ದಲಿತ ಮುಖಂಡನ ಕೊಲೆ ಖಂಡಿಸಿ ರಸ್ತೆತಡೆ
ಕ.ಪ್ರ. ವಾರ್ತೆ ಸುರಪುರ: ಜ.17
ಶಹಾಪುರ ತಾಲೂಕಿನ ಕನ್ಯಾಕೊಳ್ಳೂರು ಗ್ರಾಮದ ದಲಿತ ಮುಖಂಡ ದೇವಿಂದ್ರಪ್ಪ ದಳಪತಿ ಕೊಲೆ ಮತ್ತು ಇನ್ನುಳಿದ ದಲಿತರ ಮೇಲೆ ನಡೆದ ಮಾರಾಣಾಂತಿಕ ಹಲ್ಲೆಯನ್ನು ಖಂಡಿಸಿ ಇಲ್ಲಿಯ ದಲಿತ ಸಮಾಜ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಶನಿವಾರ ಹಸನಾಪುರದ ವೃತ್ತದ ಬಳಿ ಮಿಂಚಿನ ರಸ್ತೆತಡೆ ನಡೆಸಿ ಬೃಹತ್ ಪ್ರತಿಭಟನೆ ಮಾಡಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ದಲಿತ ಸಮಾಜ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ದುರ್ಗಪ್ಪ ಗೋಗಿಕರ್ ಹಾಗೂ ಮುಖಂಡರಾದ ಮಲ್ಲಿಕಾರ್ಜುನ ಕ್ರಾಂತಿ, ಚಂದ್ರಶೇಖರ ಜಡಿಮರಳ್, ಶರಣಪ್ಪ ದಖನಿ, ನಂದಕುಮಾರ ಬಾಂಬೇಕರ್, ಹಣಮಂತ ಕಟ್ಟಮನಿ ಇತರರು ಮಾತನಾಡಿ, ರಾಜ್ಯ ಸರ್ಕಾರದ ನಿಷ್ಕಾಳಜಿಯನ್ನು ಸಿದರು.
ಹೋರಾಟದ ಎಚ್ಚರಿಕೆ: ಯಾದಗಿರಿ ಜಿಲ್ಲಾಡಳಿತ ದಲಿತರ ಹಿತ ರಕ್ಷಣೆ ಮಾಡದೇ ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿ ವರ್ತಿಸುತ್ತಿದೆ. ಇಂಥಹ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ದಲಿತ ಸಂಘಟನೆಗಳು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ದೇವಿಂದ್ರಪ್ಪ ದಳಪತಿ ಕೊಲೆಗೈದರನ್ನು ಕೂಡಲೇ ಬಂಧಿಸಿ, ದಳಪತಿ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಘಟನೆಯಲ್ಲಿ ಹಲ್ಲೆಗೊಳಗಾದ ದಲಿತ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಬೇಕು.
ತಹಸೀಲ್ದಾರ್ ಮನವಿ: ಸುರಪುರ ತಾಲೂಕಿನ ಅಮ್ಮಾಪುರ ಗ್ರಾಮದ ಮರೆಪ್ಪ ಚಂದಪ್ಪ ಮತ್ತು ಕುಂಬಾರಪೇಟೆಯ ಗಂಗಮ್ಮ ಅವರ ಕೊಲೆ ಆರೋಪಿಗಳನ್ನು ಬಂಧಿಸಬೇಕು ಮತ್ತು ಅವರ ಕುಟುಂಬಕ್ಕೆ ತಲಾ 15 ಲಕ್ಷ ಪರಿಹಾರ ನೀಡಬೇಕು. ತಾಲೂಕಿನಲ್ಲಿ ದಲಿತರಿಗೆ ರಕ್ಷಣೆ ನೀಡಬೇಕೆಂದು ತಹಸೀಲ್ದಾರ್ ಅರುಣಕುಮಾರಗೆ ಮನವಿ ಸಲ್ಲಿಸಲಾಯಿತು.
2 ಗಂಟೆಗೂ ಅಧಿಕ ಸಮಯ ರಸ್ತೆತಡೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಶಾಲಾ-ಕಾಲೇಜು, ವ್ಯಾಪಾರ ವಹಿವಾಟು ಎಂದಿನಂತೆ ಕಾರ್ಯನಿರ್ವಹಿಸಿದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಿಎಸ್ಐಗಳಾದ ಹಣಮಂತ ಪಟ್ಟೇದ್, ಮಂಜುನಾಥ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
ಸಮಿತಿಯ ಮುಖಂಡರಾದ ಭೀಮಾಶಂಕರ ಬಿಲ್ಲವ್, ಬಸವರಾಜ ಜಡಿಮರಳ್, ಮಹೇಂದ್ರಕುಮಾರ ಬಿಲ್ಲವ್, ನಾಗಣ್ಣ ಕಲ್ಲದೇವನಹಳ್ಳಿ, ನಾಗರಾಜ ವಡಿಗೇರಿ, ದಾನಪ್ಪ ಲಕ್ಷ್ಮೀಪುರ, ಮಲ್ಲಿಕಾರ್ಜುನ ಮಂದಾಲೆ, ಶರಣಪ್ಪ ವಾಗಣಗೇರಿ, ಹಣಮಂತ ಕಟ್ಟಿಮನಿ, ಮಾನಪ್ಪ ಕರಡಕಲ್, ಬಸವಲಿಂಗಪ್ಪ ಐನಾಪುರ, ಮಾನಪ್ಪ ಬಿಜಾಸ್ಪೂರು, ರಾಹುಲ್ ಹುಲಿಮನಿ, ಮಲ್ಲಯ್ಯ ತೇಲ್ಕರ್, ರಾಮಣ್ಣ ಶೆಳ್ಳಗಿ, ಮಲ್ಲಿಕಾರ್ಜುನ ತಳ್ಳಳ್ಳಿ, ಗೋಪಾಲ ಕೃಷ್ಣಾಪುರ, ಹೈಯಾಳಪ್ಪ ಜಾಲಿಬೆಂಚಿ, ದೇವಿಂದ್ರ ಸೂಗೂರು, ಧರ್ಮರಾಜ ಇನ್ನಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

