ಎಪಿಎಂಸಿ: 9ನೇ ದಿನಕ್ಕೆ ಮುಷ್ಕರ
ಶಹಾಪುರ: ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಯನ್ನು ವಿರೋಧಿಸಿ ಶಹಾಪುರದ ಗಂಜ್ ವರ್ತಕರು ನಡೆಸುತ್ತಿರುವ ಮುಷ್ಕರ 9ನೇ ದಿನಕ್ಕೆ ಕಾಲಿಟ್ಟಿದೆ.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಮಾಂಗಿಲಾಲ್ ಜೈನ್, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದರಿಂದ ಹಲವು ವರ್ಷಗಳಿಂದ ಉಳಿಸಿಕೊಂಡು ಬಂದಿದ್ದ ರೈತರು ಮತ್ತು ವರ್ತಕರ ಸಂಬಂಧಕ್ಕೆ ಪೆಟ್ಟು ಬೀಳುತ್ತದೆ. ಅಲ್ಲದೆ ಇದರಿಂದ ಗಂಜ್ಗಳಲ್ಲಿ ಕೆಲಸಮಾಡುವ ಕೂಲಿಕಾರರು, ಹಮಾಲರು, ಗುಮಾಸ್ತರು ಸೇರಿದಂತೆ ಹಲವಾರು ಜನರು ನಿರುದ್ಯೋಗಿಗಳಾಗುವ ಸಂಭವ ಹೆಚ್ಚಾಗಿದೆ ಎಂದರು.
ವರ್ತಕರು ಮತ್ತು ರೈತರಿಗೆ ಮಾರಕವಾಗುವ ಕಾಯ್ದೆಯನ್ನು ಕೂಡಲೇ ಕೈಬಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ ಅವರು, ಮುಷ್ಕರ ಹೀಗೆ ಮುಂದುವರೆಯಲಿದೆ ಎಂದು ಹೇಳಿದರು.
9 ದಿನಗಳಿಂದ ನಡೆಯುತ್ತಿರುವ ಮುಷ್ಕರದಿಂದ ವ್ಯಾಪಾರ ಕಳೆ ಕಳೆದುಕೊಂಡು ಅಂಗಡಿ ಮುಗ್ಗಟ್ಟು ಬಂದಾಗಿರುವುದರಿಂದ ಬಿಕೋ ಎನ್ನುವ ವಾತಾವರಣ ನಿರ್ಮಾಣವಾಗಿದೆ.
ಮುಷ್ಕರದಲ್ಲಿ ಘೇವಾರಚಂದ್ ಜೈನ್, ಎತ್ತಿನಮನಿ ಶಂಭಣ್ಣ, ಬಸನಗೌಡ ಆಲ್ದಾಳ, ವಿಕ್ರಮ ಸಜ್ಜನಶೆಟ್ಟಿ, ಲಿಂಗನಬಸ್ಸಪ್ಪ ಚಟ್ಟಿ, ಬಸನಗೌಡ, ಶರಣುಗಾರಿಗಿ, ಗುಮಾಸ್ತರು ಪಾಲ್ಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

