ಗುಲ್ಬರ್ಗಾ

ಧಮ್ಮಕ್ರಾಂತಿ ಉತ್ಸವ ಸಮಾರೋಪ ಇಂದು

Published On :

ಗುಲ್ಬರ್ಗ: ಇಲ್ಲಿನ ಅಫಜಲ್ಪುರ ರಸ್ತೆಯಲ್ಲಿರುವ ದೀಕ್ಷಾಭೂಮಿ ಸಿದ್ದಾರ್ಥ ನಗರದ ಅಂಗಳದಲ್ಲಿ ಕಳೆದ ನಾಲ್ಕು ದಿನಗಳಿಂದ ಆರಂಭವಾಗಿರುವ ಧಮ್ಮ ಕ್ರಾಂತಿ ಸಮಾರಂಭದ ಸಮಾರೋಪ ಜ.19ರಂದು ನಡೆಯಲಿದೆ. ಸಮಾಜದಲ್ಲಿ ವೈಚಾರಿಕ ಕ್ರಾಂತಿ ಪತಾಕೆ ಹಾರಿಸಬೇಕು, ಜನಮನದಲ್ಲಿ ಅಂಬೇಡ್ಕರ್ ವಿಚಾರಗಳು, ಬುದ್ಧನ ತತ್ವಗಳ ಜಾಗೃತಿ ಹೆಚ್ಚಿಸಬೇಕು ಎಂಬ ಉದ್ದೇಶದೊಂದಿಗೆ ಆರಂಭವಾಗಿರುವ ಧಮ್ಮಕ್ರಾಂತಿಯ ಸಮಾರೋಪದಲ್ಲಿ ಭಂತೆ ಉಪಗುಪ್ತ, ಖಂಮೋ ಧಮ್ಮೋ, ಜ್ಞಾನಪ್ರಕಾಶ ಸ್ವಾಮಿ ಮೈಸೂರು, ಹಿರಿಯ ದಲಿತ ಮುಖಂಡರಾದ ಶಿವರಾಂ ಮೋಘಾ ಭಾಗವಹಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಪಿಡಬ್ಲೂಡಿ ಸಚಿವ ಡಾ. ಮಹಾದೇವಪ್ಪ, ಜಿಲ್ಲಾ ಉಸ್ತುವಾರಿ ಖಮರುಲ್ ಇಸ್ಲಾಂ ಭಾಗವಹಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಪ್ರ. ಕಾರ್ಯದರ್ಶಿ  ವೆಂಕಟಯ್ಯ, ಅಮರಾವತಿ ಐಪಿಎಸ್ ಅಧಿಕಾರಿ ಮಂಜುನಾಥ ಸಿಂಗೆ, ಶಿಲ್ಪಕಾರ ಟಿಎಂ ನಾಯಕ ಇವರನ್ನು ಸಮಾರಂಭದಲ್ಲಿ ಸತ್ಕರಿಸಲಾಗುತ್ತಿದೆ. ಜ.15ರಿಂದ ಆರಂಭವಾಗಿದ್ದು ನಿತ್ಯ 5 ಗಂಟೆಗಳ ಕಾಲ ವಿವಿಧ ವಿಷಯಗಳ ಮೇಲಿನ ಉಪನ್ಯಾಸಗಳು, ವೈಚಾರಿಕ ಚಿಂತನೆಗಳ ವೇದಿಕೆಯಾಗಿ ಹೊರಹೊಮ್ಮಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.