ಗುಲ್ಬರ್ಗಾ

ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ

Published On :

ಶಹಾಬಾದ್: ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ನಿಧನಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಕಾರಣ ಎಂದು ಆರೋಪಿಸಿ, ಸ್ಥಳೀಯರು ಬುಧವಾರ ವಾಡಿ ಬಂದ್‌ಗ್ ಕರೆ ನೀಡಿ, ಪ್ರತಿಭಟನೆ ನಡೆಸಿದರು. ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಆರೋಗ್ಯ ಖಾತೆ ಸಚಿವ ಶರಣಪ್ರಕಾಶ ಪಾಟೀಲ ಹಾಗೂ ಪೊಲೀಸ್ ಅಧಿಕಾರಿ ವಜೀರ್ ಅಹಮದ್ ನಿರ್ಲಕ್ಷ್ಯವೇ ಪಿಎಸ್‌ಐ ಬಂಡೆ ಸಾವಿಗೆ ಕಾರಣ ಎಂದು ದೂರಿದರು.
ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ್ದ ನೂರಾರು ಬಂಡೆ ಅಭಿಮಾನಿಗಳು, ಭೋಲೋ ಭಾರತ ಮಾತಾ ಕೀ ಜೈ ಎಂಬ ಘೋಷಣೆ ಮೊಳಗಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕಲಾಂ ಆಜಾದ್ ಚೌಕ್ ಹಾಗೂ ಶ್ರೀನಿವಾಸಗುಡಿ ಚೌಕ್‌ನಲ್ಲಿ ಸಭೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶ್ರದ್ಧಾಂಜಲಿ ಸಭೆ: ಡಾ.ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹರಿ ಗಲಾಂಡೆ, ಪುರಸಭೆ ಸದಸ್ಯರಾದ ಹರಿ ಗಲಾಂಡೆ, ಭಾಗವತ ಸುಳೆ, ಗಿರಿಮಲ್ಲಪ್ಪ ಕಟ್ಟಿಮನಿ, ಅಶೋಕ ಬಾಜೀರಾವ, ಮುಖಂಡರಾದ ನೀಲಯ್ಯ ಸ್ವಾಮಿ, ವೀರಣ್ಣ ಯಾರಿ, ಭೀಮಶಾ ಜಿರಳ್ಳಿ, ರಾಜು ಮುಕ್ಕಣ್ಣ, ರವಿ ಕಾರಬಾರಿ, ರವಿ ನಾಯಕ, ಹರಿ ಜಾಧವ, ಅಂಬಾದಾಸ ಜಾಧವ, ತುಕಾರಾಮ ರಾಠೋಡ, ಕಿಶನ್ ಜಾಧವ, ದೌಲತ ರಾವ್ ಚಿತ್ತಾಪುರಕರ, ಕರವೇ ಅಧ್ಯಕ್ಷ ಸಿದ್ದು ಪಂಚಾಳ, ಸಿದ್ದಣ್ಣ ಬಿರಾದಾರ ಮತ್ತಿತರರು ಪಾಲ್ಗೊಂಡಿದ್ದರು. ಅಂಗಡಿಗಳನ್ನು ಸ್ವಯಂ ಬಂದ್ ಮಾಡುವ ಮೂಲಕ ವ್ಯಾಪಾರಸ್ಥರು ಬಂದ್‌ಗೆ ಬೆಂಬಲ ನೀಡಿದರು. ಬಸ್ ಸಂಚಾರ ಸಾಮಾನ್ಯವಾಗಿದ್ದರೆ, ಖಾಸಗಿ ವಾಹನ ಸವಾರರು ಪರದಾಡುವಂತಾಯಿತು. ಜನರು ಬಂದ್‌ಗೆ ಸಹಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.