ಸುದ್ದಿ ಸಂಕ್ಷೇಪ
ಹುಳುಕುಗಳನ್ನು ತೋರಿದ ಚೌಡಯ್ಯ
ಕೆಂಭಾವಿ: ಅಂಬಿಗರ ಚೌಡಯ್ಯನವರು ತಮ್ಮ ನೇರ ದಿಟ್ಟ ವಚನಗಳಿಂದ ಸಮಾಜದಲ್ಲಿನ ಹುಳುಕುಗಳನ್ನು ಹೊರಹಾಕಿದವರು. ಸಮಾಜದಲ್ಲಿನ ಡಾಂಬಿಕತೆ ಹಿಡಿಸುತ್ತಿರಲಿಲ್ಲ ಎಂದು ಪ್ರಾಂಶುಪಾಲ ರಾಜ ಶೇಖರ ಗಣಾಚಾರಿ ಹೇಳಿದರು. ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿದಲ್ಲಿ ಮಾತನಾಡಿ, ಅಂಬಿಗರ ಚೌಡಯ್ಯನವರು ತಮ್ಮ ಕಾಯಕ ಮಾಡುತ್ತಲೇ ಅನೇಕ ವಚನಗಳನ್ನು ರಚಿಸಿದವರು ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಶಾಕಸಾಬ ಸಾಸನೂರ, ಬಸವರಾಜಪ್ಪಗೌಡ ಬೊಮ್ಮನಳ್ಳಿ, ಗ್ರಾಮ ಪಂಚಾಯತಿ ಸದಸ್ಯ ತಾಹೇರ ಪಾಶಾ ಖಾಜಿ, ಮೈನುದ್ದಿನ್ ಸಾಸನೂರ, ಹನೀಫ ಕೋಕರ, ಉಪನ್ಯಾಸಕ ಎಸ್.ಎಂ. ಬೀರಾದಾರ್, ಸಂಜೀವಕುಮಾರ ದಾಮಾ, ಜೆಟ್ಟಿಂಗರಾಯ ಶಾಖಾಪುರೆ, ಬೀರಲಿಂಗ, ಬಸವರಾಜ ಬೋಸಗಿ ಸಂಜೀವ ರೂಗನ್ ಇದ್ದರು.
ಚೌಡಯ್ಯ ಜಯಂತಿ ಬಗ್ಗೆ ನಿರ್ಲಕ್ಷ್ಯ
ಕೆಂಭಾವಿ: ಪಟ್ಟಣದ ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಮಾಡದೇ ಅವಮಾನವೆಸಗಿದ್ದಾರೆಂದು ಸಂಘದ ಲಕ್ಷ್ಮಣ ಯಲಗೋಡ ಆರೋಪಿಸಿದ್ದಾರೆ. ಅಂಬಿಗರ ಚೌಡಯ್ಯ ಜಯಂತಿ ಆಚರಿಸುವಂತೆ ಸರ್ಕಾರದ ಸುತ್ತೋಲೆ ಇದ್ದರೂ ಇದನ್ನು ಪರಿಗಣಿಸದೆ ಆದೇಶವನ್ನು ಉಲ್ಲಂಘಿಸಿದ್ದಾರೆ. ಕೇಳಲು ಹೋದ ಸಂಘಟಿಕರನ್ನು ಬೆದರಿಸಿದ್ದಾರೆಂದ ಅವರು ಸರ್ಕಾರ ಆದೇಶವನ್ನು ಉಲ್ಲಂಗಿಸಿದ ಶಾಲೆಯ ಮುಖ್ಯಗುರುಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಬೈಕ್-ಲಾರಿ ಡಿಕ್ಕಿ; ಸವಾರ ಸಾವು
ಸುರಪುರ: ತಾಲೂಕಿನ ಲಕ್ಷ್ಮೀಪುರ ಗ್ರಾಮದ ಕ್ರಾಸ್ನಲ್ಲಿ ಮೋಟರ್ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮಲ್ಲಿಕಾರ್ಜುನ ಶಂಕ್ರಪ್ಪ ಕೋಲಕುಂದಿ (29) ಸ್ಥಳದಲ್ಲೆ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದೆ. ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಬೈಕ್ ಸವಾರ ಕಾಲೇಜಿನಿಂದ ಸ್ವ ಗ್ರಾಮ ಲಕ್ಷ್ಮೀಪುರಕ್ಕೆ ತೆರಳುತ್ತಿದ್ದರು. ಗುಲ್ಬರ್ಗದಿಂದ ಸುರಪುರಕ್ಕೆ ಬರುತ್ತಿದ್ದ ಲಾರಿ ಗ್ರಾಮದ ಕ್ರಾಸ್ ಬಳಿ ಬೈಕ್ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಬೈಕ್ ಹಿಂಬದಿ ಇದ್ದ ಶ್ರೀಮಂತ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆ ಗುಲ್ಬರ್ಗ ಆಸ್ಪತ್ರೆಗೆ ಕಳುಹಿಸಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತಂತೆ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

