ರಘುಪ್ರಿಯತೀರ್ಥರ ಮಹಾಸಮಾರಾಧನೆ
ಕೆಂಭಾವಿ: ತತ್ವಜ್ಞಾನ ಪ್ರಪಂಚದಲ್ಲಿ ಮಧ್ವಾಚಾರ್ಯರು ಅತ್ಯತ್ಕೃಷ್ಟ ಅವರ ಪರಂಪರೆಯಲ್ಲಿ ಅಕ್ಷೊಭ್ಯತೀರ್ಥರು, ಜಯತೀರ್ಥರು ಮೊದಲಾದವರು ಅದೇ ಹಾದಿಯಲ್ಲಿ ಬಂದವರು. ಇವರ ತತ್ವಜ್ಞಾನ ಪ್ರಸಾರದಲ್ಲಿ ಕೂಡಲಿ ಆರ್ಯ ಅಕ್ಷೊಭ್ಯತೀರ್ಥ ಮಠ ಮುಂಚೂಣಿಯಲ್ಲಿದೆ.
26 ವರ್ಷಗಳ ಪರ್ಯಂತ ಸಂಸ್ಥಾನವನ್ನು ನಡೆಸಿ ತಮ್ಮ ಕಾರ್ಯಕ್ಷೇತ್ರವಾದ ಶಿವಮೊಗ್ಗ ಜಿಲ್ಲೆಯ ಕೂಡಲಿ ಕ್ಷೇತ್ರದಲ್ಲಿ ವೃಂದಾವನಸ್ಥರಾಗಿದ್ದಾರೆ. ಜ. 11,12,13, ಹಾಗೂ 14ರಂದು ಇವರ ಮೂಲ ವೃಂದಾವನ ಸನ್ನಿದಿಯಾದ ಕೂಡಲಿ ಕ್ಷೇತ್ರದಲ್ಲಿ ನಮ್ಮ ಸಂಸ್ಥಾನದ ಪೀಠಾಧಿಪತಿಗಳಾದ ರಘುವಿಜಯ ತೀರ್ಥರು, ರಘುಪ್ರಿಯತೀರ್ಥರ ಮಹಾಸಮಾರಾಧನೆಯನ್ನು ನಡೆಸಲು ನಿಶ್ಚಯಿಸಿದ್ದಾರೆ.
ಈ ಸಂದರ್ಭದಲ್ಲಿ ವೃಂದಾವನಕ್ಕೆ ಅಲಂಕಾರ, ಪಂಚಾಮೃತ, ರಾಜ್ಯದ ಅನೇಕ ಪಂಡಿತರುಗಳಿಂದ ವಿದ್ವತ್ ಗೋಷ್ಠಿ, ದಾಸವಾಣಿ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸಕಲ ಭಕ್ತರು ಆಗಮಿಸಬೇಕೆಂದು ಮಠದ ದಿವಾನರು ತಿಳಿಸಿದ್ದಾರೆ.
ಕನಕರ ತತ್ವಾದರ್ಶಇಂದಿಗೂ ಪ್ರಸ್ತುತ
ಸುರಪುರ: ಭಕ್ತ ಶ್ರೇಷ್ಠ ಕನಕದಾಸರ ಕೀರ್ತನೆಗಳು, ಚಿಂತನೆಗಳು ಎಲ್ಲರಿಗೂ , ಸ್ಫೂರ್ತಿದಾಯಕ. ಅವರ ತತ್ವಾರ್ಶಗಳು ಇಂದಿಗೂ ಪ್ರಸ್ತುತ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು. ತಾಲೂಕಿನ ರಾಂಪೂರ ಗ್ರಾಮದಲ್ಲಿ ಕನಕದಾಸರ ವೃತ್ತ ಉದ್ಘಾಟಿಸಿ ಮಾತನಾಡಿ, ಕನಕದಾಸರು ಎಲ್ಲಾ ಧರ್ಮಗಳಿಂತ ಮಾನವ ಧರ್ಮ ದೊಡ್ಡದು ಎನ್ನುವ ಸಂದೇಶ ಸಾರಿದ್ದಾರೆಂದು ಹೇಳಿದರು. ಸೂಲಪ್ಪ ಕಮತಗಿ, ಡಾ. ರಾಂಪುರೆ, ಅಣ್ಣಾಜಿಗೌಡ, ಶಿವಪ್ಪಗೌಡ, ಈರಣ್ಣ ಚೌದ್ರಿ, ನಿಂಗಣ್ಣಗೌಡ, ಜೆಟ್ಟೆಪ್ಪಗೌಡ, ಮಲ್ಲಿಕಾರ್ಜುನ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

