ಗುಲ್ಬರ್ಗಾ

'ಪರಿಸರ ರಕ್ಷಣೆಯಲ್ಲಿ ಸಮುದಾಯ ಪಾತ್ರ ಮುಖ್ಯ'

Published On :

ಯಾದಗಿರಿ: ಗ್ರಾಮೀಣ ಪ್ರದೇಶದ ಪರಿಸರ ರಕ್ಷಣೆಯಲ್ಲಿ ಅಲ್ಲಿನ ಸಮುದಾಯದ ಪಾತ್ರ ಮುಖ್ಯ ಎಂದು ತಾಪಂ ಮಾಜಿ ಸದಸ್ಯ ವೀರಭದ್ರಪ್ಪ ಯಡ್ಡಳ್ಳಿ ಹೇಳಿದರು.
ಯಡ್ಡಳ್ಳಿ ಗ್ರಾಮದಲ್ಲಿ ಗೌತಮ್ಮ ಬುದ್ದ ತರುಣ ಸಂಘ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿಯ ಎರಡು ಕಾಲೋನಿಗಳಿಗೆ ಅಂಬೇಡ್ಕರ್ ನಗರ ಹಾಗೂ ಗೌತಮ ಬುದ್ದ ನಗರ ಎಂಬ ನಾಮಕರಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳ್ಳಿಗಳಲ್ಲಿ ಪರಿಸರ ಬಗ್ಗೆ ಜನತೆ ನಿಷ್ಕಾಳಜಿ ವಹಿಸುತ್ತಿದ್ದಾರೆ.
ಇದರಿಂದ ಹಲವಾರು ರೋಗಗಳು ಉತ್ಪನ್ನಕ್ಕೆ ಕಾರಣವಾಗುತ್ತಿದೆ. ಕಾರಣ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಂಡು ತಮ್ಮ ಕಾಲೋನಿಗಳನ್ನು ಶುಚಿಯಾಗಿಡುವುದರ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣವಾಗಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಇಲ್ಲಿನ ಜೈಭೀಮ ತರುಣ ಸಂಘದ ಡಾ. ಅಂಬೇಡ್ಕರ್ ಯುವಜನ ಅಭಿವೃದ್ಧಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 10 ಲಕ್ಷ ಮಂಜೂರಿಯಾಗಿದೆ. ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.
ನಾಮಕರಣ ನಾಮಫಲಕ ಅನಾವರಣ ಗೊಳಿಸಿ ಮಾತನಾಡಿದ ಗ್ರಾಮದ ಶರಣಯ್ಯ ಸ್ವಾಮೀ, ಎರಡು ಕಾಲೋನಿಗಳಿಗೆ ಮಹಾತ್ಮರ ಹೆಸರಿಟ್ಟಿರುವುದು ಸಂತಸ ತಂದಿದೆ.
 ಎಲ್ಲರೂ ಅವರ ಜೀವನ ಚರಿತ್ರೆ ತಿಳಿದುಕೊಂಡು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆದಲ್ಲಿ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು.
ಗ್ರಾಮದ ಶರಣಗೌಡ ಮದ್ನಿ, ದೇವಿಂದ್ರಪ್ಪ ಜೀನಬಾವಿ, ಸಾಹೇಬಗೌಡ ಪಾಟೀಲ್, ರಾಜಕುಮಾರ ಸೊಸಳ್ಳಿ, ಭೀಮರಾಯ ಕಳ್ಳಿ, ನಭಿಸಾಬ ಮುಲ್ಲಾ, ಜಗದೇವಪ್ಪ ಮಡಿವಾಳ, ವೆಂಕಟೇಶ ಕಲಾಲ, ಸಣ್ಣ ಹಣಮಂತ ಬಂದಳ್ಳಿಕರ್ ಮುಂತಾದವರು ಇದ್ದರು.
ಕಾರ್ಯಕ್ರಮದಲ್ಲಿ ಗೌತಮ್ ಬುದ್ದ ತರುಣ ಸಂಘದ ಪದಾಧಿಕಾರಿಗಳು ಹಾಗೂ ಜನತೆ ಭಾಗವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.