ಗುಲ್ಬರ್ಗಾ

ನಾರಾಯಣ ಕುಂಬಾರಗೆ ರಾಷ್ಟ್ರೀಯ ಕಲಾ ಪುರಸ್ಕಾರ

Published On :

ಗುಲ್ಬರ್ಗ: ನಗರದ ಕಲಾವಿದ ನಾರಾಯಣ ಕುಂಬಾರ ಅವರು ಉತ್ತರ ಪ್ರದೇಶದಲ್ಲಿರುವ ಶಹರಾನಪುರ ಡೂನ್ ವ್ಯಾಲಿ ಶಾಲೆಯವರು ನಡೆಸಿರುವ ಅಖಿಲ ಭಾರತ ಕಲಾ ಸ್ಪರ್ಧೆಯಲ್ಲಿ ಪುರಸ್ಕಾರ ಪಡೆದಿದ್ದಾರೆ. ಅಕ್ರಿಲಿಕ್ ಬಣ್ಣ ಬಳಸಿ ಸಾಧು ಹೆಸರಿನ ಕಲಾಕೃತಿಗೆ ನಾರಾಯಣ ಕುಂಬಾರ ಪುರಸ್ಕಾರ ಪಡೆದಿದ್ದಾರೆ. ನಾರಾಯಣ ಕುಂಬಾರ ಬೀದರ್ ಮೂಲದವರು. ಇಲ್ಲಿನ ಕಾಲೇಜ್ ಆಫ್ ವಿಜ್ಯುವಲ್ ಆರ್ಟ್‌ನಲ್ಲಿ ಸ್ನಾತಕೋತ್ತರ ಕಲಾ ಅಧ್ಯಯನ ಮಾಡುತ್ತಿದ್ದಾರೆ. ಇದುವರೆಗೂ ಅನೇಕ ಮಹನೀಯರ, ವಿಶೇಷ ವ್ಯಕ್ತಿಗಳ ಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಮುಂಬೈ, ಬೆಂಗಳೂರು, ಚೆನ್ನೈ, ಗೋವಾ, ಕೊಚ್ಚಿ, ಮೈಸೂರು, ಗುಲ್ಬರ್ಗ ಸೇರಿದಂತೆ ಅನೇಕ ಮಹಾನಗರಗಳಲ್ಲಿ ವಿವಿಧ ಸಂಸ್ಥೆಗಳವರು ನಡೆಸಿರುವ ಕಲಾಕೃತಿ ಪ್ರದರ್ಶನದಲ್ಲಿಯೂ ನಾರಾಯಣ ಕುಂಬಾರ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.