ಕಷ್ಟಗಳಿಂದ ಮುಕ್ತಿಗೆ ಭಗವಂತನ ಜಪಿಸಿ
ಕ.ಪ್ರ. ವಾರ್ತೆ ಶಹಾಬಾದ್ ಜ.23
ಸಂಸಾರದಲ್ಲಿ ಸಾಸಿವೆ ಕಾಳಿನಷ್ಟು ಸುಖ, ಸಾಗರದಷ್ಟು ದುಃಖವನ್ನು ಪರಮಾತ್ಮ ಇಟ್ಟಿದ್ದಾನೆ. ಆ ಕಷ್ಟಗಳು ಪರಮಾತ್ಮನ ಸಾಮೀಪ್ಯದ ಕಡೆಗೆ ಕೊಂಡೊಯ್ಯುತ್ತವೆ ಎಂದು ವಾರಣಾಸಿಯ ಡಾ. ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಮುಗುಳನಾಗಾವಿ ಕಟ್ಟಿಮನಿ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರ ಪಟ್ಟಾಧಿಕಾರ ರಜತ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅಕ್ಕಮಹಾದೇವಿ ಕಷ್ಟಗಳನ್ನು ಸಹಿಸುತ್ತ ಚನ್ನಮಲ್ಲಿಕಾರ್ಜುನನ್ನು ಒಲಿಸಿಕೊಂಡಳು. ಕಷ್ಟಗಳು ಇದ್ದಾಗ ದೇವರ ಸಮೀಪಕ್ಕೆ ಹೋಗುತ್ತೇವೆ. ಆದ್ದರಿಂದ ಭಕ್ತಾದಿಗಳು ಕಷ್ಟಗಳು ಬರುವುದೆಂದು ಹೆದರದೇ ಭಗವಂತನನ್ನು ಧ್ಯಾನಿಸುವ ಮೂಲಕ ಎದುರಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಗುರುವಿಗೆ ನಮಿಸಿದರೆ ಸಂಕಷ್ಟ ದೂರ: ಮುಗುಳನಾಗಾವಿಯ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಗುರುವಿಗೆ ಎಲ್ಲಕ್ಕಿಂತ ಶ್ರೇಷ್ಠ ಸ್ಥಾನ ಕೊಟ್ಟ ಏಕೈಕ ರಾಷ್ಟ್ರವೆಂದರೆ ಭಾರತ. ಈ ದೇಶದಲ್ಲಿ ಇಂದು ಮಠಗಳು ಧರ್ಮದ ಉನ್ನತಿಗೆ ಶ್ರಮಿಸುತ್ತಿವೆ. ಇಂದು ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಕರುಣೆ ಪ್ರೀತಿ ಉಳಿದಿದ್ದೇಯಾದರೆ ಅದು ಗುರುಪರಂಪರೆಯಿಂದ. ಆದ್ದರಿಂದ ಗುರುವಿಗೆ ಪ್ರತಿಯೊಬ್ಬರೂ ತಲೆ ಬಾಗುವ ಮೂಲಕ ಜೀವನದಲ್ಲಿ ಬೆಳಕನ್ನು ಕಾಣಬಹುದೆಂದು ಹೇಳಿದರು.
ಶಾಖಾಪುರದ ಸಿದ್ಧರಾನ ಶಿವಾಚಾರ್ಯರು ಮಾತನಾಡಿದರು. ಚಿಂಚನಸೂರಿನ ಸಿದ್ಧಮಲ್ಲ ಶಿವಾಚಾರ್ಯರು, ಶೀಲವಂತ ಶರಣರು, ಹಲಕರ್ಟಿಯ ಶರಣರು, ನೇತೃತ್ವ ವಹಿಸಿದ್ದರು. ಮಾಜಿ ಸಚಿವ ರೇವುನಾಯಕ ಬೆಳಮಗಿ, ಉದ್ಯಮಿ ಸತೀಶ ಗುತ್ತೆದಾರ, ಬಸವರಾಜ ಬೀಮಳ್ಳಿ, ಶಂಭುಲಿಂಗ ಗುಂಡಗುರ್ತಿ, ಉಮಾರೆಡ್ಡಿ ಬಾಸರೆಡ್ಡಿ, ತಿಪ್ಪಣಪ್ಪ ಕಮಕನೂರ, ಈರಣ್ಣ ಸಾಹು, ರುದ್ರಗೌಡ ಪಾಟೀಲ, ರವಿಕುಮಾರ ಅಲ್ಲಂಶೆಟ್ಟಿ, ಮೃತ್ಯುಂಜಯ ಹಿರೇಮಠ, ನಾಗಣ್ಣ ರಾಂಪೂರೆ, ಶಾಂತಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

