ಮೊಬೈಲ್‌ನಿಂದ ಸಮಾಜದ ಸ್ವಾಸ್ಥ್ಯ ಹಾಳು
ಶಹಾಬಾದ್: ದಿನೇ ದಿನೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಇಂಥ ಪ್ರಕರಣಗಳಿಂದ ಮಾನವ ಕುಲ ತಲೆತಗ್ಗಿಸುವಂತಾಗಿದೆ. ಇಂಥ ಹೇಯ ಕೃತ್ಯಗಳು ನಡೆಯಲು ಮುಖ್ಯ ಕಾರಣ ಮೊಬೈಲ್‌ಗಳು ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಹೆಬ್ಬಾಳಕರ್ ಹೇಳಿದರು. ಭಂಕೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಾಲೆಯಲ್ಲಿ ಪಾಲಕರ, ಪೋಷಕರ, ಶಿಕ್ಷಕರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮೊಬೈಲ್‌ಗಳಲ್ಲಿ ಸುಳಿದಾಡುವ ಅಶ್ಲೀಲ ಚಿತ್ರಗಳು ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿವೆ ಎಂದರು. ಪಿಎಸ್‌ಐ ಕಪಿಲದೇವ ಮಾತನಾಡಿ, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ, ಕರೆದುಕೊಂಡು ಹೋಗಬೇಕು. ಮಕ್ಕಳ ಮೇಲೆ ನಿಗಾ ವಹಿಸಬೇಕು. ಅಹಿತಕರ ಘಟನೆ ನಡೆದರೆ ಸಮೀಪದ ಠಾಣೆಗೆ ಮಾಹಿತಿ ನೀಡಬೇಕೆಂದು ಕರೆ ನೀಡಿದರು. ಸಮೂಹ ಸಂಪನ್ಮೂಲ ವ್ಯಕ್ತ ಬಸವರಾಜ ಹೂಗಾರ, ಮುಖ್ಯಗುರುಗಳಾದ ಕಸ್ತೂರಿಬಾಯಿ, ಶಿಕ್ಷಕಿ ಸುಮಿತ್ರಾ ಇದ್ದರು. ಶಹಾಬಾದ್ ಸರ್ಕಾರಿ ಮಾದರಿ ಶಾಲೆಯ ಮುಖ್ಯ ಗುರುಗಳಾದ ಶಿವಪುತ್ರ ಕೋಣಿನ್ ಮಾತನಾಡಿದರು.
ವಿನಾಕಾರಣ ನೂಕುನುಗ್ಗಲು
ಎಬಿವಿಪಿ ಹೋರಾಟಗಾರರು ನೂರಾರು ಸಂಖ್ಯೆಯಲ್ಲಿ ಡಿಸಿ ಕಚೇರಿಗೆ ಬಂದಾಗ ಬಂದೋಬಸ್ತ್‌ನಲ್ಲಿದ್ದ ಪೊಲೀಸರು(ಮಫ್ತಿ- ಡ್ರೆಸ್) ಹೋರಾಟಗಾರರನ್ನು ನಿಯಂತ್ರಿಸಲು ಆತುರಪಟ್ಟರು. ಅದರಲ್ಲೂ ಕಾಲೇಜು ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಹೋರಾಟದಲ್ಲಿ ಮಫ್ತಿಯಲ್ಲಿದ್ದ ಕೆಲ ಪೊಲೀಸರಂತೂ ತಾವೇ ನೂಕಾಟಕ್ಕೆ ಮುಂದಾಗಿದ್ದಲ್ಲದೆ ಸೇರಿದ್ದವರಲ್ಲಿ ಹಲವರನ್ನು ತಳ್ಳಿಕೊಂಡು ಹೋದರು. ಹೋರಾಟಗಾರರು ತಮ್ಮ ಪಾಡಿಗೆ ತಾವು ಹೋರಾಟನಿರತರಾಗಿದ್ದರು. ಜಿಲ್ಲಾಧಿಕಾರಿಗಳನ್ನು ಕಂಡು ಮನವಿ ಸಲ್ಲಿಸುವುದೇ ಅವರ ಬೇಡಿಕೆಯಾಗಿತ್ತು. ಜಿಲ್ಲಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿಲ್ಲ ಎಂಬ ಮಾಹಿತಿ ಇತ್ತು. ಆದರೆ ಸ್ಥಳದಲ್ಲಿ ಬಂದೋಬಸ್ತ್ ನಿರತ ಪೊಲೀಸರು ಇದೇ ಮಾಹಿತಿಯನ್ನು ಹೋರಾಟಗಾರರಿಗೆ ಸರಿಯಾದ ರೀತಿಯಲ್ಲಿ ರವಾನಿಸಲೂ ಇಲ್ಲ. ಹೀಗಾಗಿ ಕೆಲಕಾಲ ಗೊಂದಲ- ನೂಕಾಟ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

