ಕುಂಚದಲ್ಲಿ ಅರಳಿದ ಬುದ್ಧ, ಅಂಬೇಡ್ಕರ್
ಕ.ಪ್ರ. ವಾರ್ತೆ ಯಾದಗಿರಿ ಜೂ.1
ಕಲಾವಿದರ ಕೈಯಲ್ಲಿರುವ ಕುಂಚದಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಚಿತ್ರ ಮೂಡಿ ಬರುತ್ತಿದ್ದುದ್ದು ನೋಡಲು ಚಿತ್ತಾಕರ್ಷಕವಾಗಿತ್ತು.
ಹೈದರಾಬಾದ್ ಕರ್ನಾಟಕ ಯುವ ಚಿತ್ರಕಲಾವಿದರರಿಂದ ಗೌತಮ ಬುದ್ಧ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಮೊದಲ ಬಾರಿಗೆ ಕಲಾ ನಮನವೆಂಬ ಒಂದು ದಿನದ ವಿಶೇಷ ಚಿತ್ರಕಲಾ ಶಿಬಿರ ಕಾರ್ಯಕ್ರಮವನ್ನು ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ರೇಖಾಚಿತ್ರ ಪ್ರಕಾಶನ ಕೊಂಕಲ್, ಆಯುಶಾ ಸ್ಮೃತಿ ಪ್ರಕಾಶನ, ಯಾದಗಿರಿ ಹಾಗೂ ಗುಬ್ಬಿ ಪ್ರಕಾಶನ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮದ ನಡೆಯಿತು.
ಚಿತ್ರ ಕಲಾವಿದರು: ಈ ಶಿಬಿರದಲ್ಲಿ ಗುಲ್ಬರ್ಗ ಬೀದರ್, ರಾಯಚೂರು ಸಿಂಧನೂರ, ತುಮಕೂರ ವಿಶ್ವವಿದ್ಯಾಲಯ ಯಾದಗಿರಿ ಜಿಲ್ಲೆಯ ಸ್ಥಳೀಯ 30 ಚಿತ್ರಕಲಾವಿದರು ಪಾಲ್ಗೊಂಡಿದ್ದರು.
ಕೇವಲ ಬುದ್ಧ ಅಂಬೇಡ್ಕರ್ ಅವರ ಚಿತ್ರ ಬಿಡಿಸುತ್ತಿದ್ದ ಕಲಾವಿದರ ಕುಂಚದಲ್ಲಿ ಅಭೂತಪೂರ್ವವಾಗಿ ಮೂಡುತ್ತಿದ್ದವು. ಈ ಚಿತ್ರಕಲೆಯನ್ನು ನೋಡಲು ಬಹಳಷ್ಟು ಜನ ಬಂದಿದ್ದರು.
ಬುದ್ಧ ತಪಸ್ಸು ಮಾಡುತ್ತಿರುವುದು, ಹಿತೋಪದೇಶ ಹಾಗೂ ಧರ್ಮ ಪ್ರಚಾರಕ್ಕಾಗಿ ತಮ್ಮ ಶಿಷ್ಯರೊಡನೆ ಹೊರಟಿರುವುದು. ಅಂಬೇಡ್ಕರ್ ಭೋದನೆ, ದಲಿತರ ಅಶಾಕಿರಣ ಎಂಬ ಶೀರ್ಷಿಕೆಯುಳ್ಳ ಅನೇಕ ಚಿತ್ರಗಳು ಕಂಡು ಬಂದವು.
ವೇದಿಕೆ: ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಹಾಗೂ ಚಿತ್ರಕಲಾವಿದರಿಗೆ ತಮ್ಮಲಿರುವ ಪ್ರತಿಭೆಯನ್ನು ಹೊರಹಾಕಲು ಒಂದು ವೇದಿಕೆಯಾಗಲಿದೆ ಎಂಬು ಉದ್ದೇಶದಿಂದ ಈ ಶಿಭಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಗೌರವ ಸಂಚಾಲಕ ಹಾಗೂ ಪ್ರಕಾಶಕ ಕುಪೇಂದ್ರ ವಠಾರ ಹೇಳಿದರು.
ಕಲೆಯಲ್ಲಿ ಈ ಭಾಗದ ಕಲಾವಿದರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ಯಾದಗಿರಿ ಜಿಲ್ಲೆಗೆ ಒಂದು ಆರ್ಟ್ ಗ್ಯಾಲರಿ ಬೇಕಾಗಿದೆ. ಚಿತ್ರಕಲಾವಿದರು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ, ಯಾರನ್ನಾದರೂ ಚಿತ್ರಕಲಾ ಅಕಾಡೆಮಿ ಸದಸ್ಯರನ್ನಾಗಿ ಮಾಡಬೇಕು. ಒಂದು ಆರ್ಟ್ ಗ್ಯಾಲರಿ ಸ್ಥಾಪಿಸಬೇಕು ಎಂದು ಬಸವರಾಜ್ ಎಚ್. ಕಲೆಗಾರ ಹೇಳಿದರು.
ಸಮಾರೋಪ: ಚಿತ್ರಕಲಾ ಶಿಬಿರದ ಸಮಾರೋಪ ಭಾನುವಾರ ಸಂಜೆ ನಡೆಯಿತು. ಸಾಹಿತಿ ದೇವಿಂದ್ರ ಹೆಗಡೆ ಮಾತನಾಡಿ, ಸಾಧಕರ ಜಯಂತಿಯನ್ನು ಕುಣಿದು, ಕುಪ್ಪಳಿಸಿ ಆಚರಿಸಿದರೆ ಮಾತ್ರ ಸಾಲದು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ನಾಂದಿ: ಹಂಪಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಯನ ವಿಭಾಗದ ಹಿರಿಯ ಸಹಾಯಕ ಶಿವಕುಮಾರ ಜಿ. ಮಾತನಾಡಿ, ನಾಡಿಗೆ ಮಹಾನ್ ಸಂದೇಶ ನೀಡಿದ ಮಹನೀಯರ ಜಯಂತಿಗಳನ್ನು ಆಚರಿಸಬೇಕು ಎಂಬ ಪರಿಕಲ್ಪನೆಗೆ ಯಾದಗಿರಿ ಜಿಲ್ಲೆಯ ಯುವಕರು ನಾಂದಿ ಹಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಎಸ್.ಎಸ್ ಗುಬ್ಬಿ, ಪ್ರೊ.ವೆಂಕಣ್ಣ ದೊಣ್ಣೆಗೌಡ, ಗುಲ್ಬರ್ಗ ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲ ರೆಡ್ಡಿ ಮುನ್ನೂರ, ಸಾಹಿತಿ ಡಾ. ಗಾಳೆಪ್ಪ ಪೂಜಾರ, ಕುಪೇಂದ್ರ ವಠಾರ, ನಾಗಣ್ಣ ಬಡಿಗೇರ, ನಗರಸಭಾ ಸದಸ್ಯ ಮರೆಪ್ಪ ಚೆಟ್ಟೇರಕರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

