ಗುಲ್ಬರ್ಗಾ

ದನ ಕಾಯುತ್ತಲೇ ಲಿಂಗ ಪೂಜಿಸಿದ ಶಿವಯೋಗಿ

Published On :

ಯಾದಗಿರಿ: ವಚನ ಪರಂಪರೆಯಲ್ಲಿ ಸೊನ್ನಲಿಗೆಯ ಸಿದ್ದರಾಮ ಅನುಭವದ ಮೇರುಗಿರಿಯನೇರಿದ ಶರಣ, ಅವರು ಬಾಲಕನಾಗಿದ್ದಗಲೇ ಭಕ್ತಿ ಪರವಶತೆಯನ್ನು ಮೆರೆಯುತ್ತಿದ್ದರು. ದನ ಕಾಯುತ್ತಲೇ ಕಲ್ಲನ್ನು ಲಿಂಗವೆಂದು ಅರ್ಚಿಸುತ್ತಿದ್ದರು ಎಂದು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಷಚಂದ್ರ ಕೌಳಗಿ ಹೇಳಿದರು.
ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಜಿಲ್ಲಾಡಳಿತದ ವತಿಯಿಂದ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಸೋಮವಾರ ವೈಭವದಿಂದ ಆಚರಿಸಲಾಯಿತು. ನಗರಸಭೆ ಪೌರಾಯುಕ್ತ ಖಾಜಾ ಮೈನೊದ್ದೀನ್ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂತೋಷದ ಸಂಗತಿ: ನಾಗಪ್ಪ ಬೆನಕಲ್ ಮಾತನಾಡಿ, ವಚನಕರ ಪರಂಪರೆಯಲ್ಲಿ ಆಗಿ ಹೋಗಿರುವ ಸಿದ್ದರಾಮ ಅವರ ಜಯಂತಿ ಆಚರಿಸುತ್ತಿರುವುದು ಸಂತೋಷದ ಸಂಗತಿ. ಇಲ್ಲಿಯವರೆಗೆ ಸಿದ್ದರಾಮರ 16, 800 ವಚನಗಳು ದೊರೆತಿವೆ ಎಂದು ತಿಳಿಸಿದರು. ಭೋವಿ (ವಡ್ಡರ) ಸಮಾಜದ ಮುಖಂಡರಾದ ನಾಗಪ್ಪ ಬೆನಕಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಕನ್ನಡ ಮತ್ತು ಸಂಸ್ಕೃಕಇಲಾಖೆಯ ಸಹಾಯಕ ನಿರ್ದೇಶಕರು, ಮಲ್ಲಯ್ಯ ದಂಡೋರ, ಭೋವಿ (ವಡ್ಡರ) ಸಮಾಜ ಉಪಾಧ್ಯಕ್ಷರಾದ ಲಕ್ಷಣ ಮುಂಡರಗಿ ಉಪಸ್ಥಿತರಿದ್ದರು. ಕನ್ನಡ ಸಂಸ್ಕೃತಿ ಇಲಾಖೆಯ ಸ. ನಿರ್ದೇಶಕ ು. ಜಗದೇಶ್ವರಿ ಸ್ವಾಗತಿಸಿದರು. ಅಮರಯ್ಯಸ್ವಾಮಿ ಚಾಲಿಬೆಂಚಿ ನಿರೂಪಿಸಿ, ವಂದಿಸಿದರು. ಸಮಾರಂಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಭೋವಿ (ವಡ್ಡರ) ಸಮಾಜ ಮುಖಂಡರು ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.