ಗುಲ್ಬರ್ಗಾ

ಪುರಾಣ ಕಾರ್ಯಕ್ರಮ

Published On :

ಗುಲ್ಬರ್ಗ: ಆಳಂದ ತಾಲೂಕಿನ ನರೋಣ ಗ್ರಾಮದಲ್ಲಿ ಜ.12ರಂದು ಸಂಜೆ 8ಕ್ಕೆ ಚನ್ನವೀರ ವಿವಿಧೋದ್ದೇಶ ಸಮಾಜ ಸಂಘದ ವತಿಯಿಂದ  ಪುರಾಣ ನಡೆಯಲಿದೆ. ಸೊನ್ನಾಲಿಗೆ ಸಿದ್ದರಾಮೇಶ್ವರ ಸಂಗೋಳಗಿ ಪುರಾಣದ ಕಾರ್ಯಕ್ರಮ ಉದ್ಘಾಟಿಸುವರು. ಬಬಲಾದಿ ಗುರಪಾದಲಿಂಗ  ಹಾಗೂ ಮಹಾಂತ್ರಶ್ರೀಗಳು ಸಾನ್ನಿಧ್ಯ ವಹಿಸುವರು. ಗ್ರಾಮದ ಗಣ್ಯರಿಗೆ ಸನ್ಮಾನ ಹಾಗೂ ಶಾರದಾ ವಿದ್ಯಾಲಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹಣಮಂತರಾವ್ ವಿ. ಗೋಳಾ ತಿಳಿಸಿದ್ದಾರೆ.
ದತ್ತಿ ಉಪನ್ಯಾಸ
ಗುಲ್ಬರ್ಗ: ಕಲ್ಬುರ್ಗಿ ಬಸವ ಸಮಿತಿ ವತಿಯಿಂದ ಲಿಂ. ಲಕ್ಷ್ಮಮ್ಮ ಗೌಡ್ತಿ ಮತ್ತು ಲಿ. ರಾಚಣಗೌಡ ಮುದ್ನಾಳ ಸ್ಮರಣಾರ್ಥ ಜ.12ರಂದು ಸಾಯಂಕಾಲ 6ಕ್ಕೆ ಕುಸುನೂರು ರಸ್ತೆಯ ಡಾಕ್ಟರ್ಸ್ ಕಾಲೋನಿಯ ಅನುಭವಮಂಟಪದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಗನಬಸವಣ್ಣನವರು ಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ನ್ಯಾಯವಾದಿ ವಿಜಯಕುಮಾರ ಹೆರೂರ ಅಧ್ಯಕ್ಷತೆ ವಹಿಸುವರು. ವಿ.ಜಿ. ವುಮೆನ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಶಾಂತಾಮಠ ಶರಣರ ಅರುಹು ಕುರುಹಿನ ಪರಿಕಲ್ಪನೆ ಕುರಿತು ಉಪನ್ಯಾಸ ನೀಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.