ಗುಲ್ಬರ್ಗಾ

ವಿವಿಧ ಬೇಡಿಕೆ; ಬಿಜೆಪಿ ರಸ್ತೆ ತಡೆ

Published On :

ಕ.ಪ್ರ. ವಾರ್ತೆ,ಆಳಂದ,ಜ.2
ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಸ್ಥಳೀಯ ಕಬ್ಬು ಪಡೆಯಲು ಹಿಂದೇಟು ಹಾಕಿದ ಕ್ರಮವನ್ನು ಖಂಡಿಸಿ ಭೂ ಮಾಪನಾ ಕಡತಗಳ ಶೀಘ್ರ ವಿಲೇವಾರಿ ಸೇರಿದಂತೆ ಪ್ರಮುಖ ಬೇಡಿಕೆಗೆ ಒತ್ತಾಯಿಸಿ ತಾಲೂಕು ಬಿಜೆಪಿ ಕಾರ್ಯಕರ್ತರು ಪಟ್ಟಣದ ಬಸ್ನಿಲ್ದಾಣ ಮುಂದೆ ಗುರುವಾರ ರಸ್ತೆತಡೆ ಪ್ರತಿಭಟನಾ ನಡೆಸಿದರು.
ಪಕ್ಷದ ಅಧ್ಯಕ್ಷ ರಮೇಶ ಲೋಹಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು, ರೈತರ ಕಬ್ಬು ಕಟಾವು ಮಾಡದೆ ಅನ್ಯಾಯವೆಸಗಿದ್ದಾರೆ. ನೀರಿಲ್ಲದೆ ಕಟಾವಿಗೆ ಬಂದ ಕಬ್ಬು ಒಣಗುತ್ತಿದೆ. ಕಾರ್ಖಾನೆ ಆರಂಭಗೊಂಡು ಒಂದೂವರೆ ತಿಂಗಳಾದರೂ ತಾಲೂಕಿನ ರೈತರ ಕಬ್ಬು ಪಡೆಯದೆ ಹೊರಗಿನಿಂದ ತರಿಸಿಕೊಂಡು ಮೋಸಮಾಡುತ್ತಿದೆ ಎಂದು ಆರೋಪಿಸಿದರು. ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರರ ಪರಮೇಶ್ವರ ಕೆ. ಸ್ವಾಮಿ ಅವರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಪತ್ರವನ್ನು ಕಳುಹಿಸಿಕೊಟ್ಟರು.
ಕಬ್ಬು ಸಮಸ್ಯೆ: ನಿಗದಿತ ಅವಧಿಯೊಳಗೆ ಕಬ್ಬಿನ ಬಿಲ್ ಪಾವತಿ, ಸರ್ಕಾರ ಘೋಷಿಸಿದ ರು. 2650 ರೂಪಾಯಿ ಬೆಂಬಲ ಬೆಲೆ ಹಾಗೂ ಟನ್ ಕಬ್ಬಿಗೆ 2ಕೆಜಿ ಸಕ್ಕರೆ ನೀಡಬೇಕು ಎಂದು ಒತ್ತಾಯಿಸಿದರು.
ತೊಗರಿ ಪ್ರತಿ ಕ್ವಿಂಟಾಲ್ಗೆ ರು. 5500 ಬೆಲೆ ನಿಗದಿಪಡಿಸಬೇಕು. ತಾಲೂಕಿನ ನಿಂಬರಗಾ, ಖಜೂರಿ, ಮಾದನಹಿಪ್ಪರಗಾ ಮತ್ತು ನರೋಣಾ ಹೋಬಳಿ ಕೇಂದ್ರದಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ ತೊಗರಿ ಮಂಡಳಿಗೆ ಮೂನ್ನೂರು ಕೋಟಿ ರೂಪಾಯಿ ಬಿಡುಗಡೆಗೊಳಿಸಿ, ಐದು ಲಕ್ಷ ಟನ್ ಕ್ವಿಂಟಾಲ್ ತೊಗರಿ ಮಂಡಳಿಯಿಂದ ಖರೀದಿಯಾಗಬೇಕು ಒತ್ತಾಯಿಸಿದರು.  
ರೈತರಿಗೆ ವಂಚನೆ: ತಹಸೀಲ್ದಾರ ಕಚೇರಿಯಲ್ಲಿನ ಪಹಣಿ ವಿತರಣೆ ಕೇಂದ್ರದಲ್ಲಿ ನೆರಳು ಮತ್ತು ಆಸನದ ವ್ಯವಸ್ಥೆ ಮಾಡಬೇಕು. ಭೂ ಮಾಪನಾ ಇಲಾಖೆಯಲ್ಲಿ ಕಡತ ವಿಲೆವಾರಿಯಾಗದೆ ವರ್ಷಗಟ್ಟಲೆ ಧೂಳು ನಿಂತಿವೆ. ತುರ್ತು ಕ್ರಮ ಕೈಗೊಂಡು ರೈತರಿಗೆ ಅನುಕೂಲ ಒದಗಿಸಬೇಕು. ಕೃಷಿ ಇಲಾಖೆಯಿಂದ ತಾಲೂಕಿಗೆ ಬಂದ ಸಬ್ಸಿಡಿ ಸಾಮಗ್ರಿಗಳನ್ನು ಕೃಷಿ ಇಲಾಖೆ ಅಧಿಕಾರಿಗಳ ದುರುಪಯೋಗ ಪಡೆಸಿಕೊಂಡಿದ್ದು, ರೈತರು ವಂಚನೆಗೊಳಗಾಗಿದ್ದಾರೆ ಎಂದರು.
ಎಚ್ಚರಿಕೆ ಮನವಿ ಪತ್ರವನ್ನು ಪ್ರತಿಭಟನೆ ಸಂದರ್ಭದಲ್ಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ  ಜಿಪಂ ಸದಸ್ಯೆ ಪೂಜಾ ರಮೇಶ ಲೋಹಾರ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಅಣ್ಣಾರಾವ್ ತಳಕೇರಿ, ತಾಲೂಕು ಕಾರ್ಯದರ್ಶಿ ನೀಲಕಂಠ ದಿಕ್ಸಂಗಿ, ಜಿಡಗಾ ಶಕ್ತಿಕೇಂದ್ರ ಅಧ್ಯಕ್ಷ ಧರೇಪ್ಪಾ ಕುಂಬಾರ, ಯುವ ಮೋರ್ಚಾ ಅಧ್ಯಕ್ಷ ವಿಜಯಕುಮಾರ ಕೋರೆ, ಹಿರಿಯ ಮುಖಂಡ ರೇವಣಿ ಸದ್ಧಪ್ಪಾ ಪಟ್ನೆ ಅವರು ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.