ಸುದ್ದಿ ಸಂಕ್ಷೇಪ
ಇಂಪೇರಿಯಲ್ ಕಾಲೇಜಿನಲ್ಲಿ ಪ್ರತಿಭಾ ಪರೀಕ್ಷೆ
ಗುರುಮಠಕಲ್: ಪಟ್ಟಣದ ಇಂಪೇರಿಯಲ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಡಾ. ಅಬ್ದುಲ್ ಹಕ್ ಅವರ ಸ್ಮರಣಾರ್ಥ 10ನೇ ತರಗತಿ ಮಕ್ಕಳಿಗೆ ಪ್ರತಿಭಾ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ವಿಶೇಷವಾಗಿ ಎಸ್ಎಸ್ಎಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಅವರ ಪಠ್ಯ ಚಟುವಟಿಕೆ ವಿಷಯವನ್ನಾಧರ್ನಿ 100 ಅಂಕಗಳ ಆಯ್ಕೆ ವಿಧಾನ ಪರೀಕ್ಷೆ ನಡೆಯಿತು. ಗುರುಮಠಕಲ್ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹ್ನಿದ್ದರು. ಅನ್ವರ್ ಅಹ್ಮದ್ ಅವರು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಸಂಸ್ಥೆ ನಿರ್ದೇಶಕ ಗುಲಾಂ ಜಿಲಾನಿ, ಅಧ್ಯಕ್ಷ ಗುಲಾಂ ಸುಬಾನಿ ಇದ್ದರು.
ಸಮಾಜದ ಹೆಸರಿನಲ್ಲಿ ರಾಜಕೀಯ ಸಲ್ಲದು
ಗುರುಮಠಕಲ್: ಯಾದಗಿರಿ ಜಿಲ್ಲೆಯಲ್ಲಿಯೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೋಲಿ ಸಮಾಜದವರನ್ನು ಹೊಂದಿರುವ ಸಮಾಜದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಸ್ವಂತ ಲಾಭಕ್ಕಾಗಿ ಸಮಾಜದ ಹೆಸರನ್ನು ಬಳ್ನಕೊಳ್ಳುತ್ತಿದ್ದಾರೆ. ಈ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಗುರುಮಠಕಲ್ ಕ್ಷೇತ್ರದ ಕೋಲಿ ಸಮಾಜದ ಯುವ ಮುಖಂಡರಾದ ರವಿ ಕಂದಕೂರ ಆಕ್ರೋಶ ವ್ಯಕ್ತಪಡ್ನಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳ್ನಿ, ಸಮಾಜದ ಜನತೆಯನ್ನು ಗುಂಪುಗಾರಿಕೆ ನಡ್ನೆ, ತಮ್ಮ ರಾಜಕೀಯ ಲಾಭಕ್ಕಾಗಿ ಬಳ್ನಕೊಳ್ಳುವುದು ಸರಿಯಾದ ಪದ್ಧತಿಯಲ್ಲ. ಸಮಾಜದ ಹೆಸರಿನಲ್ಲಿ ಮುಗ್ಧ ಜನತೆಯನ್ನು ಗುಂಪುಗಾರಿಕೆ ಮಾಡಿ ಒಳಜಗಳಗಳನ್ನು ಮಾಡುವುದು, ದಿನಕ್ಕೊಂದು ಪತ್ರಿಕಾ ಹೇಳಿಕೆಗಳನ್ನು ನೀಡುತ್ತ ಜನತೆಯ ದಿಕ್ಕು ತಪ್ಪಿಸುವುದು ಸಲ್ಲದು ಎಂದರು. ಕೂಡಲೇ ರಾಜ್ಯ ಕೋಲಿ ಸಮಾಜದ ಗೌರವ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರು ಈ ಬಗ್ಗೆ ಗಮನ ಹರ್ನಿ ಸಮಾಜ ಒಡೆವ ಶಕ್ತಿಗಳನ್ನು ಸದೆಬಡಿದು ಎಲ್ಲರನ್ನು ಸಂಘಟ್ನಿ, ಕೋಲಿ ಸಮಾಜದ ಉಳಿವಿಗೆ ಪ್ರಯತ್ನ ಮಾಡಬೇಕಾಗಿದೆ ಎಂದು ಅವರು ತಿಳ್ನಿದ್ದಾರೆ.
ರೈತ ಸಂಘಕ್ಕೆ ಸೇರ್ಪಡೆ
ಸುರಪುರ: ಇಲ್ಲಿಯ ರಾಜಕೀಯ ಮುಖಂಡ ಲಕ್ಷ್ಮಣರಾವ್ ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯ ರೈತಸಂಘದ (ಹ್ನರು ಸೇನೆ) ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಮತ್ತು ಶಾಸಕ ಕೆ.ಎಸ್. ಪುಟ್ಟಣಯ್ಯ ಸಮ್ಮುಖದಲ್ಲಿ ರೈತ ಸಂಘಕ್ಕೆ ಸೇರ್ಪಡೆಗೊಂಡರು. ಯಾದಗಿರಿ ರೈತಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಉಪಾಧ್ಯಕ್ಷ ಬಸನಗೌಡ ಹೆಮ್ಮಡಗಿ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

