗಿ ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದು ಉಜ್ಜಯಿನಿ ಜಗದ್ಗುರು ತಿಳಿಸಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತಾಡಿದರು. ಮುಖ್ಯಅತಿಥಿಗಳಾಗಿ ಶಾಸಕ ದತ್ತಾತ್ರಯ ಪಾಟೀಲ್ ರೇವೂರ, ಶರಣಗೌಡ ಪಾಟೀಲ್ ರಾಸಣಗಿ, ರಮೇಶಬಾಬು ವಕೀಲ್, ಮಲ್ಲನಗೌಡ ನೇದಲಗಿ, ಶಿವಶರಣಪ್ಪ ಸೀರಿ, ಅಯ್ಯಣ್ಣ ಮುತ್ಯಾ, ಸಾಹೇಬಗೌಡ ಕಲ್ಲಾ, ಮಲ್ಲಿಕಾರ್ಜುನ ಅದವಾನಿ, ಶಿವಕವಿ ಜೊಗೂರ, ರಾಘವೇಂದ್ರ ಇನಾಮದಾರ ಮತ್ತಿತರರು ಇದ್ದರು.
ಕಡಗಂಚಿಯ ವೀರಭದ್ರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಗಂವ್ಹಾರದ ಸೋಪಾನನಾಥ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಆಂದೋಲಾದ ಸಿದ್ಧಲಿಂಗ ಸ್ವಾಮಿ, ಕಡಕೋಳದ ರುದ್ರಮುನಿ ಸ್ವಾಮಿ, ಶಖಾಪುರದ ಶ್ರೀ ಸಿದ್ಧರಾಮ ಶಿವಾಚಾರ್ಯ ಸೇರಿದಂತೆ ನಾಡಿನ ಮಠಾಧೀಶರುಗಳು ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

