ಗುಲ್ಬರ್ಗಾ

ಇಂದು ಶಿಕ್ಷಣ ಸಿಂಧು ಕಾಯಕ ನ್ಯೂಸ್

Published On :

ಗುಲ್ಬರ್ಗ: ಕಾಯಕ ಫೌಂಡೇಶನ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಹಳೇ ಜೇವರ್ಗಿ ರಸ್ತೆಯ ಸಿದ್ದೇಶ್ವರ ಕಲ್ಯಾಣ ಮಂಟದಲ್ಲಿ ಇಂದು ಶಿಕ್ಷಣ ಸಿಂಧು ಕಾಯಕ ನ್ಯೂಸ್ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಸಮಾರಂಭ ಉದ್ಘಾಟಿಸಿದರು. ಎಂಎಲ್ಸಿ ಅಮರನಾಥ ಪಾಟೀಲ್, ಗುವಿವಿ ದೈಹಿಕ ಶಿಕ್ಷಣ ವಿಭಾಗದ ಪ್ರಾಚಾರ್ಯ ಡಾ. ಎಂ.ಎಸ್. ಪಾಸೋಡಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾಯಕ ಫೌಂಡೇಶನ್ ಎಜ್ಯುಕೇಶನ್ ಟ್ರಸ್ಟ್  ಸಂಸ್ಥಾಪಕ ಶಿವರಾಜ ಪಾಟೀಲ್ ಅಧ್ಯಕ್ಷತೆ ವಹಿಸುವರು.
ಎಸ್ಸೆಸ್ಸೆಲ್ಸಿ:  50:50 ಯಶಸ್ವಿ ಕಾರ್ಯಕ್ರಮ
ಗುಲ್ಬರ್ಗ: ಮೈಸೂರಿನ ಅಬ್ದುಲ್ ನಜೀರ್ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಗುಲ್ಬರ್ಗ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆಯಗಳ ಪ್ರಾಯೋಜಕತ್ವ ಹಾಗೂ ಸಹಯೋಗದಲ್ಲಿ ಹೈ-ಕ ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವುದಕ್ಕಾಗಿ ಆಕಾಶವಾಣಿ ಕೇಂದ್ರ 50 ದಿನಗಳ ನೇರ ಪ್ರಸಾರದಲ್ಲಿ ಪಾಠಗಳನ್ನು ಪ್ರಸಾರ ಮಾಡುವ ಯೋಜನೆ ರೂಪಿಸಿದೆ. ಜ.6ರಿಂದ ಮಾ.14ರವರೆಗೆ ಭಾನುವಾರ ಮತ್ತು ಸರ್ಕಾರದ ರಜಾದಿನ ಹೊರತುಪಡಿಸಿ ಪ್ರತಿದಿನ ಬೆ.10.30 ರಿಂದ 11.30ರವರೆಗೆ ಪ್ರಸಾರ ಮೂಡಿಬರಲಿದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಫೋನ್ ಮೂಲಕ ಭಾಗವಹಿಸಿ ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು.  50 ದಿನಗಳ ನಿರಂತರ ಪ್ರಸಾರವಿರುವುದರಿಂದ ಕಾರ್ಯಕ್ರಮಕ್ಕೆ 50-50 ಯಶಸ್ವಿ ಎಸ್ಸೆಸ್ಸೆಲ್ಸಿ ಎಂದು ಹೆಸರಿಡಲಾಗಿದೆ.
ಇಂದು ಶಕ್ತಿ ಸಮ್ಮೇಳನ
ಗುಲ್ಬರ್ಗ: ಸ್ವಾಮಿ ವಿವೇಕಾನಂದ 150ನೇ ಜನ್ಮವರ್ಷಾಚರಣೆ ಸಮಿತಿಯು ಕೋಠಾರಿ ಭವನದಲ್ಲಿ 2ರಂದು ಬೆ.11 ಗಂಟೆಗೆ ಶಕ್ತಿ ಸಮ್ಮೇಳನ ಹಮ್ಮಿಕೊಂಡಿದೆ. ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಮಹಿಳೆ ಕುರಿತು ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹಿಕಾ ರಾಷ್ಟ್ರ ಸೇವಿಕಾ ಸಮಿತಿಯ ವಕ್ರಾರ ವೇದಾ ಕುಲ್ಕರ್ಣಿ ಉಪನ್ಯಾಸ ನೀಡಲಿದ್ದಾರೆ. ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ  ಮೀರಾ ಪಂಡಿತ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ಸಂವರ್ಧಿನಿ ಆಯಾಮ ಜಿಲ್ಲಾ ಸಂಯೋಜಕಿ ವಾಸುಕಿ ಹೇರೂರ ಹಾಗೂ ಸ್ವಾಮಿ ವಿವೇಕಾನಂದ ಸಮಿತಿ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ತಿಳಿಸಿದ್ದಾರೆ.
ಗೋವಿಂದಪ್ಪ ನಿಧನ
ಸೇಡಂ: ತಾಲೂಕಿನ ಬಟಗೇರಾ ಗ್ರಾಮದ ಗೋವಿಂದಪ್ಪ ರಾಜೊಳ್ಳಿ (78) ಅನಾರೋಗ್ಯದ ಕಾರಣ ಬುಧವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರಿಗೆ ಒಂದು ಹೆಣ್ಣು, ಎರಡು ಗಂಡು, 4 ಜನ ಮೊಮ್ಮಕ್ಕಳು ಇದ್ದಾರೆ. ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 2ಕ್ಕೆ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.