'ರಸ್ತೆಗೆ ಸ್ಪೀಡ್ಬ್ರೆಕರ್ ಅಳವಡಿಸಿ'
ಶಹಾಪುರ: ಪಟ್ಟಣದ ಹೊಸ ಬಸ್ನಿಲ್ದಾಣದ ಎರಡು ದ್ವಾರದ ಎದುರಿನಲ್ಲಿ ಮುಖ್ಯ ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಸ್ಪೀಡ್ಬ್ರೆಕರ್ ಅಳವಡಿಸಿ ಅಪಘಾತಗಳನ್ನು ತಪ್ಪಿಸಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾಟರ್ ಆಫ್ ಇಂಡಿಯಾ ಈಶಾನ್ಯ ರಸ್ತೆ ಸಾರಿಗೆ ಘಟಕಕ್ಕೆ ಮನವಿ ಮಾಡಿದೆ.
ಈ ಕುರಿತು ತಿಳಿಸಿರುವ ಅವರು ಬೀದರ್ ಬೆಂಗಳೂರು ರಾಜ್ಯ ಹೆದ್ದಾರಿ ಇದಾಗಿರುವುದರಿಂದ ವಾಹನಗಳು ಅತಿವೇಗದಲ್ಲಿ ಚಲಿಸುತ್ತಿದ್ದು ಬಸ್ನಿಲ್ದಾಣದೊಳಗಿನಿಂದ ಬರುವ ಬಸ್ಸುಗಳು ಒಮ್ಮಲೇ ರಸ್ತೆಗೆ ಬರುವುದರಿಂದ ಅಪಘಾತದ ಅವಕಾಶಗಳು ಹೆಚ್ಚಾಗುತ್ತಿದ್ದು, ಕಳೆದ ಎರಡು ಮೂರು ತಿಂಗಳಲ್ಲಿ ಮೂರ್ನಾಲ್ಕು ಅಪಘಾತಗಳು ಸಂಭವಿಸಿವೆ. ಈಕರಸಾ ಸಾರಿಗೆ ತಕ್ಷಣವೇ ಈ ಕುರಿತು ಗಮನ ಹರಿಸಿ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಥವಾ ಹೆದ್ದಾರಿ ಪ್ರಾಧಿಕಾರದವರಿಗೆ ತಿಳಿಸಿ ಸ್ಪೀಡ್ಬ್ರೆಕರ್ ಅಳವಡಿಸಿ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ತಪ್ಪಿಸಬೇಕೆಂದು ಎಸ್ಡಿಪಿಐ ಮನವಿ ಮಾಡಿದೆ.
--
ಜಿಲ್ಲೆಯ ವಿವಿಧೆಡೆ ಸಂಭ್ರಮದ ಎಳ್ಳಮಾವಾಸ್ಯೆ
ಗುರುಮಠಕಲ್: ವರ್ಷಕ್ಕೊಮ್ಮೆ ಬರುವ ರೈತರ ಹಬ್ಬ ಎಳ್ಳಮಾವಸ್ಯೆಯನ್ನು ಗುರುಮಠಕಲ್ನ ರೈತರು ಸಂಭ್ರಮ
ಸಡಗರದಿಂದ ಆಚರಿಸಿದರು. ಬೆಳಿಗ್ಗೆ ಮನೆಯಲ್ಲಿನ ಮಹಿಳೆಯರು ಎಳ್ಳಮಾವಸ್ಯೆ ನಿಮಿತ್ತವಾಗಿ ಮಾಡಿರುವ ಹಬ್ಬದ ವಿಶೇಷ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಎತ್ತಿನ ಬಂಡಿಯಲ್ಲಿ ಸಾಗಿ ಹೊಲ ತಲುಪಿದ ನಂತರದಲ್ಲಿ ಪಾಂಡವರ ಪೂಜೆ ಮಾಡಿ, ಭೂಮಿ ತಾಯಿಯ ಪೂಜೆ ಮಾಡಿ ಬೆಳೆ ಸರಿಯಾಗಿ ಬೆಳೆದು ಸಿರಿ ಸಂಪತ್ತನು ನೀಡಲಿ ಎಂದು ಭೂಮಿ ತಾಯಿಗೆ ನಮಿಸಿದರು.
