ಗುಲ್ಬರ್ಗಾ

ಸುದ್ದಿಸಂಕ್ಷೇಪ

Published On :

ನಿಜಶರಣನ ಭವ್ಯ ಮೆರವಣಿಗೆ
ಚಿತ್ತಾಪುರ: ಅಂಬಿಗರ ಚೌಡಯ್ಯ ಜಯಂತಿ ನಿಮಿತ್ತ ಮಂಗಳವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಮೆರವಣಿಗೆಯನ್ನು ಶಾಸಕ ಪ್ರಿಯಾಂಕ್ ಖರ್ಗೆ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
  ರಥದಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರದ ಮೆರವಣಿಗೆಯನ್ನು ತಹಸೀಲ್ದಾರ್ ಕಚೇರಿಯಿಂದ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಡೊಳ್ಳು, ಬಾಜಿ, ಭಜಂತ್ರಿಗಳ ಮೂಲಕ ಜರುಗಿತು.
  ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರ, ಉಪಾಧ್ಯಕ್ಷ ನಾಗರಾಜ ಕಡಬೂರ, ಕೋಲಿ ಸಮಾಜ ತಾಲೂಕು ಅಧ್ಯಕ್ಷ ದೇವೆಂದ್ರ ತಳವಾರ, ಮುಖಂಡರಾದ ಭೀಮಣ್ಣ ಸಾಲಿ, ಅಣ್ಣಾರಾವ ಸಣ್ಣೂರಕರ್, ಬಸವರಾಜ ಚಿಮ್ಮನಳ್ಳಿ, ಮಲ್ಲಿಕಾರ್ಜುನ ಎಮ್ಮೆನೋರ, ತಮ್ಮಣ್ಣ ಡಿಗ್ಗಿ, ಮಲ್ಲಣ್ಣ ಮಾಲಗತ್ತಿ, ಶರಣಪ್ಪ ಹೊಸ್ಸೂರ್, ಕರ್ಣಪ್ಪ ಬೂನಿ, ಎಪಿಎಂಸಿ ಅಧ್ಯಕ್ಷ ಶಿವಯೋಗಿ ಸಾಹು ಗುಂಡಗುರ್ತಿ, ಉಪಾಧ್ಯಕ್ಷ ಸಂತೋಷ ಚಾಮನೂರ, ಮಹೇಶ ಜಾಯಿ, ಪುರಸಭೆ ಸದಸ್ಯ ಸುರೇಶ ಬೆನಕನಳ್ಳಿ, ದಶರಥ ದೊಡ್ಮನಿ, ಮಲ್ಲಿಕಾರ್ಜುನ ಪೂಜಾರಿ, ಸಿದ್ಧಣ್ಣ ಜಮಾದಾರ, ಶೀಲಾ ಕಾಶಿ, ಬಸಣ್ಣ ತಳವಾರ ಉಪಸ್ಥಿತರಿದ್ದರು.
ಚೌಡಯ್ಯ ಸ್ಮರಣೆಅಗತ್ಯ: ಜಮಾದಾರ
ಆಳಂದ: ಅಂಬಿಗರ ಚೌಡಯ್ಯ ಸ್ಮರಣೆ ಮತ್ತು ವಚನಗಳ ಅಧ್ಯಾಯ ಕೈಗೊಂಡರೆ ಸಮಾಜ ಸದೃಢಗೊಳ್ಳುತ್ತದೆ ಎಂದು ಕೋಲಿ ಸಮಾಜದ ಅಧ್ಯಕ್ಷ ವಿಶ್ವನಾಥ ಜಮಾದಾರ ಹೇಳಿದರು.
ತಾಲೂಕಿನ ಪಡಸಾವಳಿ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಜಯಂತಿ ನಿಮಿತ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಜಮಾದಾರ, ಸದಸ್ಯ ಧರ್ಮಣ್ಣಾ ಜಮಾದಾರ, ಶಂಭುಲಿಂಗ ಸ್ವಾಮಿ, ಶರಣಪ್ಪಾ ಜಮಾದಾರ, ತುಕಾರಾಮ ಬೆಳಮ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ವಿ.ಜಮಾದಾರ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಗ್ರಾಪಂ ಕಚೇರಿಯಲ್ಲಿ: ಗ್ರಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಸ್ಮರಣೆಯಲ್ಲಿ ಭಾವಚಿತ್ರಕ್ಕೆ ಅಧ್ಯಕ್ಷೆ ರೇಖಾ ಹಣಮಂತ ಗಾಯಕವಾಡ ಪೂಜೆ ಕೈಗೊಂಡರು. ಮಾಜಿ ಅಧ್ಯಕ್ಷ ಬಸವರಾಜ ಜಮಾದಾರ, ಮುಬಾರಕ್ ಮುಲಗೆ, ಮಹಾದೇವ ಹತ್ತಿಗಾಳೆ, ಶಿವಾನಂದ ಶಿಂಗೆ, ಧರ್ಮಣ್ಣಾ ಜಮಾದಾರ, ಗುಂಡಪ್ಪಾ ಜಮಾದಾರ, ಸೈಬಣ್ಣಾ ಜಮಾದಾರ, ಪಿಂಟು ಪಾಟೀಲ ಸೇರಿ ಅನೇಕರು ಉಪಸ್ಥಿತರಿದ್ದರು.
25ರವರೆಗೆ ಭೂಮಿ ಕಚೇರಿ ಕಾರ್ಯ ಸ್ಥಗಿತ
ಚಿಂಚೋಳಿ: ಚಿಂಚೋಳಿ ತಹಸೀಲ್ ಕಚೇರಿಯ ಭೂಮಿ ಕೇಂದ್ರದಲ್ಲಿ ಕಂಪ್ಯೂಟರ್‌ಗಳಿಗೆ ಹೊಸದಾಗಿ ಪೈಕಿ ತಂತ್ರಾಂಶ ಅಳವಡಿಸಲಾಗುತ್ತಿದೆ. ಈ ನಿಮಿತ್ತ ಜ. 25ರವರೆಗೆ ಭೂಮಿ ಶಾಖೆಯಲ್ಲಿ ಎಲ್ಲ ತರಹದ ಕೆಲಸವನ್ನು   ಸ್ಥಗಿತಗೊಳಿಸಲಾಗಿದೆ ಎಂದು ತಹಸೀಲ್ದಾರ ಮೋಹನ ಜೋಶಿ ತಿಳಿಸಿದ್ದಾರೆ.ಈ ಅವಧಿಯಲ್ಲಿ ಪಹಣಿ ನೀಡುವುದು ಮತ್ತು ಹೊಸ ಅರ್ಜಿಗಳನ್ನು ಸ್ವೀಕರಿಸುವುದು ಇರುವುದಿಲ್ಲ.  ಸಾರ್ವಜನಿಕರು ಸಹಕರಿಸಬೇಕೆಂದು ತಹಸೀಲ್ದಾರರು ಮನವಿ ಮಾಡಿದ್ದಾರೆ. ಪಹಣಿ ಪತ್ರಿಕೆಯ ಅಗತ್ಯವಿದ್ದಲ್ಲಿ ಹೋಬಳಿ ಶಾಖೆಯಲ್ಲಿ ಅಟಲಜಿ ಜನಸ್ನೇಹಿ ಕೇಂದ್ರದಲ್ಲಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಸಾಳೆ ನೇಮಕ
ಚಿಂಚೋಳಿ: ವೀರಕನ್ನಡಿಗರ ಸೇನೆಯ ಚಿಂಚೋಳಿ ತಾಲೂಕ ಘಟಕದ ಅಧ್ಯಕ್ಷರನ್ನಾಗಿ ವಿಠಲ್ ಕುಸಾಳೆ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ವೀರ ಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಭಾಸಗಿ ತಿಳಿಸಿದ್ದಾರೆ. ಕುಸಾಳೆ ಅವರು ಅಧಿಕಾರ ವಹಿಸಿಕೊಂಡು, ತಕ್ಷಣವೇ ಸಂಘಟನೆಯ ತತ್ತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕನ್ನಡ ಭಾಷೆ, ನೆಲ. ಜಲ, ಸಂಸ್ಕೃತಿ ಹಾಗೂ ಕರ್ನಾಟಕದ ಏಳಿಗೆಗಾಗಿ ಶ್ರಮಿಸಲು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.

