'ಶುದ್ಧರಾಗಿ, ಸಮಾಜ ಸುಧಾರಿಸಲು ಮುಂದಾಗಿ'
ಸೇಡಂ: ತಮ್ಮ ಜೀವನವನ್ನು ಶುದ್ಧವಾಗಿಸಿ ನಂತರ ಸಮಾಜದ ಕೊಳೆಯನ್ನು ತೊಳೆಯಲು ಮುಂದಾಗುವಂತೆ ಉಪನ್ಯಾಸಕ ಪ್ರೊ. ಬಿ. ಆರ್. ಅಣ್ಣಾಸಾಗರ ಹೇಳಿದರು. ಅಂಬಿಗರ ಚೌಡಯ್ಯನವರ ತತ್ವಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಪಟ್ಟಣದ ಸರಕಾರಿ ನೌಕರರ ಸಮುದಾಯ ಭವನದಲ್ಲಿ ವಿವಿಧ ಇಲಾಖೆಗಳು ಹಾಗೂ ತಾಲೂಕು ಕೋಲಿ ಸಮಾಜದ ವತಿಯಿಂದ ಮಂಗಳವಾರ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಚೌಡಯ್ಯ ಒಂದು ಸಮಾಜದ ಪ್ರತೀಕವಲ್ಲ. ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವ ನಿಷ್ಠುರರಾಗಿದ್ದರು. ಅನುಭವ ಮಂಟಪದಲ್ಲಿ ವಿಶ್ವಗುರು ಬಸವಣ್ಣನವರ ಅನುಯಾಯಿಯಾಗಿ, ಸಮಾಜದಲ್ಲಿನ ಬೇಧ-ಭಾವ, ಮೂಢನಂಬಿಕೆ, ಜಾತೀಯತೆ ಹೋಗಲಾಡಿಸಲು ಪಣ ತೊಟ್ಟಿದ್ದರು ಎಂದರು.
ಪ್ರಭಾರಿ ಸಹಾಯಕ ಆಯುಕ್ತ ಹಾಗೂ ತಹಸೀಲ್ದಾರ ಪ್ರಕಾಶ ಕುದರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, 12ನೇ ಶತಮಾನದಲ್ಲಿ ಚೌಡಯ್ಯನವರು ಕಾರ್ಯಗಳು ಹಾಗೂ ಕ್ರಾಂತಿಕಾರಕ ಹೆಜ್ಜೆಗಳು ಶ್ಲಾಘನೀಯ ಎಂದರು. ಕಟುಮಾತಿನಿಂದ ಅವರು ಸಮಾಜ ತಿದ್ದಿದರು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಈರಾರೆಡ್ಡಿ ಹೂವಿನಬಾವಿ, ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಸೋಮಶೇಖರ ಹೊಸ್ಮನಿ ಬಿಬ್ಬಳ್ಳಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಸಾಜೀದಾ ಬೇಗಂ, ತಾಪಂ ಅಧ್ಯಕ್ಷ ಗೋವಿಂದ ಯಾಕಂಬ್ರಿ, ಜಿಪಂ ಸದಸ್ಯ ಶ್ರೀನಾಥ ಪಿಲ್ಲಿ, ತಾಪಂ ಇಒ ದೇಶಪಾಂಡೆ ವೇದಿಕೆಯಲ್ಲಿದ್ದರು. ಎಸಿ ಕಾರ್ಯಾಲಯದ ತಹಸೀಲ್ದಾರ ದಯಾನಂದ ಪಾಟೀಲ ಸ್ವಾಗತಿಸಿದರು. ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

