ಗುಲ್ಬರ್ಗಾ

ಕಲ್ಯಾಣನಾಡು ಮಾಸ ಪತ್ರಿಕೆ ಲೋಕಾರ್ಪಣೆ

Published On :

ಗುಲ್ಬರ್ಗ: ಗುಲ್ಬರ್ಗದ ಹಿರಿಯ ಪತ್ರಕರ್ತ ಮಾಣಿಕರಾವ ಪಸಾರ್ ಇದೀಗ ತಮ್ಮದೇ ಸಂಪದಾಕತ್ವದ ಕಲ್ಯಾಣನಾಡು ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತರೆ ವಿಷಯಗಳ ಮೇಲೆ ಹೊಸಬೆಳಕು ಚಲ್ಲುವ ಉದ್ದೇಶದೊಂದಿಗೆ ಆರಂಭಿಸಿರುವ ಕಲ್ಯಾಣನಾಡು ಮಾಸ ಪತ್ರಿಕೆ ಭಾನುವಾರ ಇಲ್ಲಿನ ಕನ್ನಡ ಭವನದ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಲೋಕಾರ್ಪಣೆಗೊಂಡಿತು. ಹೋರಾಟಗಾರ ವೈಜನಾಥ ಪಾಟೀಲ್ ಪತ್ರಿಕೆಯನ್ನು ಬಿಡುಗಡೆ ಮಾಡಿ ಶುಭ ಕೋರಿದರು.
ಸುಲಫಲ ಮಠದ ಮಹಾಂತ ಶ್ರೀ ಸಾನ್ನಿದ್ಯ ವಹಿಸಿದ್ದರು. ರಟಕಲ್‌ನ ವಿರುಪಾಕ್ಷ ಶ್ರೀ ಆಶೀರ್ವಚನ ನೀಡಿದರು. ಹೋರಾಟಗಾರ ಎಸ್ಕೆ ಕಾಂತಾ, ಜೈಕರವೇ ಅಧ್ಯಕ್ಷ ಅರುಣ ಪಾಟೀಲ್, ಹೈ-ಕ ಜನಪರ ಸಂಘರ್ಷ ಸಮಿತಿಯ ಲಕ್ಷಣ ದಸ್ತಿ, ಹಿರಿಯ ಪತ್ರಕರ್ತ ಪಿಎಂ ಮಣ್ಣೂರ, ವಿಜಯ ತೇಗಲತಿಪ್ಪಿ ಸೇರಿದಂತೆ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಕನ್ನಡಪರ ಸಂಘಟನೆಯ ಅನೇಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಮಾಣಿಕರಾವ ಪಸಾರ್ ಅವರ ಪ್ರಯತ್ನಕ್ಕೆ ಹೈ-ಕ ಜನತೆ ಬೆಂಬಲವಾಗಿ ನಿಲ್ಲುವಂತಾಗಲಿ ಎಂದು ಸೇರಿದ್ದ ಎಲ್ಲರು ಪತ್ರಿಕೆಗೆ ಶುಭ ಕೋರಿದರು.
ಇನ್ಫೋಸಿಸ್‌ನ ವಾಸುದೇವ ದೇಶಪಾಂಡೆ, ಸಿದ್ದಲಿಂಗೇಶ್ವರ ಪ್ರಕಾಶನದ ಬಸವರಾಜ ಕೊನೆಕ್, ಸೃಜನಶೀವ ಕವಿ ಬಸವರಾಜ ನಂದೂರ್ ಅವರನ್ನು ಪತ್ರಿಕೆ ಬಿಡುಗಡೆ ಅಂಗವಾಗಿ ಸಾಧನೆಗೆ ಸನ್ಮಾನಿಸಲಾಯಿತು. ಮಾಣಿಕರಾವ ಪಸಾರ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.