ಇಂದು ಶಿಬಿರ
ಗುಲ್ಬರ್ಗ: ಸಾರಿಗೆ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಸೂಪರ್ ಮಾರ್ಕೆಟಿನಲ್ಲಿರುವ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಜ.23 ರಂದು ಬೆಳಗ್ಗೆ 11ಕ್ಕೆ ಚಾಲನಾ ತರಬೇತಿದಾರರ ಕೌಶಲ್ಯ ಅಭಿವೃದ್ಧಿ ಶಿಬಿರ ಏರ್ಪಡಿಸಲಾಗಿದೆ. 25 ರಂದು ಮ.12.30ಕ್ಕೆ ಜಗತ್ ವೃತ್ತದಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದವರಿಗೆ ಎನ್‌ಸಿಸಿ ಕೆಡೆಟ್, ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 27ರಂದು ಸಂಜೆ 4ಕ್ಕೆ ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭ ಜರುಗಲಿದೆ. ಅಲ್ಲದೆ ರಸ್ತೆ ಸುರಕ್ಷತೆ ಕುರಿತಂತೆ ಸಾರ್ವಜನಿಕರಿಂದ ಉತ್ತಮ ಧ್ಯೇಯ ವಾಕ್ಯಗಳನ್ನು ಆಹ್ವಾನಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.