ನಿವೃತ್ತರ ಮೇಲೆ ಹೆಚ್ಚಿನ ಜವಾಬ್ದಾರಿ: ನ್ಯಾ. ಶಶಿಧರಗೌಡ
ಸುರಪುರ: ಸರ್ಕಾರಿ ಸೇವೆಯಲ್ಲಿದ್ದಾಗ ಸಮಾಜ ಸೇವೆ ಮಾಡಲಾಗುವುದಿಲ್ಲ. ನಿವೃತ್ತಿಯ ನಂತರ ಸಮಾಜ ಸೇವೆಗೆ ಸಾಕಷ್ಟು ಅವಕಾಶ ್ನಗುತ್ತದೆ. ಹೀಗಾಗಿ ನಿವೃತ್ತರ ಮೇಲೆ ಹೆಚ್ಚಿನ ಸಾಮಾಜಿಕ ಜವಾಬ್ದಾರಿ ಇದೆ ಎಂದು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಎಂ. ಶಶಿಧರಗೌಡ ಹೇಳಿದರು.
ಇಲ್ಲಿ ದರಬಾರ ಶಾಲೆಯಲ್ಲಿ ನಿವೃತ್ತ ಸರ್ಕಾರಿ ನೌಕರರ 10ನೇ ಸಮಾವೇಶ ಹಾಗೂ ನಿವೃತ್ತರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಭಾನುವಾರ ಉದ್ಘಾಟ್ನಿ ಮಾತನಾಡಿದರು.
ನಿವೃತ್ತ ಭಾವನೆ ಬೇಡ: ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದೇವೆ ಎಂದು ಭಾವಿಸುವುದು ಬೇಡ. ಸೇವಾವಧಿಯಲ್ಲಿ ಬಂದಿರುವ ಅನುಭವ ಸಮಾಜಕ್ಕೆ ವಿನಿಯೋಗಿಸಲು ನಿಮಗೆ ಅವಕಾಶವಿದೆ. ಹಿರಿಯರ ಮಾರ್ಗದರ್ಶನ ವಿಲ್ಲದೆ ಯುವಜನಾಂಗ ಅವಸರದಲ್ಲಿ ಹಾದಿ ತಪ್ಪುತ್ತಿದೆ. ಇದರಿಂದ ಸಮಾಜದಲ್ಲಾಗಲಿ ಸಾಕಷ್ಟು ಅವಗಡಗಳು ಸೃಷ್ಟಿಯಾಗುತ್ತಿವೆ. ಕಾರಣ ಕಿರಿಯರಿಗೆ ಉತ್ತಮ ಮಾರ್ಗದರ್ಶನ ಮಾಡುವ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಹೇಳಿದರು.
ಮಾರ್ಗದರ್ಶನ ನೀಡಿ: ಬಿಇಒ ಎ.ವಿ. ಕೆಂಪರಂಗಯ್ಯ ಮಾತನಾಡಿ, ನಿವೃತ್ತರಿಗೆ ನಾವು ನಿವೃತ್ತಿಯಾಗಿವೆ ಎಂಬ ಜಿಗುಪ್ಸೆ ಬೇಡ. ಸಮಯ ್ನಕ್ಕಾಗ ಸಮೀಪದ ಶಾಲೆಗಳಿಗೆ ಭೇಟಿಯಿತ್ತು ಶಿಕ್ಷಕರಿಗೆ ಮತ್ತು ಮಕ್ಕಳಿಗೂ ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡಿದರು.
ಬಸವರಾಜ ನಿಷ್ಠಿ ದೇಶಮುಖ ಅಧ್ಯಕ್ಷತೆ ವಹ್ನಿದ್ದರು. ನಿವೃತ್ತ ಅಬಕಾರಿ ಡಿವೈಎ್ನ್ಪ ಶಂಭನಗೌಡ ಕೊಡೇಕಲ್, ವೀರಸಂಗಯ್ಯಸ್ವಾಮಿ ಕೊಡೇಕಲ್, ಮಹಾದೇವಪ್ಪ ಪಟ್ಟಣಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ಉದಯ್ನಂಗ, ಶಹಪುರ ನಿವೃತ್ತ ಸಂಘದ ಅಧ್ಯಕ್ಷ ಬಸವರಾಜ ಶಿರಡ್ಡಿ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತರಾದ ರಾಮರಡ್ಡಿಗೌಡ ಬಿಜಾಸ್ಪೂರು, ಪ್ರಹ್ಲಾದಾ ಚಾರಿ ಜೋಷಿ ಕೆಂಭಾವಿ, ನಾಗಪ್ಪ ಕುಂಟೋಜಿಗೆ ಸನ್ಮಾನಿಸಲಾಯಿತು. ಬಸಪ್ಪ ಗಲಗಿನ್ ವರದಿ ವಾಚ್ನಿದರು. ವೆಂಕೋಬಚಾರಿ ಬಿರನೂರು ಸ್ವಾಗತ್ನಿದರು. ನಾಗಲಿಂಗಪ್ಪ ಶಹಪುರಕರ್ ನಿರೂಪ್ನಿದರು. ರತನ್ನಂಗ ಠಾಕೂರ್ ವಂದ್ನಿದರು.
ನಿವೃತ್ತರಿಗೆ ಕೋಣೆ ಹಸ್ತಾಂತರ: ನಿವೃತ್ತ ನೌಕರರು ಒಂದೆಡೆ ಕುಳಿತು ಚರ್ಚಿಸಲು ದರಬಾರ ಶಾಲೆಯ ಆವರಣದಲ್ಲಿರುವ ಖಾಲಿ ಕೋಠಡಿಯನ್ನು ನೀಡುವಂತೆ ಜೆಎಂಎಫ್ಸಿ ್ನವಿಲ್ ನ್ಯಾಯಾಧೀಶ ಶಶಿಧರಗೌಡ ಅವರು ಬಿಇಒಗೆ ಸೂಚ್ನಿದಾಗ ಅವರು ತಕ್ಷಣ ಒಪ್ಪಿ ಕೋಣೆಯ ಕೀಲಿಯನ್ನು ನೌಕಕರ ಸಂಘ ನೀಡಿ ಹಸ್ತಾಂತರ್ನಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

