ಗುಲ್ಬರ್ಗಾ

ಎ ಅನ್ನಾಂಗ ಪೂರಕ ಕಾರ್ಯಕ್ರಮಕ್ಕೆ ಚಾಲನೆ

Published On :

ಸುರಪುರ: ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ್ ಅವರು ಸಮೀಪದ ಕುಂಬಾರಪೇಟೆಯ ಪ್ರಾಥ       ಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ “G’ ಅನ್ನಾಂಗ ಪೂರಕ ಕಾರ್ಯಕ್ರಮದಲ್ಲಿ  ಮಗುಮೊಂದಕ್ಕೆ  ಎ ಅನ್ನಾಂಗ ದ್ರಾವಣ ಕುಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
  ಸರ್ಕಾರ ಜ. 27ರಿಂದ ಫೆಬ್ರವರಿ 10ರವರೆಗೆ ಎ ಅನ್ನಾಂಗ ಪೂರಕ ಕಾರ್ಯಕ್ರಮ ಹಮ್ಮಿಕೊಂಡಿದೆ. 9 ತಿಂಗಳ ಶಿಶುವಿಗೆ ದಡಾರ ಲಸಿಕೆ ಜೊತೆಗೆ 1 ಎಂಎಲ್‌ನಷ್ಟು ಎ ಅನ್ನಾಂಗ ದ್ರಾವಣ ಕೊಡಿಸುವುದರಿಂದ ದಡಾರ ರೋಗ ತಡೆಗಟ್ಟಿ ಅದರಿಂದ ಉಂಟಾಗುವ ವಿಟಮಿನ್ ಕೊರತೆ ಮತ್ತು ಪ್ರಾಣಾಪಾಯವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದರು.
  15 ತಿಂಗಳಿನಿಂದ ಐದು ವರ್ಷ ವಯೋವುತಿಯ ಎಲ್ಲಾ ಮಕ್ಕಳಿಗೆ, ಪ್ರತಿ ವರ್ಷ ಜನವರಿ ಮತ್ತು ಜುಲೈ ತಿಂಗಳಲ್ಲಿ ರಾಜ್ಯಾದ್ಯಂತ ವಿಟಮಿನ್ ಎ ಪೂರಕ ಕಾರ್ಯಕ್ರಮದಡಿ 2 ಎಂಎಲ್ ವಿಟಮಿನ್ ಎ ದ್ರಾವಣವನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
  1ರಿಂದ 5 ವರ್ಷ ವಯೋವುತಿಯ ಮಕ್ಕಳಿಗೆ ಸಾಮೂಹಿಕ ಜಂತು-ಕೊಕ್ಕೆ ಹುಳು ನಿವಾರಣೆಗಾಗಿ ಅಲ್ಬೆಂಡಜೋಲ್ ಮಾತ್ರೆ ನೀಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಕೊರತೆ ಕಡಿಮೆ ಮಾಡಬಹುದು. ತಾಲೂಕಿನ ಎಲ್ಲ ಆರೋಗ್ಯ ಕೇಂದ್ರ, ಉಪ ಕೇಂದ್ರ, ಅಂಗನವಾಡಿ ಕೇಂದ್ರಗಳಲ್ಲಿ ಈ ಸೌಲಭ್ಯಗಳು ಉಚಿತವಾಗಿ ದೊರೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
  ಆಯುಷ್ ವೈದ್ಯಾಧಿಕಾರಿಗಳಾದ ಡಾ.ಸಂಜಯ ಕುಲಕಣರ್, ಡಾ. ಇಮ್ತಿಯಾಜ್, ಆರೋಗ್ಯ ಸಹಾಯಕರಾದ ಅಮರಪ್ಪ, ಶಂಕರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.