ಗುಲ್ಬರ್ಗಾ

ಮುಷ್ಕರ ಕೈಬಿಡಲು ಮಾಲಕರಡ್ಡಿ ಮನವಿ

Published On :

ಯಾದಗಿರಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ನಿಯಮಗಳು 2014 ಕಾಯ್ದೆಯನ್ನು ಜಾರಿಗೊಳಿಸುವ ಮುನ್ನ ಶಾಸಕ ಮತ್ತು ರೈತ ಮತ್ತು ವರ್ತಕ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಗುವುದು ಎಂದು ಎಪಿಎಂಸಿ ಸಚಿವರು ಭರವಸೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ವರ್ತಕರು ತಮ್ಮ ಮುಷ್ಕರ ವಾಪಸ್ ಪಡೆಯಬೇಕೆಂದು ಶಾಸಕ ಡಾ. ಎ.ಬಿ. ಮಾಲಕರಡ್ಡಿ ತಿಳಿಸಿದ್ದಾರೆ.
ಜಿಲ್ಲೆಯ ಎಪಿಎಂಸಿಗಳನ್ನು ಬಂದ್ ಮಾಡಿ ವರ್ತಕರ ಮುಷ್ಕರದ ಹಾಗೂ ವರ್ತಕ ಪ್ರತಿನಿಧಿಗಳು ತಮ್ಮೊಂದಿಗೆ  ಚರ್ಚಿಸಿದ ಹಿನ್ನೆಲೆಯಲ್ಲಿ ತಾವು ಗುರುವಾರ ಬೆಂಗಳೂರಿನಲ್ಲಿ ಎಪಿಎಂಸಿ ಸಚಿವರೊಂದಿಗೆ ಚರ್ಚಿಸಿದ್ದು, ಸದ್ಯ ಇನ್ನೂ ಈ ಕಾಯ್ದೆ ರಾಜ್ಯಾದ್ಯಂತ ಜಾರಿಗೊಂಡಿಲ್ಲ. ಸದ್ಯ ಕೆಲವೊಂದು  ಎಪಿಎಂಸಿಗಳಲ್ಲಿ ಜಾರಿಯಾಗಿದೆ.
ಹಾಗೆಯೇ ಇದರ ಸಾಧಕ ಬಾಧಕ ಗಮನಿಸಿ ಉಳಿದ ಎಪಿಎಂಸಿಗಳಲ್ಲಿ ಅನುಷ್ಠಾನಗೊಳಿಸ ಲಾಗುವುದು. ಅದಕ್ಕಿಂತ ಪೂರ್ವದಲ್ಲಿ ಶಾಸಕರು, ರೈತರು, ವರ್ತಕ ಪ್ರತಿನಿಧಿಗಳೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಶಾಸಕ ಡಾ. ಎ.ಬಿ. ಮಾಲಕರಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.