ಗುಲ್ಬರ್ಗಾ

ನೀರು, ನೈರ್ಮಲ್ಯ ಜಾಗೃತಿಗಾಗಿ ಬೀದಿ ನಾಟಕ

Published On :

ಶಹಾಪುರ: ಪಟ್ಟಣದ ಅಂಬೇಡ್ಕರ್ನ್‌ಗರದಲ್ಲಿ ಗ್ರಾಮೀಣಕೂಟ ಕಿರು ಹಣಕಾಸು ಸಂಸ್ಥೆ, ಬೆಂಗಳೂರು ಮತ್ತು ನವ್ಯದಿಶಾ ಸ್ವಯಂ ಸೇವಾ ಸಂಸ್ಥೆ, ಬೆಂಗಳೂರು, ಕೀರ್ತಿಕಲಾ ತಂಡದ ವತಿಯಿಂದ ನೀರು ಮತ್ತು ನೈರ್ಮಲ್ಯ ಜನಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶನಗೊಂಡಿತು. ಪಟ್ಟಣದಲ್ಲಿ ಸ್ವಚ್ಛತೆ, ಸುತ್ತಮುತ್ತಲಿನ ಪರಿಸರವನ್ನು ಸ್ವ ಚ್ಛವಾಗಿಡಲು, ಬಯಲಲ್ಲಿ ಬಹಿರ್ದೆಸೆ ಮಾಡುವುದರಿಂದ ರೋಗರುಜಿಗಳು, ಇಡೀಸ್ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಡೆಂಘೀ, ಸಾಂಕ್ರಮಿಕ ರೋಗಗಳು, ಬರಿಗಾಲಲ್ಲಿ ಓಡಾಡುವುದರಿಂದ ಆನೆಕಾಲು ರೋಗಗಳಿಗೆ  ನಿವಾಸಿಗಳು ತುತ್ತಾಗಬಹುದು ಎಂದು ತಿಳಿಸಿದರು. ನಿಂತ ನೀರು ಕುಡಿಯುವುದರಿಂದ, ಜಾನುವಾರುಗಳ ಮೈ ತೊಳೆದ ನೀರು, ಹೊಂಡದ ಕಲುಷಿತ ನೀರು ಕುಡಿಯುವುದರಿಂದ ರೋಗಾಣುಗಳು ಬರುತ್ತೇವೆ. ಶುದ್ಧವಾದ ನೀರು ಕುಡಿಯಬೇಕು ಎಂದು ಕೀರ್ತಿ ಕಲಾ ತಂಡದವರು ಹಾಡುಗಳನ್ನು ಹಾಡಿ, ನೀರು ಮತ್ತು ನೈರ್ಮಲ್ಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.
ನವ್ಯದಿಶಾ ಸ್ವಯಂ ಸೇವಾ ಸಂಸ್ಥೆಯ ನಾಮದೇವ ಚವ್ಹಾಣ, ಶಹಾಪುರ ಗ್ರಾಮೀಣ ಕೂಟದ ವ್ಯವಸ್ಥಾಪಕ ಪ್ರಕಾಶ ಎಚ್.ಕೆ. ಕೀರ್ತಿ ಕಲಾತಂಡದ ಎಚ್. ಹನುಮಂತ್ರಾಯ, ಗಂಗಾಧರ, ಹನುಮಂತಪ್ಪ, ಗುರು, ಅಮರ, ಲಕ್ಷ್ಮಿ, ಕೋಕಿಲಾ ಇದ್ದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.