ಇಂದಿನಿಂದ ಹಾಲುಮತ ಸಂಸ್ಕೃತಿ ವೈಭವ- 2014
ಶಹಾಪುರ: ದೇವದುರ್ಗ ತಾಲೂಕಿನ ಸುಕ್ಷೇತ್ರ ತಿಂಥಣಿ ಬ್ರಿಡ್ಜ್ ಹತ್ತಿರವಿರುವ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಜ.13, 14 ಮತ್ತು 15ರಂದು ಹಾಲುಮತ ಸಂಸ್ಕೃತಿ ವೈಭವ- 2014 ನಡೆಯಲಿದೆ ಎಂದು ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ತಿಳಿಸಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.13ರಿಂದ ಸಂಜೆ 7ಕ್ಕೆ ಶ್ರೀ ಇಬ್ರಾಹಿಂ ನಾ ಸುತಾರ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಕನಕಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ನೇತೃತ್ವ ವಹಿಸುವರು. ಸಂಗೀತ ಕಲಾ ಬಳಗದ ಕಲಾವಿಧರು ಭಾಗವಹಿಸುವರು.
ಇಂದು ಶಿವಬೀರದೇವರ ಮೂರ್ತಿ ಶಿಲಾನ್ಯಾಸ: ಬೆ.11ಕ್ಕೆ ಲಿಂಗಸ್ಗೂರಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಇವರಿಂದ ಕನಕ ಸಮುದಾಯ ಭವನದ ಶಿಲಾನ್ಯಾಸ, ಕನಕ ಗುರುಪೀಠದ ಮಠದಲ್ಲಿ ಮ.12ಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಕಾರ್ಯಕ್ರಮ ನೆರವೇರಿಸುವರು. ನಂತರ ಹಾಲುಮತ ಯುವಜನ ಸಮಾವೇಶದ ಸಾನ್ನಿಧ್ಯವನ್ನು ಚಿತ್ರದುರ್ಗದ ಶಿವಮೂರ್ತಿ ಮುರುಘರಾಜೇಂದ್ರ ಶರಣರು, ಶಿವಬೀರದೇವರ ಬೃಹತ್ ಮೂರ್ತಿ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸುವರು.
ಚಿಂತನಾ ಗೋಷ್ಠಿ, ಪ್ರಶಸ್ತಿ ಪ್ರದಾನ ಸಮಾರಂಭ: 14ರಂದು ಬೆ.10.30ಕ್ಕೆ ಚಿಂತನ ಗೋಷ್ಠಿ ಹಾಲುಮತ ಜಗತ್ತು, ಡಾ. ಹಾಲಪ್ಪ ಲಿಂಗದಳ್ಳಿ, ಅನೇಕ ರಾಜಕೀಯ ಮುಖಂಡರು, ಕಲಾ ತಂಡಗಳಿಂದ ಗೊರವರ ಕುಣಿತ, ಪೂಜಾ ಕುಣಿತ, ಡೊಳ್ಳಿನಪದ, ಅಕ್ಕಮಹಾದೇವಿ ನಾಟಕ ಗದಗ ಪಂಡಿತ ಪುಟ್ಟರಾಜ ಗವಾಯಿ ಕಲಾತಂಡದವರಿಂದ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಸಂಸದ ಎಚ್.ವಿಶ್ವನಾಥ, ಹಿರಿಯ ಚಲನ ಚಿತ್ರನಟಿ ಲೀಲಾವತಿ, ಶ್ರೀರಾಮ ಇಟ್ಟಣ್ಣವರ, ಪ್ರೊ. ಸುಧಾಕರ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಭಾಗವಹಿಸುವರು.
15ರಂದು ಬೆ.10.30ಕ್ಕೆ ಗೋಷ್ಠಿ ಕನಕ ಜಗತ್ತು, ಕಾ.ತ. ಚಿಕ್ಕಣ್ಣ, ಡಾ. ನಟರಾಜ ಬೂದಾಳ್, ಡಾ. ಅಶೋಕ ರಂಜೇರಿ ಆಗಮಿಸುವರು.
ಮ.12ಕ್ಕೆ ಸಂಕ್ರಾಂತಿ ಸಂಸ್ಕೃತಿ ಸಮಾವೇಶದ ಸಾನ್ನಿಧ್ಯವನ್ನು ಕೆ.ಆರ್.ನಗರದ ಶವಾನಂದಪುರಿ ಸ್ವಾಮೀಜಿ ವಹಿಸುವರು. ಹಾಸ್ಟೆಲ್ ಉದ್ಘಾಟನೆಯನ್ನು ಮಾಜಿ ಸಿಎಂ ಯಡಿಯೂರಪ್ಪನವರು ನೆರವೇರಿಸುವರು. ಸಂಸದರು, ಮಠಾಧೀಶರು, ಶಾಸಕರು, ರಾಜಕೀಯ ಮುಖಂಡರು ಸಂಗೀತ ಕಲಾವಿಧರು ಭಾಗವಹಿಸುವರು. ಸಮಾವೇಶಕ್ಕೆ ಪ್ರತಿ ದಿನ 20 ಸಾವಿರ ಜನರು ಬರುವ ನೀರಿಕ್ಷೆಯಿದೆಯಂದು ಬಸವರಾಜ ವಿಭೂತಿಹಳ್ಳಿ, ಶರಣಪ್ಪ ಸಲಾದಪೂರ, ನಿಂಗಣ್ಣ ಕೊಂಡಾಪೂರ, ಅಶೋಕ ದಿನ್ನಿ, ರವಿ ರಾಜಾಪೂರ, ಶ್ರೀಶೈಲ ನಾಗನಟಿಗಿ, ಮಾಳಪ್ಪ ಗಂಗನಾಳ, ಯಲ್ಲಾಲಿಂಗ ಕ್ಯಾತನಾಳ ಇತರರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