ನಂತರ ವಿಶೇಷ ತಿನಿಸುಗಳನ್ನು ಕುಟುಂಬ ಸಮೇತವಾಗಿ ಭೋಜನ ಮುಗಿಸಿ ಸಂಜೆಯವರೆಗೆ ಹೊಲದಲ್ಲಿ ಕಾಲ ಕಳೆದು ನಂತರ ತೆನೆಯನ್ನು ಮನೆಗೆ ತಂದು ದೇವರ ಮುಂದೆ ಇರಿಸಿ ಬೆಳೆ ಸರಿಯಾಗಿ ಬೆಳೆಯಲಿ ಎಂದು ಪ್ರಾರ್ಥಿಸಿದರು. ಹಬ್ಬದ ಸಂಭ್ರಮ ಮನೆಯಲ್ಲಿ ಎದ್ದು ಕಾಣುತ್ತಿತ್ತು.
ಸಂಭ್ರಮದ ಹೊಸ ವರ್ಷಾಚರಣೆ
ಶಹಾಪುರ: ಹಿರಿಯರಿಗೆ ಗೌರವ ನೀಡುತ್ತ ಶಿಸ್ತು ಮತ್ತು ಶ್ರದ್ಧೆಯಿಂದ ಆದರ್ಶ ವಿದ್ಯಾರ್ಥಿಗಳಾಗಲು ನಿರಂತರ ಪ್ರಯತ್ನ ಅಗತ್ಯವಾಗಿದೆ ಎಂದು ಹಿರಿಯ ಮುಖಂಡ ಅನಂತರಾವ ದೇಶಪಾಂಡೆ ತಿಳಿಸಿದರು.
ಪಟ್ಟಣದ ಹಳೇಪೇಟೆಯ ಜ್ಞಾನಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2014ರ ಹೊಸ ವರ್ಷಾಚರಣೆಯನ್ನು ವಿದ್ಯಾರ್ಥಿಗಳೊಂದಿಗೆ ಆಚರಿಸಿದರು.
ಪುರಸಭೆ ಸದಸ್ಯ ವಸಂತ ಸುರಪುರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೂರಲ್ಲಾ ಕೋಶ್ವಾರ, ಚಾಂದಪಾಶಾ ಗೋಗಿ, ಮತ್ತು ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಪಾಲ್ಗೊಂಡು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಚರಗದ ಸಿರಿ ನೋಡಾ...
ಕೆಂಭಾವಿ: ಗ್ರಾಮೀಣ ಸೊಗಡು ಮರೆಮಾಚುತ್ತಿರುವ ಇಂದಿನ ದಿನಗಳಲ್ಲಿ ಜನತೆ ಇಂದಿಗೂ ಎಳ್ಳ ಅಮವಾಸ್ಯೆಯಂತಹ ಹಬ್ಬ, ಹರಿದಿನಗಳನ್ನು ಹಳ್ಳಿಗರು ಬಿಟ್ಟಿಲ್ಲ. ಹೊಸ ವರ್ಷದ ಸಂಭ್ರಮದೊಂದಿಗೆ ಎಳ್ಳ ಅಮವಾಸ್ಯೆಯನ್ನು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನತೆ ಸಂಭ್ರಮದಿಂದ ಆಚರಿಸಿದರು.
ಬೆಳಗ್ಗೆ ಬಗೆ ಬಗೆಯ ಅಡುಗೆ ಮಾಡಿ ಎತ್ತಿನ ಗಾಡಿಯಲ್ಲಿ ತಮ್ಮ ಹೊಲಗಳಿಗೆ ತೆರಳಿ ಅಲ್ಲಿ ಭೂ ತಾಯಿಗೆ ಚರಗ ಚೆಲ್ಲುವ ಮೂಲಕ ಎಳ್ಳ ಅಮವಾಸ್ಯೆಯ ದಿನವನ್ನು ಆಚರಿಸಿದ ಜನತೆ ಬಂಧುಗಳು, ನೆಂಟರು, ಗೆಳೆಯರು ಸೇರಿದಂತೆ ತಮ್ಮ ಆಪ್ತರನ್ನು ಹೊಲಗಳಿಗೆ ಕರೆದು ಊಟ ಮಾಡಿಸುವ ಪದ್ಧತಿ ಇಂದಿಗೂ ಗ್ರಾಮೀಣ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

